ಆ ಓರ್ವ ಆಟಗಾರನಿಂದ ಇಡೀ ತಂಡಕ್ಕೆ ಆತ್ಮವಿಶ್ವಾಸ: ವಿಶ್ವಕಪ್ ಗೆಲ್ಲಬಲ್ಲ ತಂಡವನ್ನು ಹೆಸರಿಸಿದ ಮಹೇಲ ಜಯವರ್ಧನೆ

ಟಿ20 ವಿಶ್ವಕಪ್‌ನ ಆರಂಭಕ್ಕೆ ಇನ್ನು ಕೇವಲ ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಆಸ್ಟ್ರೇಲಿಯಾದಲ್ಲಿ ಈ ಬಾರಿಯ ಚುಟುಕು ವಿಶ್ವಕಪ್ ನಡೆಯುತ್ತಿರುವ ಕಾರಣದಿಂದಾಗಿ ಎಲ್ಲಾ ತಂಡಗಳು ಕೂಡ ತಮ್ಮ ಬಲಿಷ್ಠ ಆಟಗಾರರ ಪಡೆಯೊಂದಿಗೆ ಈ ಟೂರ್ನಿಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದೆ. ಈಗಾಗಲೇ ಬಹುತೇಕ ತಂಡಗಳು ತಮ್ಮ ಆಟಗಾರರ ಪಡೆಯನ್ನು ಘೋಷಣೆ ಮಾಡಿದ್ದು ಸದ್ಯ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿವೆ.
ಈ ಸಂದರ್ಭದಲ್ಲಿ ಶ್ರೀಲಂಕಾದ ದಿಗ್ಗಜ ಆಟಗಾರ ಮಾಜಿ ನಾಯಕ ಮಹೇಲ ಜಯವರ್ಧನೆ ಈ ಬಾರಿಯ ವಿಶ್ವಕಪ್‌ನಲ್ಲಿ ಬಲಿಷ್ಠವಾಗಿ ಕಣಕ್ಕಿಳಿಯುತ್ತಿರುವ ತಂಡ ಯಾವುದು ಎಂದು ಹೆಸರಿಸಿದ್ದಾರೆ. ಈ ತಂಡದಲ್ಲಿ ಓರ್ವ ಆಟಗಾರನ ಸೇರ್ಪಡೆಯಿಂದಾಗಿ ಇಡೀ ತಂಡದ ಆತ್ಮವಿಶ್ವಾಸ ಹೆಚ್ಚಾಗಿದ್ದು ವಿಶ್ವಕಪ್‌ಗೆ ಅತ್ಯಂತ ಪ್ರಬಲ ತಂಡವಾಗಿ ಕಣಕ್ಕಿಳಿಯಲಿದೆ ಎಂದಿದ್ದಾರೆ. ಈ ಮೂಲಕ ವಿಶ್ವಕಪ್ ಗೆಲ್ಲಲು ಈ ತಂಡ ಪ್ರಬಲ ಪೈಪೋಟಿ ನೀಡಲಿದೆ ಎಂದಿದ್ದಾರೆ.

ಜಯವರ್ಧನೆ ಹೇಳಿದ ಆ ತಂಡವೇ ಭಾರತ
ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮಹೇಲ ಜಯವರ್ದನೆ ಹೇಳಿದ ಆ ತಂಡ ಬೇರೆ ಯಾವುದೂ ಅಲ್ಲ, ಟೀಮ್ ಇಂಡಿಯಾ. ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಹೊರತಾಗಿಯೂ ವಿಶ್ವಕಪ್‌ಗೆ ಅತ್ಯಂತ ಬಲಿಷ್ಠವಾಗಿ ಕಣಕ್ಕಿಳಿಯುತ್ತಿದೆ ಅಲ್ಲದೆ ತಂಡಕ್ಕೆ ಓರ್ವ ಆಟಗಾರನ ಸೇರ್ಪಡೆಯಾಗಿದ್ದು ಇದು ವಿಶ್ವಕಪ್‌ನಲ್ಲಿ ಭಾರತ ತಂಡದ ಆತ್ಮವಿಶ್ವಾಸವನ್ನು ಮತ್ತೊಂದು ಹಂತ ಮೇಲಕ್ಕೆ ತೆಗೆದುಕೊಂಡು ಹೋಗಲಿದೆ ಎಂದಿದ್ದಾರೆ.

