T20 World Cup 2024: ಐರ್ಲೆಂಡ್ ಬಿಗಿ ಬೌಲಿಂಗ್ ದಾಳಿ; ಕುಸಿದ ಕೆನಡಾಕ್ಕೆ ನಿಕೋಲಸ್ ಕಿರ್ಟನ್ ಆಸರೆ
ಜೂನ್ 7 ಶುಕ್ರವಾರ, 2024ರ ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ 13ನೇ ಪಂದ್ಯದಲ್ಲಿ ಐರ್ಲೆಂಡ್ ಬೌಲಿಂಗ್ ದಾಳಿ ಎದುರು ಕೆನಡಾ ಸಾಧಾರಣ ಮೊತ್ತ ಕಲೆ ಹಾಕಿದೆ.
ಸಂಕಷ್ಟದಲ್ಲಿದ ಕೆನಡಾ ಪರ ನಿಕೋಲಸ್ ಕಿರ್ಟನ್ ಉತ್ತಮ ರನ್ ಹೊಡೆದು ಆಸರೆಯಾದರು. ನಿಗದಿತ 20 ಓವರ್‌ಗಳಲ್ಲಿ ಕೆನಡಾ 7 ವಿಕೆಟ್‌ಗಳನ್ನು ಕಳೆದುಕೊಂಡು 137 ರನ್‌ಗಳನ್ನು ಕೆಲ ಹಾಕಿದೆ. ಐರ್ಲೆಂಡ್ ಗೆಲುವಿಗೆ 138 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ಶುರುವಿನಲ್ಲೇ ಆರಂಭಿಕರಾದ ಆರನ್ ಜಾನ್ಸನ್ವಿಕೆಟ್ (14) ಮತ್ತು ನವನೀತ್ ಧಲಿವಾಲ್ (6) ಕೆನಡಾ ಪರ ಉತ್ತಮ ಅಡಿಪಾಯ ಹಾಕಲಿಲ್ಲ.
ಬಳಿಕ ಬಂದ ಪರ್ಗತ್ ಸಿಂಗ್ ಕೇವಲ 18 ರನ್ ಗಳಿಸಿ ಔಟ್ ಆದರೆ, ದಿಲ್‌ಪ್ರೀತ್ ಬಾಜ್ವಾ 6 ರನ್‌ಗೆ ತಮ್ಮ ಆಟ ನಿಲ್ಲಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಂತರ ಒಂದಾದ ನಿಕೋಲಸ್ ಕಿರ್ಟನ್ ಮತ್ತು ಶ್ರೇಯಸ್ ಮೊವ್ವಾ ಉತ್ತಮ ಜೊತೆಯಾಟವಾಡುವ ಮೂಲಕ ಕುಸಿದ ಕೆನಡಾ ತಂಡವನ್ನು ಮೇಲೆತ್ತಿದ್ದರು.
ಐರ್ಲೆಂಡ್ ಬಿಗಿ ಬೌಲಿಂಗ್ ದಾಳಿ ದಿಟ್ಟವಾಗಿ ಎದುರಿಸಿದ ನಿಕೋಲಸ್ ಕಿರ್ಟನ್ ಅರ್ಧಶತಕ ಹೊಸ್ತಿಲಲ್ಲಿ ಔಟ್ ಆದರು. 35 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ನಿಕೋಲಸ್ ಕಿರ್ಟನ್ 49 ರನ್ ಗಳಿಸಿದರು.
ಮತ್ತೊಂದೆಡೆ 37 ರನ್ ಹೊಡದು ಅದ್ಭುತವಾಗಿ ಆಡುತ್ತಿದ ಶ್ರೇಯಸ್ ಮೊವ್ವಾ ರನೌಟ್ ಆದರು. ದಿಲ್ಲನ್ ಹೇಲಿಗರ್ ಕೂಡ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ನಾಯಕ ಸಾದ್ ಬಿನ್ ಜಾಫರ್ ಅಜೇಯ 1 ರನ್ ಗಳಿಸಿದರು.
ಐರ್ಲೆಂಡ್ ಪರ ಕ್ರೇಗ್ ಯಂಗ್ ಮತ್ತು ಬ್ಯಾರಿ ಮೆಕಾರ್ಥಿ 2 ವಿಕೆಟ್ ಪಡೆದು ಮಿಂಚಿದರು. ಗರೆಥ್ ಡೆಲಾನಿ ಹಾಗು ಮಾರ್ಕ್ ಅಡೇರ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಕೆನಡಾ vs ಐರ್ಲೆಂಡ್ ಆಡುವ 11ರ ಬಳಗ
ಕೆನಡಾ ತಂಡ : ಆರನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವಾ(ವಿ.ಕೀ), ದಿಲ್‌ಪ್ರೀತ್ ಬಾಜ್ವಾ, ಸಾದ್ ಬಿನ್ ಜಾಫರ್(ನಾಯಕ), ದಿಲ್ಲನ್ ಹೇಲಿಗರ್, ಕಲೀಮ್ ಸನಾ, ಜುನೈದ್ ಸಿದ್ದಿಕಿ, ಜೆರೆಮಿ ಗಾರ್ಡನ್.
ಐರ್ಲೆಂಡ್ ತಂಡ : ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್(ನಾಯಕ), ಲೋರ್ಕನ್ ಟಕರ್(ವಿ.ಕೀ), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ಕ್ರೇಗ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications