T20 World Cup 2024: ನಮೀಬಿಯಾ ಎದುರು ಕಣಕ್ಕಿಳಿದ ಆಸ್ಟ್ರೇಲಿಯಾ ಕೋಚ್, ಮಾಜಿ ಆಟಗಾರ; ಕಾರಣವೇನು?
ಮೇ 28 ಬುಧವಾರ, 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಚುಟುಕು ಸಮರಕ್ಕೆ ಇಂಡೀಸ್ ಮತ್ತು ಅಮೆರಿಕಾದಲ್ಲಿ ವೇದಿಕೆ ಸಿದ್ದವಾಗಿದೆ.
ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಈ ಟೂರ್ನಿಗೂ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.

ಅಂದರಂತೆ ಮಂಗಳವಾರ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನಮಿಬೀಯಾ ತಂಡಗಳು ಮುಖಮುಖಿಯಾಗಿದ್ದವು. ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಪಂದ್ಯ ನಡೆಯಿತು.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಹೆಡ್ ಕೋಚ್ ಆಂಡ್ಯ್ರೂ ಮೆಕ್‌ಡೊನಾಲ್ಡ್, ಸಹಾಯಕ ಕೋಚ್ ಬ್ರಾಡ್ ಹಾಡ್ಜ್ ಮತ್ತು ಆಂಡ್ರೆ ಬೊರೊವೆಕ್, ಮಾಜಿ ನಾಯಕ ಹಾಗು ಪ್ರಸ್ತುತ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಕಣಕ್ಕೀಳಿದಿದ್ದಾರೆ.
ಏಕೆಂದರೆ ಅಭ್ಯಾಸ ಪಂದ್ಯಕ್ಕೆ ಕಾಂಗೂರು ಪಡೆಯ ಪ್ರಮುಖ ಆಟಗಾರರು ಅಲಭ್ಯರಾಗಿದ್ದ ಕಾರಣ ಆಡುವ 11ರ ಬಳಗದಲ್ಲಿ ಆಟಗಾರರ ಕೊರತೆ ಕಂಡು ಬಂದಿತ್ತು. ಹೀಗಾಗಿ ಆಸೀಸ್ ತಂಡದ ಪ್ರಮುಖ ಸಿಬ್ಬಂದಿ ಹಾಗು ಆಯ್ಕೆ ಸಮಿತಿ ಮುಖ್ಯಸ್ಥ ನಮಿಬೀಯ ವಿರುದ್ಧ ಅಭ್ಯಾಸ ಪಂದ್ಯವಾಡಿದ್ದಾರೆ.
ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಐಪಿಎಲ್ ಮೇ 26 ರಂದು ಮುಕ್ತಾಯವಾಗಿದೆ. ಇಲ್ಲಿಯವರೆಗೂ ಐಪಿಎಲ್ ನಲ್ಲಿ ವಿವಿಧ ಫ್ರಾಂಚೈಸಿಗಳಿಗಾಗಿ ಆಡುತ್ತಿದ್ದ ಆಸ್ಟ್ರೇಲಿಯಾ ಆಟಗಾರರಾದ ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಇನ್ನೂ ಸಹ ಟಿ20 ವಿಶ್ವಕಪ್ ತಂಡವನ್ನು ಸೇರಿಲ್ಲ.
ಹೀಗಾಗಿ ಮಂಗಳವಾರ ನಡೆದ ಅಭ್ಯಾಸ ಪಂದ್ಯದ ವೇಳೆ ಕಾಂಗೂರು ಪಡೆಯ ಆಟಗಾರರು ಅಲಭ್ಯರಾಗಿದ್ದರು. ಇದೇ ಸಂದರ್ಭದಲ್ಲಿ ಕೋಚ್‌ಗಳಾದ ಆಂಡ್ಯ್ರೂ ಮೆಕ್‌ಡೊನಾಲ್ಡ್, ಬ್ರಾಡ್ ಹಾಡ್ಜ್ ಮತ್ತು ಆಂಡ್ರೆ ಬೊರೊವೆಕ್ ಆಸ್ಟ್ರೇಲಿಯಾ ಪರ ಕಣಕ್ಕೀಳಿದು ಮಿಂಚಿದರು. ಜೊತೆಗೆ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಕೂಡ ಅಬ್ಬರ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ನಮಿಬೀಯಾ ತಂಡಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ಬ್ಯಾಟ್ ಮಾಡಿದ ನಮೀಬಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಿತ್ತು.
ಈ ಗುರಿ ಬೆನ್ನಟ್ಟಿದ್ದ ಕಾಂಗೂರು ಪಡೆ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರ ಅರ್ಧಶತಕದ ಬಲದಿಂದ ಕೇವಲ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ ಭರ್ಜರಿ ಗೆಲುವು ಸಾಧಿಸಿತು. ವಾರ್ನರ್ 21 ಎಸೆತಗಳಲ್ಲಿ 3 ಸಿಕ್ಸರ್ ಹಾಗು 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 54 ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications