Sl Vs Ned: ಅಂತೂ ಮುಂದಿನ ಸುತ್ತಿಗೆ ಪ್ರವೇಶ ಪಡೆದು ಮುಖಭಂಗ ತಪ್ಪಿಸಿಕೊಂಡ ಲಂಕನ್ನರು

2022 ರ ಐಸಿಸಿ ಪುರುಷರ T20 ವಿಶ್ವಕಪ್‌ನ 9 ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 16 ರನ್‌ಗಳ ಜಯ ಸಾಧಿಸುವ ಮೂಲಕ ಶ್ರೀಲಂಕಾ ಸೂಪರ್ 12 ಹಂತಕ್ಕೆ ಪ್ರವೇಶಿಸಿದೆ. ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ವಿಕೆಟ್ ಕೀಪರ್ ಬ್ಯಾಟರ್ ಕುಶಾಲ್ ಮೆಂಡಿಸ್, ಚರಿತ್ ಅಸಲಂಕ, ಬಾನುಕಾ ರಾಜಪಕ್ಸೆ ಆಟದ ನೆರವಿನಿಂದ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಬ್ಯಾಟಿಂಗ್ ಮಾಡಲು ಕಷ್ಟಕರವಾದ ಪಿಚ್‌ನಲ್ಲಿ ಕುಶಾಲ್ ಮೆಂಡಿಸ್ ಜವಾಬ್ದಾರಿಯುತ ಆಟವಾಡಿದರು.
44 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 79 ರನ್ ಗಳಿಸಿರು. ಚರಿತ್ ಅಸಲಂಕ 30 ಎಸೆತಗಳಲ್ಲಿ 31 ರನ್ ಗಳಿಸಿದರು. ರಾಜಪಕ್ಸೆ 13 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು. ನೆದರ್ಲ್ಯಾಂಡ್ಸ್ ಪರವಾಗಿ ಬಾಸ್ ಡಿ ಲೀಡೆ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ ಎರಡು ವಿಕೆಟ್ ಪಡೆದ ಶ್ರೀಲಂಕಾ ರನ್ ಗಳಿಕೆಗೆ ಕಡಿವಾಣ ಹಾಕಿದರು.

ಮ್ಯಾಕ್ಸ್ ಓಡೌಡ್ ಏಕಾಂಗಿ ಹೋರಾಟ
163 ರನ್‌ಗಳ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ವಿಕ್ರಮಜಿತ್ ಸಿಂಗ್ 14 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಔಟಾದರು. ಮತ್ತೊಬ್ಬ ಆರಂಭಿಕ ಆಟಗಾರ ಮ್ಯಾಕ್ಸ್ ಓಡೌಡ್ ಕೊನೆಯವರೆಗೂ ಏಕಾಂಗಿ ಹೋರಾಟ ಮಾಡಿದರು. ಆದರೆ ಅವರಿಗೆ ಯಾವೊಬ್ಬ ಬ್ಯಾಟರ್ ಕೂಡ ಸರಿಯಾಗಿ ಸಾಥ್ ನೀಡಲಿಲ್ಲ. 53 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 71 ರನ್ ಗಳಿಸಿ ಅಜೇಯರಾಗಿ ಉಳಿದರು.
ಆದರೂ ನೆದರ್ಲ್ಯಾಂಡ್ಸ್ ಅಂತಿಮವಾಗಿ 16 ರನ್‌ಗಳ ಸೋಲೊಪ್ಪಿಕೊಂಡಿತು. ಶ್ರೀಲಂಕಾ ಪರವಾಗಿ ಸ್ಪಿನ್ನರ್ ವನಿಂದು ಹಸರಂಗ 4 ಓವರ್ ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು. ಮಹೀಶ್ ತೀಕ್ಷಣ 4 ಓವರ್ ಗಳಲ್ಲಿ 32 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕುಶಾಲ್ ಮೆಂಡಿಸ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.
T20 World Cup: ಆಸ್ಟ್ರೇಲಿಯಾಕ್ಕೆ ಗಾಯದ ಬರೆ; ಟಿ20 ವಿಶ್ವಕಪ್‌ನಿಂದ ಮೀಸಲು ವಿಕೆಟ್ ಕೀಪರ್ ಔಟ್

ಸೂಪರ್ 12 ಸುತ್ತಿಗೆ ಶ್ರೀಲಂಕಾ
ಯುಎಇ ವಿರುದ್ಧದ ಪಂದ್ಯದಲ್ಲಿ ನಮೀಬಿಯಾ ಜಯ ಸಾಧಿಸಿದರೆ, ಶ್ರೀಲಂಕಾ ಎರಡನೇ ಸ್ಥಾನದಲ್ಲಿ ಸೂಪರ್ 12 ಹಂತಕ್ಕೆ ಪ್ರವೇಶಿಸಲಿದೆ. ಒಂದು ವೇಳೆ ನಮೀಬಿಯಾ ಸೋತರೆ, ಅಂಕಪಟ್ಟಿಯಲ್ಲಿ ಶ್ರೀಲಂಕಾ ಮೊದಲನೇ ಸ್ಥಾನ ಮತ್ತು ನೆದರ್ಲ್ಯಾಂಡ್ಸ್ ಎರಡನೇ ಸ್ಥಾನ ಪಡೆಯುವ ಮೂಲಕ ಎರಡೂ ತಂಡಗಳು ಸೂಪರ್ 12 ಸುತ್ತು ಪ್ರವೇಶಿಸಲಿವೆ.
ಒಂದು ವೇಳೆ ನಮೀಬಿಯಾ ಯುಎಇ ವಿರುದ್ಧ ಜಯಗಳಿಸಿದರೆ ನೆದರ್ಲ್ಯಾಂಡ್ಸ್ ಯುಎಇ ಜೊತೆಗೆ ಟೂರ್ನಿಯಿಂದ ಹೊರಬೀಳಲಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ : ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ಡಬ್ಲ್ಯೂ), ಧನಂಜಯ ಡಿ ಸಿಲ್ವ, ಭಾನುಕ ರಾಜಪಕ್ಸೆ, ಚರಿತ್ ಅಸಲಂಕಾ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಲಹಿರು ಕುಮಾರ, ಮಹೇಶ್ ತೀಕ್ಷಣ, ಬಿನೂರ ಫೆರ್ನಾಂಡೊ
ನೆದರ್ಲ್ಯಾಂಡ್ಸ್ : ಮ್ಯಾಕ್ಸ್ ಓಡೌಡ್, ವಿಕ್ರಮಜಿತ್ ಸಿಂಗ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಟಿಮ್ ಪ್ರಿಂಗಲ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಟಿಮ್ ವ್ಯಾನ್ ಡೆರ್ ಗುಗ್ಟನ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications