T20 World Cup 2024: ಬಾಂಗ್ಲಾದೇಶದ ತಂಝೀಮ್ ಹಸನ್ ಸಾಕಿಬ್‌ಗೆ ದಂಡ ವಿಧಿಸಿ, ಛೀಮಾರಿ ಹಾಕಿದ ಐಸಿಸಿ
ಸೋಮವಾರ, ಜೂನ್ 17ರಂದು 2024ರ ಐಸಿಸಿ ಟಿ20 ವಿಶ್ವಕಪ್‌ನ ನೇಪಾಳ ವಿರುದ್ಧದ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಾಂಗ್ಲಾದೇಶ ತಂಡದ ವೇಗದ ಬೌಲರ್ ತಂಝೀಮ್ ಹಸನ್ ಸಾಕಿಬ್ ಅವರಿಗೆ ಛೀಮಾರಿ ಹಾಕಿ, ದಂಡ ವಿಧಿಸಲಾಗಿದೆ.
ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ವಿಧಿಸಲಾಗಿದೆ. ಕಿಂಗ್‌ಸ್ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಡಿ ಗುಂಪಿನ ಹಣಾಹಣಿಯಲ್ಲಿ ನೇಪಾಳ ತಂಡ 107 ರನ್‌ಗಳ ಚೇಸಿಂಗ್‌ನ ಮೂರನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.

ಬಾಂಗ್ಲಾದೇಶದ ಬೌಲರ್ ತಂಝೀಮ್ ಹಸನ್ ಸಾಕಿಬ್ ಅವರು ಡಬಲ್ ವಿಕೆಟ್ ಮೇಡನ್ ಓವರ್ ಬೌಲ್ ಮಾಡುವಾಗ ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.
ತಂಝೀಮ್ ಹಸನ್ ಸಾಕಿಬ್ ತನ್ನ 2ನೇ ಓವರ್ ಅನ್ನು ಪೂರ್ಣಗೊಳಿಸುತ್ತಿದ್ದಂತೆ, ನೇಪಾಳ ತಂಡದ ನಾಯಕನನ್ನು ದಿಟ್ಟಿಸಿ ನೋಡುತ್ತಿರುವಾಗ ಕೆಲವು ಬಿಸಿಬಿಸಿ ಮಾತುಗಳು ವಿನಿಮಯವಾದವು.
ಪರಿಸ್ಥಿತಿ ಬಿಸಿಯಾಗುತ್ತಿದ್ದಂತೆ ನಾನ್-ಸ್ಟ್ರೈಕರ್ ಅವರನ್ನು ತಡೆಯಬೇಕಾಯಿತು. ನೇಪಾಳ ತಂಡದ ವಿರುದ್ಧ ತಂಝೀಮ್ ಹಸನ್ ಸಾಕಿಬ್ 4 ಓವರ್‌ಗಳಲ್ಲಿ 2 ಮೇಡನ್ ಓವರ್ ಮಾಡಿ 7 ರನ್ ನೀಡಿ 4 ವಿಕೆಟ್‌ಗಳ ಗಳಿಕೆಗಾಗಿ ಪಂದ್ಯಶ್ರೇಷ್ಠ ಆಟಗಾರ ಎಂದು ಗುರುತಿಸಲ್ಪಟ್ಟರು.
ತಂಝೀಮ್ ಹಸನ್ ಸಾಕಿಬ್ ಅವರ ಪಂದ್ಯಶ್ರೇಷ್ಠ ಪ್ರದರ್ಶನದ ಸಹಾಯದಿಂದ ಬಾಂಗ್ಲಾದೇಶ ತಂಡವು ನೇಪಾಳ ತಂಡದ ವಿರುದ್ಧ 21 ರನ್‌ಗಳಿಂದ ಗೆದ್ದುಕೊಂಡಿತು.
ತಂಝೀಮ್ ಹಸನ್ ಸಾಬಿಬ್ ಮೇಲೆ ಆರೋಪ
21 ವರ್ಷದ ಆಟಗಾರ ತಂಝೀಮ್ ಅವರು, ಆಟಗಾರ ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
ಇದು "ಆಟಗಾರ, ಆಟಗಾರನ ಬೆಂಬಲ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯೊಂದಿಗೆ (ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ವೀಕ್ಷಕನನ್ನು ಒಳಗೊಂಡಂತೆ) 'ಅನುಚಿತ ದೈಹಿಕ ಸಂಪರ್ಕಕ್ಕೆ," ಸಂಬಂಧಿಸಿದೆ.
ನೇಪಾಳ vs ಬಾಂಗ್ಲಾದೇಶ ನಡುವಿನ ಪಂದ್ಯದ ಮೂರನೇ ಅಂಪೈರ್ ಜಯರಾಮನ್ ಮದನಗೋಪಾಲ್ ಮತ್ತು ನಾಲ್ಕನೇ ಅಂಪೈರ್ ಕುಮಾರ್ ಧರ್ಮಸೇನಾ ಅವರೊಂದಿಗೆ ಆನ್-ಫೀಲ್ಡ್ ಅಂಪೈರ್‌ಗಳಾದ ಅಹ್ಸಾನ್ ರಜಾ ಮತ್ತು ಸ್ಯಾಮ್ ನೊಗಾಜ್ಸ್ಕಿ ಅವರು ಆರೋಪಗಳನ್ನು ತಿಳಿಸಿದ್ದಾರೆ.
ತಂಝೀಮ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ. ಹೀಗಾಗಿ ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಅವರು ಪ್ರಸ್ತಾಪಿಸಿದ ದಂಡವನ್ನು ಒಪ್ಪಿಕೊಂಡರು.
ತಂಝೀಮ್ ಸಾಕಿಬ್ ಪಂದ್ಯ-ವಿಜೇತ ಪ್ರದರ್ಶನ
ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪರ ಬೌಲಿಂಗ್‌ನಲ್ಲಿ 2ನೇ ಅತ್ಯುತ್ತಮ ಅಂಕಿಅಂಶಗಳನ್ನು ತಂಝೀಮ್ ಹಸನ್ ಸಾಕಿಬ್ ದಾಖಲಿಸಿದ್ದಾರೆ. ಈ ಪಂದ್ಯದಲ್ಲಿ 21 ಡಾಟ್ ಬಾಲ್‌ಗಳನ್ನು ಎಸೆದರು. ಇದು ಟಿ20 ವಿಶ್ವಕಪ್ ಸ್ಪೆಲ್‌ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಆಗಿದ್ದಾರೆ.
ಈ 21 ರನ್‌ಗಳ ಗೆಲುವು ಬಾಂಗ್ಲಾದೇಶ ತಂಡವನ್ನು ಪಂದ್ಯಾವಳಿಯ ಸೂಪರ್ 8ರ ಹಂತಕ್ಕೆ ಮುನ್ನಡೆಸಿದೆ. ನಜ್ಮುಲ್ ಹೊಸೈನ್ ಶಾಂಟೊ ನಾಯಕತ್ವದ ತಂಡವು ಭಾರತ, ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳೊಂದಿಗೆ ಗುಂಪು 1ರಲ್ಲಿ ಸ್ಥಾನ ಪಡೆದಿದೆ.
ಬಾಂಗ್ಲಾದೇಶ ತಂಡವು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ, ಜೂನ್ 21ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications