T20 World Cup 2024: ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಸೋಲಿನ ಆಘಾತ ನೀಡಿದ ಆಸ್ಟ್ರೇಲಿಯಾ
ಶನಿವಾರ, ಜೂನ್ 8ರಂದು ಬಾರ್ಬಡೋಸ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ 36 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಇದಕ್ಕೂ ಮುನ್ನ ಸ್ಕಾಟ್ಲೆಂಡ್ ವಿರುದ್ಧದ ಮೊದಲ ಪಂದ್ಯವು ಮಳೆಯಿಂದ ರದ್ದುಗೊಂಡ ಕಾರಣ, ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್‌ಗಳನ್ನು ಕಲೆಹಾಕಿತು. ಆನಂತರ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 165 ರನ್‌ಗಳಿಗೆ ಎದುರಾಳಿ ತಂಡವನ್ನು ನಿರ್ಬಂಧಿಸಿದ ನಂತರ, ಸತತ ಎರಡು ಗೆಲುವುಗಳೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ಗಳು ಉತ್ತಮ ಜೊತೆಯಾಟ ನೀಡಿದರು ಮತ್ತು ಪಂದ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್ 40 ರನ್ ಗಳಿಸದಿದ್ದರೂ, ಆಸೀಸ್ ತಂಡವು 200-ಪ್ಲಸ್ ರನ್ ದಾಖಲಿಸಿತು.
ಮತ್ತೊಂದೆಡೆ, ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಇಂಗ್ಲೆಂಡ್‌ನ ಚೇಸಿಂಗ್‌ನಲ್ಲಿ ಭದ್ರ ಬುನಾದಿ ಹಾಕಿದರು. ಆರು ಓವರ್‌ಗಳ ನಂತರ ಯಾವುದೇ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿತ್ತು. ಮಿಚೆಲ್ ಸ್ಟಾರ್ಕ್ ಅವರ ಮೂರನೇ ಓವರ್‌ನಲ್ಲಿ 19 ರನ್ ಬಾರಿಸಿದರು.
ಆದರೆ ಸ್ಪಿನ್ನರ್ ಆಡಮ್ ಝಂಪಾ ತನ್ನ ಮೊದಲ ಎಸೆತದಲ್ಲಿ 37 ರನ್ ಗಳಿಸಿದ್ದ ಫಿಲ್ ಸಾಲ್ಟ್ ಅವರನ್ನು ಎಂಟನೇ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಮೊದಲ ಆಘಾತ ನೀಡಿದರು ಮತ್ತು ಅವರ ಮುಂದಿನ ಓವರ್‌ನಲ್ಲಿ 42 ರನ್ ಗಳಿಸಿದ್ದ ಜೋಸ್ ಬಟ್ಲರ್ ವಿಕೆಟ್ ಪಡೆದರು.
ಮೂರು ಓವರ್‌ಗಳಲ್ಲಿ ಕೇವಲ 11 ರನ್‌ಗಳನ್ನು ಬಿಟ್ಟುಕೊಟ್ಟ ಆಸ್ಟ್ರೇಲಿಯಾ ಪಂದ್ಯವನ್ನು ತನ್ನತ್ತ ತಿರುಗಿಸಿದರು. ನಂತರ ಬಂದ ವಿಲ್ ಜಾಕ್ಸ್ 10 ರನ್ ಗಳಿಸಿ ಮಾರ್ಕಸ್ ಸ್ಟೊಯಿನಿಸ್ ಅವರ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್‌ಗೆ ಕ್ಯಾಚ್ ನೀಡಿ ಔಟಾದರು.
ಗ್ಲೆನ್ ಮ್ಯಾಕ್ಸ್‌ವೆಲ್ ಓವರ್‌ನಲ್ಲಿ ಮೊಯಿನ್ ಅಲಿ ಮೂರು ಸಿಕ್ಸರ್ ಬಾರಿಸಿದರು. ಆದರೆ ಜಾನಿ ಬೈರ್‌ಸ್ಟೋವ್ ಕಳಪೆಯಾಗಿ ಔಟಾದರು. ಮೊಯಿನ್ ಅಲಿ 25 ರನ್ ಗಳಿಸಿದ ಬಳಿಕ ಡೇವಿಡ್ ವಾರ್ನರ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ ಮತ್ತೆ ಸಂಕಷ್ಟಕ್ಕೆ ಸಿಲುಕಿತು.
ರನ್ ರೇಟ್ ಏರುತ್ತಿದ್ದಂತೆ ಆಸ್ಟ್ರೇಲಿಯಾದ ಶಿಸ್ತಿನ ಬೌಲಿಂಗ್‌ಗೆ ಇಂಗ್ಲೆಂಡ್ ಸಿಲುಕಿತು ಮತ್ತು ಆಡಮ್ ಝಂಪಾ ತಮ್ಮ ನಾಲ್ಕು ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್‌ಗಳ ಪ್ರಭಾವಶಾಲಿ ಅಂಕಿಅಂಶಗಳೊಂದಿಗೆ ಮುಗಿಸಿದರು.
ಇದಕ್ಕೂ ಮೊದಲು, ಜೋಸ್ ಬಟ್ಲರ್ ಮೊದಲು ಬೌಲಿಂಗ್ ಮಾಡುವ ಆಯ್ಕೆ ಮಾಡಿಕೊಂಡರು. ಆದರೆ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಆರ್ಭಟದ ಬ್ಯಾಟಿಂಗ್ ಮಾಡಿದ ಕಾರಣ, ಇಂಗ್ಲೆಂಡ್ ಬೇಗನೆ ನಿಯಂತ್ರಣ ಕಳೆದುಕೊಂಡರು.
ಸ್ಪಿನ್ನರ್ ವಿಲ್ ಜ್ಯಾಕ್ಸ್ ತನ್ನ ಮೊದಲ ಓವರ್‌ನಲ್ಲಿ ಮೂರು ಸಿಕ್ಸರ್ ಕೊಟ್ಟು 22 ರನ್ ನೀಡಿದರು. ಆ ಬಳಿಕ ವೇಗಿ ಮಾರ್ಕ್ ವುಡ್ ಕೂಡ ತಮ್ಮ ಮೊದಲ ಓವರ್‌ನಲ್ಲಿ 22 ರನ್ ಬಿಟ್ಟುಕೊಟ್ಟರು. ಆಸ್ಟ್ರೇಲಿಯಾ ನಾಲ್ಕು ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 55 ರನ್ ಗಳಿಸಿದರು.
ಮೊಯಿನ್ ಅಲಿ ಐದನೇ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಮೊದಲ ಮುನ್ನಡೆ ತಂದುಕೊಟ್ಟರು. 39 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಅವರನ್ನು ಬೌಲ್ಡ್ ಮಾಡಿದರು. ನಂತರ ವೇಗಿ ಜೋಫ್ರಾ ಆರ್ಚರ್ ಅವರು ಟ್ರಾವಿಸ್ ಹೆಡ್ (34) ಅವರನ್ನು ಬೌಲ್ಡ್ ಮಾಡಿದರು. ಆಗ ಆಸ್ಟ್ರೇಲಿಯಾ ತಂಡ 2 ವಿಕೆಟ್‌ಗೆ 74 ರನ್ ಕಲೆಹಾಕಿತು.
ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಮಾರ್ಷ್ 10ನೇ ಓವರ್‌ನಲ್ಲಿ 100ರ ಗಡಿ ದಾಟಿಸಿದರು. ಆದರೆ ಇಬ್ಬರೂ ಬ್ಯಾಟರ್‌ಗಳು ಶೀಘ್ರವಾಗಿ ಔಟಾದ ಕಾರಣ ಆಸ್ಟ್ರೇಲಿಯಾ 141 ರನ್‌ಗಳಿಗೆ 4 ವಿಕೆಟ್‌ಗೆ ಕುಸಿಯಿತು.
ಮಾರ್ಕಸ್ ಸ್ಟೊಯಿನಿಸ್ (30) ಮತ್ತು ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ತಂಡವನ್ನು 200ರ ಗಡಿಗೆ ಕೊಂಡೊಯ್ದರು. ಜೋಫ್ರಾ ಆರ್ಚರ್ ನಾಲ್ಕು ಓವರ್‌ಗಳಲ್ಲಿ 28 ರನ್ ನೀಡಿ 1 ವಿಕೆಟ್ ಪಡೆದರು.
ಬಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸ್ಪರ್ಧೆಯ ಸೂಪರ್ 8 ಹಂತಕ್ಕೆ ಮುನ್ನಡೆಯುತ್ತವೆ. ಕಳೆದ ವರ್ಷ ಭಾರತದಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ಶೋಚನೀಯ ಪ್ರಶಸ್ತಿ ರಕ್ಷಣೆಯ ನಂತರ ಇಂಗ್ಲೆಂಡ್‌ಗೆ ಆರಂಭಿಕ ಹಿನ್ನಡೆಯು ದುಃಸ್ವಪ್ನವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications