Australia vs England T20 WC : ಮಳೆಯಿಂದಾಗಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ನಡುವಿನ ಪಂದ್ಯ ರದ್ದು

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಇಂದು ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿದೆ. ಮೆಲ್ಬರ್ನ್‌ ಮೈದಾನದಲ್ಲಿ ಈ ಪಂದ್ಯದ ಆಯೋಜನೆಯಾಗಿದ್ದು ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಈ ಪಂದ್ಯವೂ ಸಂಪೂರ್ಣವಾಗಿ ಮಳೆಗೆ ಆಹುತಿಯಾಗುವ ಸಾಧ್ಯತೆಯೂ ಇದೆ. ಸದ್ಯ ಟಾಸ್ ಪ್ರಕ್ರಿಯೆಗೂ ಅವಕಾಶ ದೊರೆತಿಲ್ಲ. ಎರಡು ಬಲಿಷ್ಠ ತಂಡಗಳ ನಡುವಿನ ಕದನಕ್ಕಾಗಿ ಅಭಿಮಾನಿಗಳು ಸಾಕಷ್ಟು ಕಾತರದಿಂದ ಕಾದಿದ್ದರು. ಆದರೆ ಮಳೆಯಿಂದಾಗಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.

ಇನ್ನು ಇದಕ್ಕೂ ಮುನ್ನ ಇದು ನಡೆಯಬೇಕಿದ್ದ ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಕೂಡ ಮಳೆಗೆ ಸಂಪೂರ್ಣ ಆಹುತಿಯಾಗಿದೆ. ಮೆಲ್ಬರ್ನ್‌ನಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಒಂದೂ ಎಸೆತ ಕಾಣದೆ ಈ ಪಂದ್ಯ ರದ್ದಾಗಿತ್ತು. ಹೀಗಾಗಿ ಎರಡು ತಂಡಗಳಿಗೂ ತಲಾ ಒಂದು ಅಂಕಗಳನ್ನು ಹಂಚಲಾಗಿದೆ.

Live ಸ್ಕೋರ್‌ಕಾರ್ಡ್ ಹೀಗಿದೆ

1
53410

PAK vs ZIM: ಪಾಕಿಸ್ತಾನ ಆಟಗಾರರ ಮುಂದೆ ಜಿಂಬಾಬ್ವೆ ತಂಡದ ವಿಜಯೋತ್ಸವ ಹೇಗಿತ್ತು ನೋಡಿ; ವಿಡಿಯೋPAK vs ZIM: ಪಾಕಿಸ್ತಾನ ಆಟಗಾರರ ಮುಂದೆ ಜಿಂಬಾಬ್ವೆ ತಂಡದ ವಿಜಯೋತ್ಸವ ಹೇಗಿತ್ತು ನೋಡಿ; ವಿಡಿಯೋ

ಸೂಪರ್ 12 ಹಂತದ ಮೊದಲ ಗುಂಪಿನಲ್ಲಿನ ಎರಡು ಬಲಿಷ್ಠ ತಂಡಗಳು ಎನಿಸಿಕೊಂಡಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಆರಂಭ ಹೇಳಿಕೊಳ್ಳುವಂತಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಈ ಎರಡು ತಂಡಗಳೂ ಪರಸ್ಪರ ಮುಖಾಮುಖಿಯಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಯಾವ ತಂಡಕ್ಕೆ ಮೇಲುಗೈ ದೊರೆಯಲಿದೆ ಎಂಬುದು ಈಗ ಅಭಿಮಾನಿಗಳ ಕುತೂಹಲ ಕೆರಳುವಂತೆ ಮಾಡಿದೆ. ಆದರೆ ಮಳೆ ಅಭಿಮಾನಿಗಳ ಕಾತರಕ್ಕೆ ತಣ್ಣೀರೆರಚುವ ಸಾಧ್ಯತೆ ದಟ್ಟವಾಗಿದೆ.

ನವಾಜ್ ಹಾಕಿದ ಚೆಂಡು ತಿರುಗಿ ಪ್ಯಾಡ್‌ಗೆ ಬಡಿದಿದ್ದರೆ ಏನಾಗುತ್ತಿತ್ತು?: ನಿವೃತ್ತಿಯ ಉತ್ತರ ಕೊಟ್ಟ ಅಶ್ವಿನ್!ನವಾಜ್ ಹಾಕಿದ ಚೆಂಡು ತಿರುಗಿ ಪ್ಯಾಡ್‌ಗೆ ಬಡಿದಿದ್ದರೆ ಏನಾಗುತ್ತಿತ್ತು?: ನಿವೃತ್ತಿಯ ಉತ್ತರ ಕೊಟ್ಟ ಅಶ್ವಿನ್!

ಇಂಗ್ಲೆಂಡ್ ಸಂಪೂರ್ಣ ಸ್ಕ್ವಾಡ್: ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ಫಿಲಿಪ್ ಸಾಲ್ಟ್, ಟೈಮಲ್ ಮಿಲ್ಸ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್

ಆಸ್ಟ್ರೇಲಿಯಾ ಸಂಪೂರ್ಣ ಸ್ಕ್ವಾಡ್: ಆರೋನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಪ್ಯಾಟ್ ಕಮ್ಮಿನ್ಸ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಕೇನ್ ರಿಚರ್ಡ್‌ಸನ್, ಆಡಮ್ ಝಂಪಾ, ಕ್ಯಾಮರೂನ್ ಗ್ರೀನ್, ಸ್ಟೀವನ್ ಸ್ಮಿತ್

For Quick Alerts
ALLOW NOTIFICATIONS
For Daily Alerts
Story first published: Friday, October 28, 2022, 13:46 [IST]
Other articles published on Oct 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X