For Quick Alerts
ALLOW NOTIFICATIONS  
For Daily Alerts
 

T20 World Cup 2024: ಜಸ್ಪ್ರೀತ್ ಬುಮ್ರಾ, ಟ್ರಾವಿಸ್ ಹೆಡ್ ಬಗ್ಗೆ ಭವಿಷ್ಯ ನುಡಿದ ಆಸೀಸ್‌ ದಿಗ್ಗಜ ಕ್ರಿಕೆಟಿಗ!

ಮೇ 30 ಗುರುವಾರ, 2024ರ ಐಸಿಸಿ ಟಿ20 ವಿಶ್ವಕಪ್‌ ಆರಂಭಕ್ಕೆ ಇನ್ನು 3 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಮೆಗಾ ಟೂರ್ನಿಗೆ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಾದ ಸ್ಟೇಡಿಯಂಗಳು ಸಿದ್ದವಾಗಿವೆ.

ಮತ್ತೊಂದೆಡೆ, ಅನುಭವಿ ಕ್ರಿಕೆಟಿಗರು ಟಿ 20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಯಾವ ಆಟಗಾರರು ಮಿಂಚಬಹುದು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೆಮಿಫೈನಲ್‌ ತಲುಪುವ ತಮ್ಮ ನೆಚ್ಚಿನ 4 ತಂಡಗಳನ್ನೂ ಹೆಸರಿಸಿದ್ದಾರೆ.

T20 World Cup 2024 Aussie cricket legend predicts Jasprit Bumrah and Travis Head

ಇದರ ಬೆನ್ನಲೇ ಟೀಮ್‌ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಆಸ್ಟ್ರೇಲಿಯಾ ಸ್ಪೋಟಕ ಆರಂಭಿಕ ಬ್ಯಾಟರ್‌ ಟ್ರಾವಿಸ್ ಹೆಡ್ ಬಗ್ಗೆ ಆಸೀಸ್‌ ದಿಗ್ಗಜ ಕ್ರಿಕೆಟಿಗ ಭವಿಷ್ಯ ನುಡಿದ್ದಾರೆ.

ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌‌ ಅವರು ತಮ್ಮದೆ ದೇಶದ ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್‌ ಟ್ರಾವಿಸ್ ಹೆಡ್ ಅವರನ್ನು ಟಿ20 ವಿಶ್ವಕಪ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸುತ್ತಾರೆ ಎಂದು ಆಯ್ಕೆ ಮಾಡಿದ್ದಾರೆ.

ಹಾಗೆಯೇ ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹೆಚ್ಚು ವಿಕೆಟ್ ಪಡೆಯುತ್ತಾರೆ ಎಂದು ಭವಿಷ್ಯ ಹೇಳಿದ್ದಾರೆ. ಈ ಆಯ್ಕೆಗೂ ಕಾರಣವನ್ನು ಪಾಂಟಿಂಗ್ ಕೊಟ್ಟಿದ್ದಾರೆ.

T20 World Cup 2024 Aussie cricket legend predicts Jasprit Bumrah and Travis Head

ಜಸ್ಪ್ರೀತ್ ಬುಮ್ರಾ

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆಯಬಲ್ಲ ಬೌಲರ್‌ ಎಂದರೆ ನನ್ನ ಆಯ್ಕೆ ಜಸ್ಪ್ರೀತ್ ಬುಮ್ರಾ ಆಗಿರುತ್ತಾರೆ. ಬುಮ್ರಾ ಹಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುವ ಮೂಲಕ ಯಶಸ್ವಿ ಬೌಲರ್ ಆಗಿದ್ದಾರೆ.

ಇತ್ತೀಚೆಗೆ ತೆರೆ ಕಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್)ನಲ್ಲಿ ಬುಮ್ರಾ 13 ಪಂದ್ಯಗಳಲ್ಲಿ 20 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ಪಡೆದ ಬೌಲರ್‌ಗಳ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಹೊಸ ಚೆಂಡಿನಲ್ಲಿ ಅತಿಹೆಚ್ಚು ವಿಕೆಟ್‌ ಪಡೆಯುವ ಸಾಮರ್ಥ್ಯ ಬುಮ್ರಾ ಅವರಲ್ಲಿದೆ.

ಡೆತ್‌ ಓವರ್‌ಗಳಲ್ಲಿ ಉತ್ತಮವಾಗಿ ಬುಮ್ರಾ ಬೌಲಿಂಗ್‌ ಮಾಡುತ್ತಾರೆ. ಟಿ20 ಕ್ರಿಕೆಟ್‌ನಲ್ಲಿ ನೀವು ಡೆತ್‌ ಓವರ್‌ಗಳನ್ನು ಬೌಲಿಂಗ್‌ ಮಾಡಿದಾಗ, ನಿಮಗೆ ಅನೇಕ ವಿಕೆಟ್‌ಗಳನ್ನು ಪಡೆಯುವ ಅವಕಾಶ ಸಿಗುತ್ತದೆ. ಹಾಗಾಗಿ ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆಯುವ ಬೌಲರ್‌ ಆಗಿ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದೇನೆ ಎಂದು ಪಾಂಟಿಂಗ್ ಹೇಳಿದ್ದಾರೆ.

T20 World Cup 2024 Aussie cricket legend predicts Jasprit Bumrah and Travis Head

ಟ್ರಾವಿಸ್ ಹೆಡ್

ಟಿ20 ವಿಶ್ವಕಪ್ 2024ರಲ್ಲಿ ಟ್ರಾವಿಸ್ ಹೆಡ್ ಅವರು ಅತಿ ಹೆಚ್ಚು ರನ್ ಗಳಿಸುತ್ತಾರೆ ಎಂದು ಪಾಂಟಿಂಗ್ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಟ್ರಾವಿಸ್‌ ಹೆಡ್‌ ಅತ್ಯುತ್ತಮ ಕ್ರಿಕೆಟ್ ಆಡಿದ್ದಾರೆ ಎಂದು ನಾನುನ ಭಾವಿಸುತ್ತೇನೆ.

ಈ ಸಮಯದಲ್ಲಿ ಅವರು ನಿರ್ಭೀತ ಕ್ರಿಕೆಟ್ ಆಡುತ್ತಿದ್ದಾರೆ. ಕಳೆದ ವರ್ಷ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 67 ಎಸೆತಗಳಲ್ಲಿ 109 ರನ್ ಗಳಿಸಿದ್ದರು.

Story first published: Thursday, May 30, 2024, 20:42 [IST]
Other articles published on May 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+