ಆ ಒಬ್ಬನಿಂದ ಆತ್ಮವಿಶ್ವಾಸ ಹೆಚ್ಚಲಿದೆ
ಈ ಸಂದರ್ಭದಲ್ಲಿ ಮಹೇಲ ಜಯವರ್ದನೆ ಟೀಮ್ ಇಂಡಿಯಾ ಬಳಗದಲ್ಲಿ ಜಸ್ಪ್ರೀತ್ ಬೂಮ್ರಾ ಸೇರ್ಪಡೆಯಾಗಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದಿದ್ದಾರೆ. "ನನ್ನ ಪ್ರಕಾರ ಭಾರತ ತಂಡ ಆಡುತ್ತಿರುವ ರೀತಿ ನೋಡಿದರೆ ಅವರಲ್ಲಿ ಕೌಶಲ್ಯ, ಪ್ರತಿಭೆ ಎಲ್ಲವೂ ಇದೆ. ಅವರಿಗೆ ಈಗ ಬ್ಯಾಟಿಂಗ್‌ನಲ್ಲಿ ಬೌಲಿಂಗ್‌ನಲ್ಲಿ ಹಾಗೂ ಫೀಲ್ಡಿಂಗ್‌ನಲ್ಲಿ ಸ್ವಲ್ಪ ಪ್ರಮಾಣದ ಆತ್ಮವಿಶ್ವಾಸ. ಈ ಸಣ್ಣ ವಿವಾರಗಳು ತಂಡಕ್ಕೆ ಹೆಚ್ಚಿನ ಬಲ ನೀಡುತ್ತದೆ. ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಸೇರ್ಪಡೆಯಾಗಿರುವ ಕಾರಣ ತಂಡದ ಆತ್ಮವಿಶ್ವಾಸ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ"ಎಂದಿದ್ದಾರೆ ಮಹೇಲ ಜಯವರ್ದನೆ.

ರವೀಂದ್ರ ಜಡೇಜಾ ಅಲಭ್ಯತೆ ಭಾರತಕ್ಕೆ ಹಿನ್ನಡೆ
ಇನ್ನು ಇದೇ ಸಂದರ್ಭದಲ್ಲಿ ಭಾರತದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಟಿ20 ವಿಶ್ವಕಪ್‌ಗೆ ಗಾಯದ ಕಾರಣದಿಂದಾಗಿ ಅಲಭ್ಯವಾಗಿರುವುದು ಹಿನ್ನಡೆಯಾಗಬಹುದು ಎಂದಿದ್ದಾರೆ. ಪವರ್ ಹಿಟ್ಟಿಂಗ್ ಬ್ಯಾಟರ್ ಹಾಗೂ ವಿಕೆಟ್ ಪಡೆಯುವಂತಾ ಬೌಲರ್ ಆಗಿರುವ ಕಾರಣದಿಂದಾಗಿ ಜಡೇಜಾ ಇರುವಿಕೆ ತಂಡದಲ್ಲಿ ಅದ್ಭುತವಾದ ಹೊಂದಾಣಿಕೆಗೆ ಕಾರಣವಾಗುತ್ತಿತ್ತು ಎಂದಿರುವ ಜಯವರ್ಧನೆ ಜಡೇಜಾ ಹೊರತಾಗಿಯೂ ಭಾರತ ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಎಂದಿದ್ದಾರೆ. ಇನ್ನು ಜಡೇಜಾ ಅಲಭ್ಯತೆಯಿಂದಾಗಿ ಎಡಗೈ ಬ್ಯಾಟರ್‌ನ ಕೊರತೆ ಕೂಡ ತಂಡಕ್ಕೆ ಉಂಟಾಗಲಿದ್ದು ಇದರಿಂದಾಗಿ ದಿನೇಶ್ ಕಾರ್ತಿಕ್ ಹೊರಗುಳಿದು ರಿಷಭ್ ಪಂತ್‌ಗೆ ಅವಕಾಶವೂ ದೊರೆಯಬಹುದು ಎಂದಿದ್ದಾರೆ.

ಕೊಹ್ಲಿ ಪ್ರದರ್ಶನದಿಂದ ಎದುರಾಳಿಗಳಿಗೆ ಆತಂಕ
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆಯೂ ಜಯವರ್ದನೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಯ ಇತ್ತೀಚಿನ ಫಾರ್ಮ್ ಎದುರಾಳಿಗಳಿಗೆ ಸಹಜವಾಗಿಯೇ ಆತಂಕ ಸೃಷ್ಟಿಸಿರುತ್ತದೆ ಎಂದು ಜಯವರ್ದನೆ ಹೇಳಿದ್ದಾರೆ. ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಅದ್ಭುತ ಪ್ರದರ್ಶನ ನಿಡಿದ್ದು ಎರಡು ಅರ್ಧ ಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ. ಅಪ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 122 ರನ್‌ಗಳಿಸಿದ ಕೊಹ್ಲಿ ಸುದೀರ್ಘ 1020ದಿನಗಳ ಬಳಿಕ ಶತಜಕವನ್ನು ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಶತಕದ ಬರವನ್ನು ನೀಗಿಸಿರುವ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ವಿಶ್ವಕಪ್‌ನಲ್ಲಿಯೂ ಇಂಥಾದ್ದೇ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications