For Quick Alerts
ALLOW NOTIFICATIONS  
For Daily Alerts
 

T20 World Cup 2024: ಇವರೇ ಕೆರಿಬಿಯನ್ ಪಿಚ್‌ಗಳಲ್ಲಿ ಅಬ್ಬರಿಸಬಲ್ಲ 3 ಟೀಮ್‌ ಇಂಡಿಯಾ ಆಟಗಾರರು!

ಜೂನ್‌ 18 ಮಂಗಳವಾರ, 2024ರ ಟಿ20 ವಿಶ್ವಕಪ್‌ನ ಸೂಪರ್-8 ಹಂತದಲ್ಲಿ ತನ್ನ ಪಂದ್ಯಗಳನ್ನು ಆಡಲು ಟೀಮ್‌ ಇಂಡಿಯಾ ಸಜ್ಜಾಗಿದ್ದು, ಇದಕ್ಕೆ ಸಾಕಷ್ಟು ತಯಾರಿ ಕೂಡ ನಡೆಸಿದೆ.

ಜೂನ್ 20 ರಂದು ಅಫ್ಘಾನಿಸ್ತಾನ ವಿರುದ್ಧ ಭಾರತ ಆಡಲಿದೆ. ಬಳಿಕ ಜೂನ್ 22-24 ರಂದು ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಸೂಪರ್-8ರಲ್ಲಿ ಎದುರಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್‌ ಇಂಡಿಯಾ ತನ್ನ ಸಂಘಟಿತ ಸಾಮರ್ಥ್ಯದಿಂದ ಗೆಲುವು ಕಾಣಲು ರೆಡಿಯಾಗಿದೆ.

ರೋಹಿತ್‌ ಶರ್ಮಾ ಪಡೆಯ ಬಲವು ಅವರ ಪ್ರಬಲ ಬ್ಯಾಟಿಂಗ್ ಆಗಿದೆ. ನ್ಯೂಯಾರ್ಕ್‌ನಲ್ಲಿ ಟೀಮ್‌ ಇಂಡಿಯಾ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರಲ್ಲಿ ಗೆದ್ದರೆ, ಒಂದರಲ್ಲಿ ಡ್ರಾ ಸಾಧಿಸಿತ್ತು. ಆದರೆ ಗುಂಪು ಹಂತದಲ್ಲಿ ಟೀಮ್‌ ಇಂಡಿಯಾ ಉತ್ತಮ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ.

ನ್ಯೂಯರ್ಕ್ ಪಿಚ್‌ ಬೌಲರ್‌ಗಳಿಗೆ ಅನುಕೂಲಕರವಾಗಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡುವ ತಂಡಗಳ ಸರಾಸರಿ ಟಾರ್ಗೆಟ್‌ ಸ್ಕೋರ್ 120-125 ಆಗಿತ್ತು. ಇದೀಗ ಟೀಮ್‌ ಇಂಡಿಯಾ ಸೂಪರ್‌-8 ಪಂದ್ಯಗಳನ್ನು ಆಡಲು ವೆಸ್ಟ್‌ ಇಂಡೀಸ್‌ಗೆ ತೆರಳಿದೆ. ಕೆರಿಬಿಯನ್‌ ಪಿಚ್‌ಗಳಲ್ಲಿ ಬ್ಯಾಟರ್‌ಗಳು ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಹಾಗದರೆ ಟೀಮ್‌ ಇಂಡಿಯಾದ ಮೂವರು ಬ್ಯಾಟರ್‌ಗಳ ಮಾಹಿತಿ ಇಲ್ಲಿದೆ.

