India Vs Bangladesh : ಬಾಂಗ್ಲಾದೇಶದ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದ ಭಾರತ

ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ 5 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಹಾದಿ ಸುಲಭವಾಗಿಸಿಕೊಂಡಿದೆ. ಮಳೆಯಿಂದ ಬಾಂಗ್ಲಾದೇಶಕ್ಕೆ 16 ಓವರ್ ಗಳಲ್ಲಿ ಗೆಲುವಿಗೆ 150 ರನ್ ಗಳಿಸಬೇಕಾಗಿತ್ತು. ಆದರೆ, 16 ಓವರ್ ಗಳಲ್ಲಿ ಬಾಂಗ್ಲಾ ತಂಡವನ್ನು 145 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ರೋಹಿತ್ ಶರ್ಮಾ ಒಂದು ಜೀವದಾನ ಪಡೆದರು, ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. 8 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಔಟಾಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅರ್ಧಶತಕ ಗಳಿಸಿದರು, ಸೂರ್ಯಕುಮಾರ್ ಯಾದವ್ ಕೂಡ ಉತ್ತಮ ರನ್ ಗಳಿಸಿ ತಂಡಕ್ಕೆ ಕೊಡುಗೆ ನೀಡಿದರು.
ಭಾರತ ನೀಡಿದ 184 ರನ್‌ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆಯಿತು. ಲಿಟ್ಟನ್ ದಾಸ್ 21 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಗೆಲುವಿನ ಭರವಸೆ ಮೂಡಿಸಿದರು. 7 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸುವ ಮೂಲಕ ಉತ್ತಮ ಸ್ಥಿತಿಯಲ್ಲಿತ್ತು.

ಅಡ್ಡಿಯಾದ ಮಳೆ, ಭಾರತಕ್ಕೆ ಆತಂಕ
ಈ ಹಂತದಲ್ಲಿ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಡಿಎಲ್‌ಎಸ್ ನಿಯಮದ ಪ್ರಕಾರ ಬಾಂಗ್ಲಾದೇಶ ಗೆಲುವಿಗಿಂತ 17 ರನ್ ಮುಂದಿತ್ತು. ಈ ಹಂತದಲ್ಲಿ ಭಾರತಕ್ಕೆ ಸೋಲುವ ಭೀತಿ ಎದುರಾಗಿತ್ತು. ಮಳೆ ನಿಂತ ನಂತರ ಬಾಂಗ್ಲಾದೇಶಕ್ಕೆ ಗೆಲುವಿಗೆ 9 ಓವರ್ ಗಳಲ್ಲಿ 85 ರನ್ ಗಳಿಸಬೇಕಾಗಿತ್ತು.
ಕೆಎಲ್ ರಾಹುಲ್ ಹೊಡೆದ ಅದ್ಭುತ ರನೌಟ್‌ಗೆ ಅರ್ಧಶತಕ ಗಳಿಸಿದ್ದ ಲಿಟನ್ ದಾಸ್ ಔಟಾದರು. ನಂತರ ಉತ್ತಮ ಬೌಲಿಂಗ್ ಪ್ರದರ್ಶಿಸಿದಿ ಟೀಂ ಇಂಡಿಯಾ ಬಾಂಗ್ಲಾ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಹಾರ್ದಿಕ್ ಪಾಂಡ್ಯ, ಅರ್ಷ್‌ದೀಪ್ ಸಿಂಗ್, ಶಮಿ ವಿಕೆಟ್‌ಗಳನ್ನು ಪಡೆಯುವ ಮೂಲಕ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಿದರು.
ಅಂತಿಮ ಓವರ್ ನಲ್ಲಿ ಬಾಂಗ್ಲಾ ತಂಡಕ್ಕೆ ಗೆಲುವಿಗೆ 20 ರನ್‌ಗಳ ಅಗತ್ಯವಿತ್ತು. ಅಂತಿಮ ಓವರ್ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ ಎರಡನೇ ಎಸೆತದಲ್ಲಿ ಸಿಕ್ಸರ್ ಬಿಟ್ಟುಕೊಡುವ ಮೂಲಕ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದರು, ನಂತರದ ನಾಲ್ಕು ಎಸೆತಗಳನ್ನು ಉತ್ತಮವಾಗಿ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ 15 ರನ್ ಬಿಟ್ಟುಕೊಡುವ ಮೂಲಕ 5 ವಿಕೆಟ್‌ಗಳ ಜಯ ಗಳಿಸಲು ಕಾರಣವಾದರು.

ಕೆಎಲ್ ರಾಹುಲ್, ಕೊಹ್ಲಿ ಅರ್ಧಶತಕ
ಕೆಎಲ್ ರಾಹುಲ್ ಕೊನೆಗೂ ತಮ್ಮ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಕೆಎಲ್ ರಾಹುಲ್ 32 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 50 ರನ್ ಗಳಿಸಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್, 16 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 6 ಎಸೆತಗಳಲ್ಲಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ದಿನೇಶ್ ಕಾರ್ತಿಕ್ ಕೂಡ 5 ಎಸೆತಗಳಲ್ಲಿ 7 ರನ್ ಗಳಿಸಿ ರನ್‌ಔಟ್‌ಗೆ ಬಲಿಯಾದರು. ಅಕ್ಷರ್ ಪಟೇಲ್ 7 ರನ್ ಗಳಿಸಿ ಔಟಾದರೆ, ರವಿಚಂದ್ರನ್ ಅಶ್ವಿನ್ 6 ಎಸೆತಗಳಲ್ಲಿ 13 ರನ್ ಗಳಿಸಿದರು.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ 2022ರಲ್ಲಿ ತಮ್ಮ 3 ನೇ ಅರ್ಧಶತಕ ಗಳಿಸಿ ಮಿಂಚಿದರು. 44 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 64 ರನ್ ಗಳಿಸುವ ಮೂಲಕ ಭಾರತ ಬೃಹತ್ ಮೊತ್ತ ಕಲೆಹಾಕುವಲ್ಲಿ ಕಾರಣವಾದರು.

ಭಾರತ, ಬಾಂಗ್ಲಾದೇಶ ಪ್ಲೇಯಿಂಗ್ XI
ಭಾರತ : ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್(ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ಮೊಸದ್ದೆಕ್ ಹೊಸೈನ್, ಶೋರಿಫುಲ್ ಇಸ್ಲಾಂ, ನೂರುಲ್ ಹಸನ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications