Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಕೆನಡಾ ಎದುರು ಗೆಲುವಿನ ಅಂಚಿನಲ್ಲಿ ಮುಗ್ಗರಿಸಿದ ಐರ್ಲೆಂಡ್‌

ಜೂನ್‌ 7 ಶುಕ್ರವಾರ, ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನ 13ನೇ ಪಂದ್ಯದಲ್ಲಿ ಕೆನಡಾ ಎದುರು ಗೆಲ್ಲುವ ಪಂದ್ಯದಲ್ಲಿ ಐರ್ಲೆಂಡ್ ಮುಗ್ಗರಿಸಿದೆ.

ಕೆನಡಾ ಬ್ಯಾಟಿಂಗ್‌ನಲ್ಲಿ ಹೆಚ್ಚು ರನ್‌ ಗಳಿಸಲು ವಿಫಲವಾದರೂ, ಬೌಲಿಂಗ್‌ನಲ್ಲಿ ಮಿಂಚಿನ ದಾಳಿ ನಡೆಸಿ ಐರ್ಲೆಂಡ್‌ ತಂಡವನ್ನು ಕಟ್ಟಿ ಹಾಕಿದೆ. ಕೆನಡಾ ನೀಡಿದ 138 ರನ್ ಗಳ ಗುರಿಯನ್ನು ತಲುಪಲು ಸಾಧ್ಯವಾಗದ ಐರ್ಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಲಷ್ಟೆ ಶಕ್ತವಾಯಿತು. ಹೀಗಾಗಿ ಕೆನಡಾ 12 ರನ್‌ ಗಳ ಅಮೋಘ ಜಯ ‌ಗಳಿಸಿತು.

T20 World Cup 2024 Canada Wins Against Ireland

ಕೆನಡಾ ನೀಡಿದ ಟಾರ್ಗೆಟ್‌ ಚೇಸಿಂಗ್‌ ಮಾಡಿದ ಐರ್ಲೆಂಡ್‌ ಕೂಡ ಆರಂಭದಲ್ಲಿ ನಾಯಕ ಪಾಲ್ ಸ್ಟಿರ್ಲಿಂಗ್ (9) ಮತ್ತು ಆಂಡ್ರ್ಯೂ ಬಾಲ್ಬಿರ್ನಿ (17) ವಿಕೆಟ್‌ ಕಳೆದುಕೊಂಡಿತು. ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಲೋರ್ಕನ್ ಟಕರ್ 10 ರನ್‌ ಗಳಿಸಿ ರನೌಟ್‌ ಆದರು.

ನಂತರ ಬಂದ ಹ್ಯಾರಿ ಟೆಕ್ಟರ್ ಹಾಗು ಕರ್ಟಿಸ್ ಕ್ಯಾಂಫರ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಒಬ್ಬರ ಹಿಂದ ಒಬ್ಬರಂತೆ ಹ್ಯಾರಿ ಟೆಕ್ಟರ್ 7 ರನ್‌ಗೆ ಔಟ್‌ ಆದರೆ, ಕರ್ಟಿಸ್ ಕ್ಯಾಂಫರ್ ಕೇವಲ 4 ರನ್‌ಗೆ ವಿಕೆಟ್‌ ಕಳೆದುಕೊಂಡರು. ಗರೆಥ್ ಡೆಲಾನಿ ಕೂಡ 3 ರನ್‌ಗೆ ತಮ್ಮ ಆಟ ನಿಲ್ಲಿಸಿದರು.

ಸುಲಭ ಗುರಿ ಚೇಸಿಂಗ್‌ ಮಾಡುತ್ತಿದ ಐರ್ಲೆಂಡ್‌ ಗೆಲ್ಲುವ ನಿರೀಕ್ಷೆಯಲ್ಲಿತು. ಆದರೆ ಕಡಿಮೆ ಮೊತ್ತಕ್ಕೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಒಂದಾದ ಜಾರ್ಜ್ ಡಾಕ್ರೆಲ್ ಮತ್ತು ಮಾರ್ಕ್ ಅಡೇರ್ ಐರ್ಲೆಂಡ್‌ ಗೆಲುವಿನ ಆಸೆ ಚಿಗುರಿಸಿದರು.

ಆದರೆ ಕೊನೆಯ 19 ಓವರ್‌ನಲ್ಲಿ 34 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ ಮಾರ್ಕ್ ಅಡೇರ್ ವಿಕೆಟ್‌ ಚೆಲ್ಲಿದರು. ನಂತರ ಬ್ಯಾರಿ ಮೆಕಾರ್ಥಿ ಕೇವಲ 2 ರನ್‌ ಗಳಿಸಿದರು. ಮತ್ತೊಂದೆಡೆ ಜಾರ್ಜ್ ಡಾಕ್ರೆಲ್ ಅಜೇಯ 30 ರನ್‌ ಗಳಿಸಿ ಐರ್ಲೆಂಡ್‌ ಗೆಲುವಿಗೆ ಹೋರಾಡಿದರು.

ಕೆನಡಾ ಪರ ಸಂಘಟಿತ ಬೌಲಿಂಗ್‌ ದಾಳಿ ನಡೆಸಲಾಯಿತು. ಪರಿಣಾಮ ಜೆರೆಮಿ ಗಾರ್ಡನ್ ಹಾಗು ದಿಲ್ಲನ್ ಹೇಲಿಗರ್ ತಲಾ 2 ವಿಕೆಟ್‌ ಕಬಳಿಸಿ ಸಂಭ್ರಮಿಸಿದರೆ, ಸಾದ್ ಬಿನ್ ಜಾಫರ್ ಮತ್ತು ಜುನೈದ್ ಸಿದ್ದಿಕಿ ತಲಾ ಒಂದೊಂದು ವಿಕೆಟ್‌ ಪಡೆಯುವ ಮೂಲಕ ಕೆನಡಾ ಗೆಲುವಿನ ರೂವಾರಿಗಳಾದರು.

Story first published: Friday, June 7, 2024, 23:34 [IST]
Other articles published on Jun 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+