T20 World Cup 2022: ನಮೀಬಿಯಾ ವಿರುದ್ಧದ ಸೋಲಿಗೆ ಕಾರಣ ಏನೆಂದು ತಿಳಿಸಿದ ಶ್ರೀಲಂಕಾ ನಾಯಕ

ಬಹು ನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ಗೆ ಚಾಲನೆ ದೊರೆತಿದೆ. ಗ್ರೂಪ್ ಎ ಮೊದಲನೇ ಪಂದ್ಯದಲ್ಲೇ ನಮೀಬಿಯಾ ತಂಡ ಏಷ್ಯಾಕಪ್ ಚಾಂಪಿಯನ್‌ಗಳಾದ ಶ್ರೀಲಂಕಾ ತಂಡವನ್ನು 55 ರನ್‌ಗಳ ಅತರದಿಂದ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವಿಶ್ವಕಪ್‌ನ ಮೊದಲನೇ ಪಂದ್ಯವೇ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ಸುಲಭವಾಗಿ ಜಯ ಸಾಧಿಸುತ್ತದೆ ಎಂದುಕೊಳ್ಳಲಾಗಿತ್ತು, ಆದರೆ, ತಂಡವಾಗಿ ಎಲ್ಲಾ ವಿಭಾಗಳಳಲ್ಲೂ ಉತ್ತಮ ಪ್ರದರ್ಶನ ನೀಡಿದ ನಮೀಬಿಯಾ ಸುಲಭವಾಗಿ ಜಯ ಸಾಧಿಸಿತು.
ನಮೀಬಿಯಾ ವಿರುದ್ಧದ ಸೋಲಿನ ಬಳಿಕ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ನಾವು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದೆವು. ಸರಿಯಾಗಿ ಬೌಲಿಂಗ್ ಮಾಡದ ಕಾರಣ ನಮೀಬಿಯಾ ಅಂತಿಮ ಓವರ್ ಗಳಲ್ಲಿ ಹೆಚ್ಚಿನ ರನ್ ಕಲೆಹಾಕಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಪ್ರದರ್ಶನ ನೀಡುವ ಬಗ್ಗೆ ದಸುನ್ ಶನಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಷ್ಯಾಕಪ್ ಚಾಂಪಿಯನ್ನರಿಗೆ ಮುಂದಿನ ಪಂದ್ಯ ಭಾರಿ ಮಹತ್ವದ್ದಾಗಿದೆ. ಶ್ರೀಲಂಕಾ ಎರಡನೇ ಪಂದ್ಯವನ್ನು ಯುಎಇ ವಿರುದ್ಧ ಆಡಲಿದೆ.

ಹೆಚ್ಚಿನ ರನ್ ಬಿಟ್ಟುಕೊಟ್ಟ ಶ್ರೀಲಂಕಾ ಬೌಲರ್
ಶ್ರೀಲಂಕಾ ತಂಡದ ಬೌಲಿಂಗ್ ಬಗ್ಗೆ ದಸುನ್ ಶನಕ ಮಾತನಾಡಿದ್ದು, ಹೆಚ್ಚಿನ ರನ್ ಬಿಟ್ಟುಕೊಟ್ಟದ್ದು ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಹೇಳಿದ್ದಾರೆ. "ಬೌಲರ್‌ಗಳು ಸರಿಯಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡಲು ವಿಫಲರಾಗಿದ್ದಾರೆ. ನಾವು ಚೆಂಡಿನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ನಾವು ಸರಿಯಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡಲಿಲ್ಲ ಮತ್ತು ಅದು ಕಳವಳಕಾರಿಯಾಗಿದೆ." ಎಂದು ಹೇಳಿದ್ದಾರೆ.
15 ಓವರ್‌ಗಳಲ್ಲಿ ನಮೀಬಿಯಾ 6 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿತ್ತು. ಆದರೆ, ಅಂತಿಮ ಐದು ಓವರ್‌ಗಳಲ್ಲಿ ಅವರು 68 ರನ್ ಗಳಿಸಿದರು. 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿದರು.
T20 World Cup: ಬ್ರಿಸ್ಬೇನ್‌ನಲ್ಲಿ ಏಕಾಂಗಿಯಾಗಿ ಬ್ಯಾಟಿಂಗ್ ಅಭ್ಯಾಸ ಮಾಡಿದ ಕೊಹ್ಲಿ

