Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಟೀಮ್ ರೆಡಿ; ಮತ್ತೆ ಪ್ರಾಬಲ್ಯ ಸಾಧಿಸುತ್ತಾ ಕಾಂಗೂರು ಪಡೆ?

ಅಮೆರಿಕಾ ಮತ್ತು ವೆಸ್ಟ್‌ ಇಂಡೀಸ್‌ ದೇಶಗಳಲ್ಲಿ ಜೂನ್‌ 1 ರಿಂದ 29 ರವರೆಗೆ ನಡೆಯಲಿರುವ 2024ರ ಟಿ20 ವಿಶ್ವಕಪ್ ಟೂರ್ನಿಗೆ ತಂಡಗಳನ್ನು ಪ್ರಕಟಿಸುವುದಕ್ಕೆ ಮೇ 1 ಕಡೆ ದಿನವಾಗಿತ್ತು. ಹೀಗಾಗಿ ಇಂದು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ತನ್ನ 15 ಆಟಗಾರರ ಹೆಸರನ್ನು ಪ್ರಕಟಿಸಿದೆ.

ಬಲಿಷ್ಠ ಕ್ರಿಕೆಟ್‌ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ಗೆ ಮೂರು ವಿಭಾಗಗಳಲ್ಲಿಯೂ ಖಡಕ್‌ ಆಟಗಾರರನ್ನು ಆಯ್ಕೆ ಮಾಡಿದೆ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್ ಕಮ್ಮಿನ್ ಬದಲಿಗೆ ಸ್ಟಾರ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್ ಮುನ್ನೆಡೆಸುತ್ತಿದ್ದಾರೆ.

T20 world cup 2024 Australia squad

ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್, ಡೆಲ್ಲಿ ಕ್ಯಾಪಿಟಲ್ಸ್‌ ಪರ ಮಿಂಚುತ್ತಿರುವ ಯುವ ಬ್ಯಾಟರ್‌ ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅನುಭವಿ ಸೀಮರ್ ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಆಲ್‌ರೌಂಡರ್ ಮ್ಯಾಟ್ ಶಾರ್ಟ್ ಅವರನ್ನು ಟಿ20 ವಿಶ್ವಕಪ್‌ ತಂಡದಿಂದ ಕೈ ಬಿಡಲಾಗಿದೆ.

ಆರಂಭಿಕ ಸ್ಥಾನಕ್ಕೆ ಮತ್ತೊಮ್ಮೆ ಅನುಭವಿ ಡೇವಿಡ್ ವಾರ್ನರ್ ಅವರನ್ನು ಕಣಕ್ಕೀಳಿಸಲು ಆಸ್ಟ್ರೇಲಿಯಾ ಬೋರ್ಡ್‌ ತೀರ್ಮಾನಿಸಿದೆ. ವಾರ್ನರ್ ಜೊತೆಗೆ ಐಪಿಎಲ್‌ನಲ್ಲಿ ಸ್ಪೋಟಕ ಬ್ಯಾಟಿಂಗ್‌ ಮಾಡುತ್ತಿರುವ ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ ಆರಂಭಿಕರಾಗಬಹುದು. ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಸ್ಪಿನ್ ವಿಭಾಗದಲ್ಲಿ ಆಡಮ್ ಝಂಪಾ ನೇತೃತ್ವ ವಹಿಸಲಿದ್ದಾರೆ. ವೇಗಿಗಳಾಗಿ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್ವುಡ್ ಮತ್ತು ನಾಥನ್ ಎಲ್ಲಿಸ್ ತಂಡದಲ್ಲಿದ್ದು, ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕುವುದಕ್ಕೆ ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾ ತಂಡ ಕೆಳಗಿನಂತಿದೆ :

ಡೇವಿಡ್‌ ವಾರ್ನರ್‌, ಟ್ರಾವಿಸ್‌ ಹೆಡ್‌, ಮಿಚೆಲ್ ಮಾರ್ಷ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ನಾಥನ್ ಎಲಿಸ್‌, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.

Story first published: Wednesday, May 1, 2024, 11:07 [IST]
Other articles published on May 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+