T20 World Cup 2024 Do you know 3 players who can play well for Team India on Caribbean pitches

ರೋಹಿತ್ ಶರ್ಮಾ

ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಟಿ20 ಅಂಕಿಅಂಶಗಳು ವೆಸ್ಟ್ ಇಂಡೀಸ್ ಪಿಚ್‌ಗಳಲ್ಲಿ ಉತ್ತಮವಾಗಿದೆ. ವೆಸ್ಟ್ ಇಂಡೀಸ್‌ನಲ್ಲಿ ರೋಹಿತ್ 6 ಇನ್ನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳ ಸಹಾಯದಿಂದ 185 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ ಅವರ ಸ್ಟ್ರೈಕ್ ರೇಟ್ 145.66 ಆಗಿದೆ. ಪ್ರಸುತ್ತ ನಡೆಯುತ್ತಿರುವ ಟಿ20 ವಿಶ್ವಕಪ್ 2024ರ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅದ್ಭುತ ಅರ್ಧಶತಕವನ್ನು ಸಿಡಿಸಿದ್ದರು. ಈಗ ರೋಹಿತ್‌ ಬ್ಯಾಟ್ ಸೂಪರ್-8 ರಲ್ಲಿ ವೆಸ್ಟ್ ಇಂಡೀಸ್‌ ಪಿಚ್‌ಗಳಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

T20 World Cup 2024 Do you know 3 players who can play well for Team India on Caribbean pitches

ಸೂರ್ಯಕುಮಾರ್ ಯಾದವ್

ಭಾರತ ತಂಡದ ಮಧ್ಯಮ ಕ್ರಮಾಂಕದ ಮತ್ತು ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್‌ ಆಗಿರುವ ಸೂರ್ಯಕುಮಾರ್ ಯಾದವ್ ಅವರು ವೆಸ್ಟ್ ಇಂಡೀಸ್‌ನಲ್ಲಿ ಸೊಗಸಾಗಿ ಆಡಿದ್ದಾರೆ.

ಸೂರ್ಯ, ಕೆರಿಬಿಯನ್ ಪಿಚ್‌ನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 36ರ ಅತ್ಯುತ್ತಮ ಸರಾಸರಿ ಮತ್ತು 161.19ರ ಸ್ಟ್ರೈಕ್ ರೇಟ್‌ನಲ್ಲಿ 216 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಸೂರ್ಯ 2 ಅರ್ಧಶತಕಗಳನ್ನು ಕೂಡ ಗಳಿಸಿದ್ದಾರೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಭಾರತ ಪರ ಸೂರ್ಯ ಯುಎಸ್ಎ ವಿರುದ್ಧ ಗುಂಪು ಹಂತದ ಮೂರನೇ ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದ್ದರು.

T20 World Cup 2024 Do you know 3 players who can play well for Team India on Caribbean pitches

ವಿರಾಟ್ ಕೊಹ್ಲಿ

ಕೆರಿಬಿಯನ್ ಪಿಚ್‌ಗಳಲ್ಲಿ ಟೀಮ್‌ ಇಂಡಿಯಾ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ದೊಡ್ಡದಾಗಿ ಸದ್ದು ಮಾಡಿದ್ದಾರೆ. ಕೊಹ್ಲಿ 3 ಟಿ20 ಪಂದ್ಯಗಳಲ್ಲಿ 37.33 ಸರಾಸರಿ ಮತ್ತು 141.77 ಸ್ಟ್ರೈಕ್ ರೇಟ್‌ನೊಂದಿಗೆ 112 ರನ್ ಗಳಿಸಿದ್ದಾರೆ. ಈ ವೇಳೆ ಕೊಹ್ಲಿ 1 ಅರ್ಧಶತಕವನ್ನೂ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ಉತ್ತಮ ಸ್ಕೋರ್ 59 ರನ್ ಆಗಿದೆ. ಆದರೆ ನ್ಯೂಯಾರ್ಕ್‌ನಲ್ಲಿ ವಿರಾಟ್ ರನ್‌ ಗಳಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಟಿ20 ವಿಶ್ವಕಪ್‌ನ ಗುಂಪು ಹಂತದ 3 ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿದ್ದಾರೆ. ಈಗ ವೆಸ್ಟ್ ಇಂಡೀಸ್‌ನಲ್ಲಿ ತಮ್ಮ ಹಳೆಯ ಫಾರ್ಮಾಗೆ ಮರಳಲು ಕೊಹ್ಲಿ ರೆಡಿಯಾಗಿದ್ದಾರೆ.

Story first published: Tuesday, June 18, 2024, 16:00 [IST]
Other articles published on Jun 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+