ನಮೀಬಿಯಾ ಉತ್ತಮ ಬ್ಯಾಟಿಂಗ್
ನಮೀಬಿಯಾ ತಂಡದ ಪರವಾಗಿ ಜಾನ್ ಫ್ರಿಲಿಂಕ್ 28 ಎಸೆತಗಳಲ್ಲಿ 44 ರನ್ ಗಳಿಸಿ ಹೆಚ್ಚಿನ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಜೆಜೆ ಸ್ಮಿತ್ ಕೂಡ ಅಂತಿಮ ಓವರ್ ಗಳಲ್ಲಿ ಬಿರುಸಿನ ರನ್ ಗಳಿಸಿದರು. 16 ಎಸೆತಗಳಲ್ಲಿ 31 ರನ್ ಗಳಿಸಿ ನಮೀಬಿಯಾ ಉತ್ತಮ ಮೊತ್ತ ಕಲೆಹಾಕಲು ಕಾರಣವಾದರು.
ಶ್ರೀಲಂಕಾ ಪರವಾಗಿ ಪ್ರಮೋದ್ ಮದುಶನ್ 4 ಓವರ್‌ಗಳಲ್ಲಿ 37 ರನ್ ನೀಡಿ 2 ವಿಕೆಟ್ ಪಡೆದರು. ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ಚಾಮಿಕಾ ಕರುಣರತ್ನೆ ಮತ್ತು ವನಿಂದು ಹಸರಂಗ ತಲಾ ಒಂದು ವಿಕೆಟ್ ಪಡೆದರು.

ಶ್ರೀಲಂಕಾದ ಕಳಪೆ ಬ್ಯಾಟಿಂಗ್ ಪ್ರದರ್ಶನ
164 ರನ್‌ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. ನಮೀಬಿಯಾದ ಅದ್ಭುತ ಬೌಲಿಂಗ್ ಮತ್ತು ಫೀಲ್ಡಿಂಗ್‌ನ ಪ್ರದರ್ಶನಗಳಿಂದ ಶಾಕ್‌ಗೆ ಒಳಗಾದರು.
ನಾಯಕ ಶನಕ (23 ಎಸೆತಗಳಲ್ಲಿ 29) ಮತ್ತು ಭಾನುಕಾ ರಾಜಪಕ್ಸೆ (21 ಎಸೆತಗಳಲ್ಲಿ 20) ಹೊರತು ಪಡಿಸಿ ಉಳಿದವರು ಸಂಪೂರ್ಣವಾಗಿ ವಿಫಲರಾದರು. ಅಂತಿಮವಾಗಿ ಶ್ರೀಲಂಕಾ 108 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಪಂದ್ಯವನ್ನು 55 ರನ್‌ಗಳಿಂದ ಸೋತಿತು.
ಡೇವಿಡ್ ವೈಸ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ ಮತ್ತು ಜಾನ್ ಫ್ರಿಲಿಂಕ್ ತಲಾ ಎರಡು ವಿಕೆಟ್ ಪಡೆದರು. ಜೆಜೆ ಸ್ಮಿತ್ ಒಂದು ವಿಕೆಟ್ ಪಡೆದರು.

ಉತ್ತಮ ಜೊತೆಯಾಟ ಆಡಬೇಕಿದೆ
ಶ್ರೀಲಂಕಾ ಅಗ್ರ ಕ್ರಮಾಂಕವು ಜವಾಬ್ದಾರಿಯಿಂದ ಆಡಬೇಕಾಗಿದೆ ಎಂದು ದಸುನ್ ಶನಕ ಹೇಳಿದ್ದಾರೆ. ಆರಂಭಿಕ ಆಟಗಾರರು ಉತ್ತಮವಾಗಿ ಬ್ಯಾಟಿಂಗ್ ಮಾಡಿದರೆ, ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಕಡಿಮೆಯಾಗಲಿದೆ.
ವಿಕೆಟ್‌ಗಳು ಬೀಳುವಾಗ ಮೊದಲು ಉತ್ತಮ ಜೊತೆಯಾಟ ಆಡಲು ಪ್ರಯತ್ನಿಸಬೇಕು ಎಂದು ದಸುನ್ ಶನಕ ಹೇಳಿದ್ದಾರೆ. ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications