T20 World Cup 2024: ಪಾಕಿಸ್ತಾನ ಸೋಲಿನ ಬಳಿಕ ಅಜಮ್ ಖಾನ್ ಸಖತ್ ಟ್ರೋಲ್; ವಿಡಿಯೋ ವೈರಲ್!
ಜೂನ್ 10 ಸೋಮವಾರ, ಭಾರತದ ವಿರುದ್ಧ ಪಾಕಿಸ್ತಾನ ತಂಡ ನೀರಸ ಬ್ಯಾಟಿಂಗ್ ಪ್ರದರ್ಶನದಿಂದ ಹೆಚ್ಚು ಟೀಕೆಗೆ ಗುರಿಯಾಗಿದೆ. 120 ರನ್‌ಗಳ ಕಡಿಮೆ ಸ್ಕೋರಿಂಗ್ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಬದಲು ಸೋತು ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿದೆ.
ಈ ಸೋಲಿನ ನಂತರ ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಅಜಮ್ ಖಾನ್ ಕೂಡ ಸಖತ್ ಟ್ರೋಲ್ ಆಗುತ್ತಿದ್ದಾರೆ. ಈ ಹಿಂದಿನಿಂದಲೂ ತಮ್ಮ ಬ್ಯಾಟಿಂಗ್ ಹಾಗು ಫಿಟ್‌ನೆಸ್‌ನಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಅಜಮ್ ಖಾನ್ ಅವರನ್ನು ಅಭಿಮಾನಿಗಳು ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್ ಮಾಡುತ್ತಿದ್ದಾರೆ.

ಕಳೆದ ಬಾರಿ ಯುಎಸ್‌ಎ ವಿರುದ್ಧ ಗೋಲ್ಡನ್ ಡಕ್ ಔಟ್ ಆಗಿ ಪೆವಿಲಿಯನ್ ಕಡೆ ಹೋಗುವಾಗ ಮಾರ್ಗ ಮಧ್ಯೆ ಅಜಮ್ ಖಾನ್ ಅಭಿಮಾನಿಗಳ ವಿರುದ್ಧ ಕೆಂಡಾಮಂಡಲವಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದ ತಕ್ಷಣ ಕೂಡ ಅಭಿಮಾನಿಯೊಬ್ಬ ಅಜಮ್ ಖಾನ್ ಅವರಿಗೆ ಕೊಬ್ಬಿದ ಆನೆ ಎಂದು ಕೂಗಿದ್ದನು. ಇದಾದ ನಂತರ ಔಟ್ ಆಗಿ ವಾಪಾಸ್ಸಾಗುವಾಗ ಅಜಮ್ ಖಾನ್ ಅವರನ್ನು ಅಭಿಮಾನಿಗಳು ಹೀಯಾಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಅಜಮ್ ಖಾನ್ ಆತನೊಂದಿಗೆ ಜಗಳವಾಡಿದ್ದರು.
ಭಾರತ ವಿರುದ್ಧ ಗೆಲ್ಲಲೇಬೇಕಾದ ಒತ್ತಾಡದಲ್ಲಿದ್ದ ಪಾಕಿಸ್ತಾನ ಆಡುವ 11ರ ಬಳಗದಿಂದ ಅಜಮ್ ಖಾನ್ ಅವರನ್ನು ಕೈಬಿಡಲಾಗಿತ್ತು. ಆದರೆ ಭಾರತದ ವಿರುದ್ಧ ಪಾಕಿಸ್ತಾನ ಸೋಲು ಕಂಡಿತ್ತು.
ಪಾಕಿಸ್ತಾನದ ಸೋಲಿನ ನಂತರ ಅಜಮ್ ಖಾನ್ ನ್ಯೂಯಾರ್ಕ್‌ನಲ್ಲಿ ಸ್ಟ್ರೀಟ್ ಫುಡ್ ಸವಿದಿದ್ದಾರೆ. ಈ ವಿಡಿಯೋ ಸೆರೆ ಹಿಡಿದಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
25 ವರ್ಷದ ವಿಕೆಟ್‌ಕೀಪರ್ ತಮ್ಮ ಫಿಟ್‌ನೆಸ್ ಮತ್ತು ಪಾಕಿಸ್ತಾನದ ನೀರಸ ಪ್ರದರ್ಶನದ ನಡೆವೆಯೂ ತನ್ನ ಊಟವನ್ನು ನಿಯಂತ್ರಣ ಮಾಡದೆ ತಿನ್ನುವುದನ್ನು ಆನಂದಿಸುತ್ತಿದ್ದಾರೆ ಎಂದು ಅಜಮ್ ಖಾನ್ ಅವರನ್ನು ವ್ಯಂಗ್ಯವಾಡಿದ್ದಾರೆ.
ಯುಎಸ್‌ಎ ವಿರುದ್ಧ ಪಂದ್ಯದ ವೇಳೆ ಕೂಡ ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂಗೆ ಅಜಮ್ ಖಾನ್ ಅವರ ಪೋಸ್ಟ್‌ಗಳನ್ನು ಹಿಡಿದು ಅಭಿಮಾನಿಗಳು ಬಂದಿದ್ದರ. ಅದರಲ್ಲಿ 'ಜಮ್ ಖಾನ್ ತಿನ್ನುವುದನ್ನು ಸಿಲ್ಲಿಸು' ಎಂದು ಬರೆದಿರುವ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿತ್ತು.
ಟಿ20 ವಿಶ್ವಕಪ್ 2024ರ ಎ ಗುಂಪಿನಲ್ಲಿರುವ ಪಾಕಿಸ್ತಾನ ಈಗಾಗಲೇ ಯುಎಸ್‌ಎ ಮತ್ತು ಭಾರತದ ವಿರುದ್ಧ ಹೀನಾಯವಾಗಿ ಸೋತಿದೆ. ಇನ್ನು ಉಳಿದಿರುವ ಎರಡು ಪಂದ್ಯಗಳನ್ನು ಭಾರೀ ಅಂತರದಿಂದ ಗೆಲ್ಲುವ ಅನಿರ್ವಾಯತೆಯಲ್ಲಿ ಪಾಕಿಸ್ತಾನ ತಂಡವಿದೆ.
ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಜೂನ್ 11 ರಂದು ಕೆನಡಾವನ್ನು ಎದುರಿಸಲಿದೆ. ಬಳಿಕ ಐರ್ಲೆಂಡ್ ವಿರುದ್ಧ ಆಡಲಿದೆ. ಈ ಎರಡು ತಂಡಗಳ ಎದುರು ಪಾಕಿಸ್ತಾನ ಗೆಲುವು ಸಾಧಿಸಿದರೂ ಸೂಪರ್-8 ಆರ್ಹತೆ ಪಡೆಯುವುದು ಕಷ್ಟಕರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications