Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಇಂಗ್ಲೆಂಡ್‌ ಎದುರು ಸೈಲೆಂಟ್ ಆದ ಒಮಾನ್‌; ಸೂಪರ್-8 ತಲುಪುವ ‌ಆಂಗ್ಲರ ಕನಸು ಜೀವಂತ!

ಜೂನ್‌ 14 ಶುಕ್ರವಾರ, ವೆಸ್ಟ್‌ ಇಂಡೀಸ್‌ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ 28ನೇ ಗುಂಪು ಹಂತದ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್‌ ಒಮಾನ್‌ ಎದುರು ಗೆಲುವು ಸಾಧಿಸಿದೆ.

ಒಮಾನ್‌ ತಂಡವನ್ನು ಇಂಗ್ಲೆಂಡ್ 8 ವಿಕೆಟ್ ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸೂಪರ್-8 ತಲುಪುವ ಭರವಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

T20 World Cup 2024 Easy win for England against Oman

ಆದಿಲ್ ರಶೀದ್ ಅದ್ಭುತ ಬೌಲಿಂಗ್‌ ಪ್ರದರ್ಶನದಿಂದ ಒಮಾನ್ 47 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಸುಲಭ ಗುರಿ ಚೇಸಿಂಗ್‌ ಮಾಡಿದ ಇಂಗ್ಲೆಂಡ್‌ 2 ವಿಕೆಟ್‌ ಕಳೆದುಕೊಂಡು 3.1 ಓವರ್‌ಗಳಲ್ಲೇ ಪಂದ್ಯವನ್ನು ಗೆದ್ದಿದೆ.

ಮೊದಲು ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಹೀಗಾಗಿ ಒಮಾನ್ ಇನ್ನಿಂಗ್ಸ್ ಆರಂಭಿಸಿತು. ಶುರುವಿನಿಂದಲ್ಲೇ ಬಿಗಿ ಬೌಲಿಂಗ್‌ ದಾಳಿ ನಡೆಸಿದ ಇಂಗ್ಲೆಂಡ್‌ ಬೌಲರ್‌ ಒಮಾನ್‌ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.

ಒಮಾನ್‌ ತಂಡ 25 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಕಶ್ಯಪ್ ಪ್ರಜಾಪತಿ (9) ಮತ್ತು ಪ್ರತೀಕ್ ಅಠವಳೆ (5) ಆರಂಭಿಕ ಜೋಡಿ ಒಮಾನ್‌ಗೆ ಉತ್ತಮ ಅಡಿಪಾಯ ಹಾಕದೆ ವಿಕೆಟ್‌ ಕಳೆದುಕೊಂಡರು.

ಬಳಿಕ ಮಾಧ್ಯಮ ಕ್ರಮಾಂಕದಲ್ಲಿ ಒಮಾನ್‌ ತಂಡಕ್ಕೆ ಅಕಿಬ್ ಇಲ್ಯಾಸ್ (8), ಜೀಶನ್ ಮಕ್ಸೂದ್ (1) ಮತ್ತು ಖಾಲಿದ್ ಕೈಲ್ (1) ಆಸರೆಯಾಗದೆ ಔಟ್‌ ಆದರು. ನಂತದ ಕ್ರೀಸ್‌ ಬಂದ ಒಮಾನ್‌ ಬ್ಯಾಟರ್‌ಗು ಬಹುಬೇಗ ವಿಕೆಟ್‌ ಕಳೆದುಕೊಂಡರು.

ಅಯಾನ್ ಖಾನ್ (1), ಶೋಯೆಬ್ ಖಾನ್ (11), ಮೆಹ್ರಾನ್ ಖಾನ್ (0), ಫಯಾಜ್ ಬಟ್ (2) ಹಾಗು ಕಲೀಮುಲ್ಲಾ (5) ಅವರು ಇಂಗ್ಲೆಂಡ್‌ ಬೌಲಿಂಗ್‌ ದಾಳಿಗೆ ರನ್‌ ಗಳಿಸಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್‌ ಪರ ಲೆಗ್ ಸ್ಪಿನ್ನರ್ ರಶೀದ್ (4), ವೇಗದ ಬೌಲರ್‌ಗಳಾದ ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ 3 ವಿಕೆಟ್‌ ಪಡೆದು ಮಿಂಚಿದರು.

ಇಂಗ್ಲೆಂಡ್‌ ಗೆಲುವು

ಒಮಾನ್ ನೀಡಿದ 48 ರನ್‌ಗಳ ಟಾರ್ಗೆಟ್‌ ಬೆನ್ನಟ್ಟಿದ ಆಂಗ್ಲರು ಮೊದೆಲೆರಡು ಓವರ್‌ಗಲ್ಲೇ 2 ವಿಕೆಟ್‌ ಕಳೆದುಕೊಂಡಿತ್ತು. ಆರಂಭಿಕ ಬ್ಯಾಟರ್‌ ಫಿಲಿಪ್ ಸಾಲ್ಟ್ 12 ರನ್‌ಗಳಿಸಿ ಔಟ್‌ ಆದರೆ, ವಿಕ್‌ ಜ್ಯಾಕ್ಸ್‌ 5 ಹೊಡೆದು ವಿಕೆಟ್‌ ಕಳೆದುಕೊಂಡರು.

ನಂತರ ನಾಯಕ ಜೋಸ್‌ ಬಟ್ಲರ್ (24)‌ ಹಾಗು ಜಾನಿ ಬೈರ್‌ಸ್ಟೋವ್‌ (8) ಅವರು 3.1 ಓವರ್‌ಗಳಲ್ಲಿ ಪಂದ್ಯವನ್ನು ಮುಗಿಸಿದರು.

ಒಮಾನ್‌ ಪರ ಕಲೀಮುಲ್ಲಾ ಮತ್ತು ಬಿಲಾಲ್ ಖಾನ್ ತಲಾ ಒಂದೊಂದು ವಿಕೆಟ್‌ ಪಡೆದರು.

ಇಂಗ್ಲೆಂಡ್‌ vs ಒಮಾನ್‌ ಪ್ಲೇಯಿಂಗ್‌-11

ಇಂಗ್ಲೆಂಡ್‌ ತಂಡ: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ ಮತ್ತು ವಿ.ಕೀ), ವಿಲ್ ಜ್ಯಾಕ್ಸ್, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ

ಒಮಾನ್‌ ತಂಡ: ಕಶ್ಯಪ್ ಪ್ರಜಾಪತಿ, ಪ್ರತೀಕ್ ಅಠವಳೆ (ವಿ.ಕೀ), ಅಕಿಬ್ ಇಲ್ಯಾಸ್ (ನಾಯಕ), ಜೀಶನ್ ಮಕ್ಸೂದ್, ಖಾಲಿದ್ ಕೈಲ್, ಅಯಾನ್ ಖಾನ್, ಶೋಯೆಬ್ ಖಾನ್, ಮೆಹ್ರಾನ್ ಖಾನ್, ಫಯಾಜ್ ಬಟ್, ಕಲೀಮುಲ್ಲಾ, ಬಿಲಾಲ್ ಖಾನ್

Story first published: Friday, June 14, 2024, 8:30 [IST]
Other articles published on Jun 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+