IND vs IRE: ರಿಷಭ್ ಪಂತ್ ರಿವರ್ಸ್ ಶಾಟ್‌ಗೆ ಬೆಚ್ಚಿದ ಅಮೆರಿಕ ಪ್ರೇಕ್ಷಕರು; ವಿಡಿಯೋ ವೈರಲ್
ಬುಧವಾರ, ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್‌ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಈ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಉತ್ತಮ ರೀತಿಯಲ್ಲಿ ಆರಂಭಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಲ್ ಸ್ಟಿರ್ಲಿಂಗ್ ನಾಯಕತ್ವದ ಐರ್ಲೆಂಡ್ ತಂಡ ಯಾವುದೇ ಅರ್ಧಶತಕವಿಲ್ಲದೆ 16 ಓವರ್‌ಗಳಲ್ಲಿ 96 ರನ್‌ಗಳಿಗೆ ಸರ್ವಪತನ ಕಂಡಿತು.

97 ರನ್‌ಗಳ ಸಾಧಾರಣ ಗುರಿ ಪಡೆದ ಭಾರತ ತಂಡವು ನಾಯಕ ರೋಹಿತ್ ಶರ್ಮಾ ಅರ್ಧಶತಕದ ನೆರವಿನಿಂದ 12.2 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ಇದೇ ವೇಳೆ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಎದುರಾಳಿ ತಂಡದ ಆಟಗಾರರು ಆಶ್ಚರ್ಯಗೊಳ್ಳುವಂತೆ ಗೆಲುವಿನ ಸಿಕ್ಸರ್ ಬಾರಿಸಿದರು.
ರಿವರ್ಸ್ ಸ್ಕೂಪ್ ಸಿಕ್ಸರ್‌ನೊಂದಿಗೆ ಅಮೆರಿಕ ಅಭಿಮಾನಿಗಖನ್ನು ಬೆರಗುಗೊಳಿಸಿದರು ಮತ್ತು 2024ರ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಭಾರತದ ಗೆಲುವಿನ ಮುದ್ರೆ ಒತ್ತಲು ಸಹಾಯ ಮಾಡಿದರು.
ರಿಷಭ್ ಪಂತ್ ತನ್ನ ಬ್ಯಾಟಿಂಗ್ ಚತುರತೆ ಮತ್ತು ಆತ್ಮವಿಶ್ವಾಸದಿಂದ ಬಾರಿಸಿದ ರಿವರ್ಸ್ ಸ್ಕೂಪ್ ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಯಿತು ಮತ್ತು ಅಮೆರಿಕನ್ ಪ್ರೇಕ್ಷಕರಲ್ಲಿ ಕ್ರಿಕೆಟ್‌ನಲ್ಲಿ ಹೊಸ ಆಸಕ್ತಿಯನ್ನು ಹುಟ್ಟುಹಾಕಿತು.
ಪಂದ್ಯದ ವಿವರ
ಪಂದ್ಯಾವಳಿಯ ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ತಂಡವನ್ನು ಎದುರಿಸುತ್ತಿದ್ದಂತೆ, ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಂಭ್ರಮದಿಂದ ಗಿಜಿಗುಡುತ್ತಿತ್ತು.
ಇನ್‌ಫಾರ್ಮ್ ರೋಹಿತ್ ಶರ್ಮಾ ನಾಯಕತ್ವದ ಭಾರತ ವಿಭಾಗವು ಐರ್ಲೆಂಡ್ ತಂಡವನ್ನು 97 ರನ್‌ಗಳಿಗೆ ನಿಯಂತ್ರಿಸುವ ಮೂಲಕ ಪ್ರಾಬಲ್ಯ ಮೆರೆಯಿತು.
ಭಾರತದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ 3 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಫಾರ್ಮ್‌ಗೆ ಮರಳಿದರು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಎರಡು ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ ತಮ್ಮ ಖಾತೆಗೆ ಒಂದು ವಿಕೆಟ್ ಪಡೆದರು.
ರೋಹಿತ್ ಶರ್ಮಾ-ರಿಷಭ್ ಪಂತ್ ಜೊತೆಯಾಟ
ವಿರಾಟ್ ಕೊಹ್ಲಿಯ ಆರಂಭಿಕ ವಿಕೆಟ್ ಕಳೆದುಕೊಂಡ ನಂತರ ಮೂರನೇ ಕ್ರಮಾಂಕದಲ್ಲಿ ಬಂದ ರಿಷಭ್ ಪಂತ್ ನಾಯಕ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಸ್ಥಿರಗೊಳಿಸುವ ಕಾರ್ಯವನ್ನು ನಿರ್ವಹಿಸಿದರು.
ಕಠಿಣ ಬೌನ್ಸಿ ಪಿಚ್‌ನಲ್ಲಿ ರಿಷಭ್ ಪಂತ್ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರು. ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಕೇವಲ 37 ಎಸೆತಗಳಲ್ಲಿ 52 ರನ್ ಗಳಿಸಿದ ರೋಹಿತ್ ಶರ್ಮಾ ಉತ್ತಮ ಅಡಿಪಾಯ ಹಾಕಿದರು. ಆದರೆ ಹತ್ತನೇ ಓವರ್‌ನ ಕೊನೆಯಲ್ಲಿ ಗಾಯದಿಂದ ನಿವೃತ್ತಿಯಾದ ನಂತರ, ಪಂದ್ಯ ಗೆಲುವಿನ ಜವಾಬ್ದಾರಿಯನ್ನು ರಿಷಭ್ ಪಂತ್ ತೆಗೆದುಕೊಂಡರು.
ಗೆಲುವಿಗೆ ಕೇವಲ ಆರು ರನ್‌ಗಳ ಅಗತ್ಯವಿದ್ದಾಗ, ರಿಷಭ್ ಪಂತ್ ತಮ್ಮ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿದರು. ಬ್ಯಾರಿ ಮೆಕಾರ್ಥಿ ಬೌಲಿಂಗ್ ಎದುರಿಸುವಾಗ ಅಸಾಂಪ್ರದಾಯಿಕ ರಿವರ್ಸ್ ಸ್ಕೂಪ್ ಬಾರಿಸಿದರು ಮತ್ತು ಚೆಂಡು ವಿಕೆಟ್‌ಕೀಪರ್‌ನ ತಲೆಯ ಮೇಲೆ ಸಿಕ್ಸರ್‌ಗೆ ಹೋಯಿತು.
ತನ್ನ ಪಾದಗಳನ್ನು ಸಹ ಅಲುಗಾಡಿಸದೆ ಈ ಅದ್ಭುತ ಶಾಟ್ ಬಂತು. ಅಲ್ಲದೆ, ಭಾರತ ತಂಡಕ್ಕೆ ಗೆಲುವಿನ ಮುದ್ರೆಯೊತ್ತಿತು. ಇದು ಪ್ರೇಕ್ಷಕರು ಮಾತ್ರವಲ್ಲದೆ, ಕ್ರಿಕೆಟ್ ಜಗತ್ತೇ ದಿಗ್ಭ್ರಮೆಗೊಂಡಿತು. ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಯ ಅಲೆಯನ್ನು ಸೃಷ್ಟಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications