ಟಿ20 ವಿಶ್ವಕಪ್ 2022: ಬಾಂಗ್ಲಾದೇಶ vs ಜಿಂಬಾಬ್ವೆ: ಟಾಸ್ ರಿಪೋರ್ಟ್, ಆಡುವ ಬಳಗ, Live score

ಟಿ20 ವಿಶ್ವಕಪ್‌ನಲ್ಲಿ ಇಂದು ಮೂರು ಸೆಣೆಸಾಟ ನಡೆಯಲಿದೆ. ಮೊದಲ ಪಂದ್ಯ ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಆರಂಭವಾಗಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಟಾಸ್ ್ಎದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಜಿಂಬಾಬ್ವೆ ತಂಡ ರನ್ ಬೆನ್ನಟ್ಟುವ ಸವಾಲು ಸ್ವೀಕರಿಸಿದೆ.
ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಆತ್ಮವಿಶ್ವಾಸದೊಂದಿಗೆ ಜಿಂಬಾಬ್ವೆ ತಂಡ ಈ ಕದನಕ್ಕೆ ಇಳಿದಿದೆ. ಈ ಬಾರಿ ಬಾಂಗ್ಲಾದೇಶದ ವಿರುದ್ಧ ತನ್ನ ಹೋರಾಟವನ್ನು ಪ್ರದರ್ಶಿಸಿ ಸೆಮಿಫೈನಲ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಪ್ರಯತ್ನ ನಡೆಸಲಿದೆ. ಮತ್ತೊಂದೆಡೆ ಬಾಂಗ್ಲಾದೇಶ ಕೂಡ ಆಡಿರುವ ಎರಡು ಪಂದ್ಯಗಳ ಪೈಕಿ ಒಂದು ಸೋಲು ಒಂದು ಗೆಲುವು ಅನುಭವಿಸಿದ್ದು ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.
ಜಿಂಬಾಬ್ವೆ ಆಡುವ ಬಳಗ: ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ನಾಯಕ), ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಟೆಂಡೈ ಚಟಾರಾ, ರಿಚರ್ಡ್ ನಾಗರವಾ, ಬ್ರಾಡ್ ಇವಾನ್ಸ್, ಬ್ಲೆಸಿಂಗ್ ಮುಜರಬಾನಿ
ಬಾಂಗ್ಲಾದೇಶ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್(ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ನೂರುಲ್ ಹಸನ್(ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications