
ಜಸ್ಪ್ರೀತ್ ಬೂಮ್ರಾ
ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬೂಮ್ರಾ ಈ ಬಾರಿಯ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಆರಂಭದಲ್ಲಿ ಚುಟುಕು ವಿಶ್ವಕಪ್‌ನ ತಂಡಕ್ಕೆ ಬೂಮ್ರಾ ಆಯ್ಕೆಯಾಗಿದ್ದರು ಕೂಡ ನಂತರ ಬೆನ್ನು ನೋವಿನ ಕಾರಣದಿಂದಾಗಿ ಬೂಮ್ರಾ ಟೂರ್ನಿಗೆ ಅಲಭ್ಯವಾಗುತ್ತಿರುವುದನ್ನು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಟೀಮ್ ಇಂಡಿಯಾ ಈಗಾಗಲೇ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭಮದಲ್ಲಿ ಜಸ್ಪ್ರೀತ್ ಬೂಮ್ರಾ ಹಾಗೂ ಅಲಭ್ಯವಾಗುತ್ತಿರುವುದು ತಂಡಕ್ಕೆ ಭಾರೀ ಹಿನ್ನಡೆಯುಂಟು ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಂಡ್ರೆ ರಸೆಲ್
ಚುಟುಕು ಕ್ರಿಕೆಟ್ ಮಾದರಿಯಲ್ಲಿ ಅತ್ಯಂತ ವಿಧ್ವಂಸಕಾರಿ ಬ್ಯಾಟರ್‌ಗಳ ಪೈಕಿ ಆಂಡ್ರೆ ರಸೆಲ್ ಕೂಡ ಒಬ್ಬರು. ಇನ್ನು ಆಸ್ಟ್ರೇಲಿಯಾದ ಬೌಲಿಂಗ್ ಸ್ನೇಹಿ ಪಿಚ್‌ಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಕೂಡ ಆಂಡ್ರೆ ರಸೆಲ್ ಅವರಲ್ಲಿತ್ತು. ಆದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಂಡ್ರೆ ರಸೆಲ್ ಭಾಗಿಯಾಗದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆದರೆ ರಸೆಲ್ ಗಾಯದ ಕಾರಣದಿಂದಾಗಿ ಟೂರ್ನಿಗೆ ಆಯ್ಕೆಯಾಗದಿರುವುದಲ್ಲ ಎಂಬುದು ಗಮನಾರ್ಹ ಅಂಶ. ಇತ್ತೀಚಿನ ದಿನಗಳಲ್ಲಿನ ಪ್ರದರ್ಶನವನ್ನು ಗಮನಿಸಿಕೊಂಡು ವಿಂಡೀಸ್ ಆಯ್ಕೆ ಮಂಡಳಿ ಈ ಸ್ಟಾರ್ ಆಳ್‌ರೌಂಡರ್‌ನನ್ನು ಆಯ್ಕೆ ಮಾಡದೆ ಹೊರಗಿಟ್ಟಿದೆ.

ರವೀಂದ್ರ ಜಡೇಜಾ
ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಭಾರತದ ಪರವಾಗಿ ಆಡುವುದನ್ನು ತಪ್ಪಿಸಿಕೊಳ್ಳುತ್ತಿರುವ ಮತ್ತೋರ್ವ ಆಟಗಾರ ರವೀಂದ್ರ ಜಡೇಜಾ. ಕಳೆದ ಏಷ್ಯಾ ಕಪ್ ಟೂರ್ನಿಲ್ಲಿ ಭಾಗಿಯಾಗಿದ್ದ ರವೀಂದ್ರ ಜಡೇಜಾ ಈ ಟೂರ್ನಿಯ ಮಧ್ಯದಲ್ಲಿ ಗಾಯಗೊಂಡಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜಡ್ಡು ಸುದೀರ್ಘ ವಿಶ್ರಾಂತಿಯ ಅಗತ್ಯದಲ್ಲಿದ್ದಾರೆ. ಭಾರತದ ಲೈನ್‌ಅಪ್‌ನ ಪ್ರಮುಖ ಆಟಗಾರನಾಗಿರುವ ರವೀಂದ್ರ ಜಡೇಜಾ ಆಲ್‌ರೌಂಡರ್ ಆಗಿ ತಂಡದ ಸಂಯೋಜನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಜಾನಿ ಬೈರ್‌ಸ್ಟೋವ್
ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಸ್ಪೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ ಕೂಡ ಈ ಬಾರಿಯ ಟಿ20 ವಿಶ್ವಕಪ್ ತಪ್ಪಿಸಿಕೊಳ್ಳುತ್ತಿರುವ ಪ್ರಮುಖ ಆಟಗಾರನಾಗಿದ್ದಾರೆ. ಇಂಗ್ಲೆಂಡ್ ತಂಡ ಆರಂಭದಲ್ಲಿ ಹೆಸರಿಸಿದ್ದ ಟಿ20 ವಿಶ್ವಕಪ್‌ನ ಸ್ಕ್ವಾಡ್‌ನಲ್ಲಿ ಜಾನಿ ಬೈರ್‌ಸ್ಟೋವ್ ಸ್ಟಾನ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ಕೋಚ್ ರಾಬ್ ಕೀ ಇಂಗ್ಲೆಂಡ್ ತಂಡದ ಪರವಾಗಿ ಈ ಬಾರಿಯ ಈ ಬಾರಿಯ ವಿಶ್ವಕಪ್‌ನಲ್ಲಿ ಬೈರ್‌ಸ್ಟೋವ್ ಜೋಸ್ ಬಟ್ಕರ್ ಜೊತಗೂಡಿ ಟೂರ್ನಿ ಆರಂಭಿಸಲಿದ್ದಾರೆ ಇಂಗ್ಲೆಂಡ್ ಕೋಚ್ ಮಾಹಿತಿ ನೀಡಿದ್ದರು.

ಶಿಮ್ರಾನ್ ಹೇಟ್ಮೇಯರ್
ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಆಟಗಾರ ಶಿಮ್ರಾನ್ ಹೇಟ್ಲೇಯರ್ ಕೂಡ ಈ ಬಾರಿಯ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದ ಮತ್ತೋರ್ವ ಸ್ಟಾರ್ ಆಟಗಾರನಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಈ ಆಟಗಾರ ಈ ಬಾರಿಯ ವಿಶ್ವಕಪ್‌ನಲ್ಲಿ ಪ್ರಮುಖ ಆಟಗಾರನಾಗಿ ಕಣಕ್ಕಿಳಿಬೇಕಾಗಿತ್ತು. ಆದರೆ ಸೂಕ್ತ ಸಂದರ್ಭದಲ್ಲಿ ವಿಮಾನವನ್ನು ಏರಲು ವಿಫಲವಾದ ಹಿನ್ನೆಲೆಯಲ್ಲಿ ವಿಶ್ವಕಪ್‌ನಿಂದಲೇ ಶಿಮ್ರಾನ್ ಹೇಟ್ಮೇಯರ್ ಅವರನ್ನು ಹೊರಗುಡಲಾಗಿದೆ.


Click it and Unblock the Notifications












