
ಸೆಮಿಫೈನಲ್‌ಗೇರುವ ಸಾಧ್ಯತೆ 30% ಎಂದ ಕಪಿಲ್ ದೇವ್
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಅಗ್ರ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಬಹಳ ಕಡಿಮೆಯಿದೆ ಎಂದಿದ್ದಾರೆ ಮಾಜಿ ನಾಯಕ ಕಪಿಲ್ ದೇವ್. ಲಕ್ನೋದಲ್ಲಿ ಖಾಸಗಿ ಕಾರ್ಯಮವೊಂದರಲ್ಲಿ ಮಾತನಾಡಿದ ಕಪಿಲ್‌ದೇವ್ ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶಿಸುವ ಬಗ್ಗೆ ನನಗೆ ಆತಂಕವಿದೆ. ನನ್ನ ಪ್ರಕಾರ ಸೆಮಿಫೈನಲ್‌ಗೆ ಪ್ರವೇಶ ಪಡೆಯುವ ಸಾಧ್ಯತೆ ಕೇವಲ 30 ಶೇಕಡಾ ಮಾತ್ರ ಎಂದಿದ್ದಾರೆ ಕಪಿಲ್ ದೇವ್.

ಕಪಿಲ್‌ದೇವ್ ಹೇಳಿದ್ದಿಷ್ಟು!
ಟಿ20 ಮಾದರಿಯಲ್ಲಿ ಒಂದು ಪಂದ್ಯದಲ್ಲಿ ಗೆದ್ದ ತಂಡ ಮತ್ತೊಂದು ಪಂದ್ಯದಲ್ಲಿ ಸೋಲು ಅನುಭವಿಸುತ್ತದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಗೆಲ್ಲುವ ಸಾಧ್ಯತೆಯನ್ನು ಊಹಿಸುವುದು ಕಷ್ಟ. ಈಗ ಇರುವುದು ಅವರು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದ್ದಾರೆಯೇ ಎಂಬುದಾಗಿದೆ. ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆಯೇ ಎಂಬುದು ನನಗೆ ಕಳವಳ ಹುಟ್ಟಿಸಿದೆ. ಸೆಮಿಫೈನಲ್‌ಗೆ ಪ್ರವೇಶ ಪಡೆದ ಬಳಿಕವೇ ಪ್ರಶಸ್ತಿ ಗೆಲ್ಲುವ ಬಗ್ಗೆ ಮಾತನಾಡಬಹುದು. ನನ್ನ ಪ್ರಕಾರ ಈಗ ಕೇವಲ 30 ಶೇಕಡಾ ಮಾತ್ರ ಸೆಮಿಫೈನಲ್‌ಗೆ ಪ್ರವೇಶಿಸುವ ಅವಕಾಶವಿದೆ" ಎಂದಿದ್ದಾರೆ ಕಪಿಲ್ ದೇವ್.

ಹಾರ್ದಿಕ್ ಪಾಂಡ್ಯ ಬಗ್ಗೆ ಮೆಚ್ಚುಗೆಯ ಮಾತು
ಇನ್ನು ಈ ಸಂದರ್ಭದಲ್ಲಿ ಭಾರತದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಲ್ಲಿ ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಅತ್ಯಂತ ಉಪಯುಕ್ತ ಆಟಗಾರ ಎಂದಿದ್ದಾರೆ. "ತಂಡವನ್ನು ಗೆಲ್ಲಿಸಬಲ್ಲಂತಾ ಆಲ್‌ರೌಂಡರ್‌ನನ್ನು ಹೊಂದಿರುವುದು ತಂಡದ ಪಾಲಿಗೆ ಅತ್ಯಂತ ಮಹತ್ವದ್ದು. ಹಾರ್ದಿಕ್ ಪಾಂಡ್ಯರಂತಾ ಆಟಗಾರ ಭಾರತದ ಪಾಲಿಗೆ ಅತ್ಯಂತ ಉಪಯುಕ್ತ. ಆಲ್‌ರೌಂಡರ್‌ಗಳು ಯಾವುದೇ ತಂಡಕ್ಕಾದರೂ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾರೆ. ಅವರು ತಂಡಗಳಿಗೆ ಬಲವನ್ನು ತುಂಬುತ್ತಾರೆ" ಎಂದಿದ್ದಾರೆ.

ಭಾನುವಾರ ನಡೆಯಲಿದೆ ಭಾರತ ಪಾಕ್ ಪಂದ್ಯ
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳೆಲ್ಲರ ಚಿತ್ತವೂ ನೆಟ್ಟಿದ್ದು ಯಾವ ತಂಡ ಮೇಲುಗೂ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಕಳೆದ ವಿಶ್ವಕಪ್‌ನಿಂದೀಚೆಗೆ ಭಾರತದ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿಕೊಂಡು ಬರುತ್ತಿದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಮುನ್ನಡೆ ಸಾಧಿಸಲೇಬೇಕು ಎಂದು ಭಾರತ ಹಠ ತೊಟ್ಟಿದೆ.
ಟೀಮ್ ಇಂಡಿಯಾ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್


Click it and Unblock the Notifications












