T20 World Cup: ಹಾಲಿ ಚಾಂಪಿಯನ್‌ಗೆ ಆಘಾತ; ಟಿ20 ವಿಶ್ವಕಪ್ ಆಯ್ಕೆಯಿಂದ ಹೊರಗುಳಿದ ಆಲ್‌ರೌಂಡರ್!
ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಆಲ್‌ರೌಂಡರ್ ಆಗಿ ಆಡಲು ಸಾಕಷ್ಟು ಫಿಟ್ ಆಗಲು ಸಮಯವನ್ನು ನೀಡಲು ಬಯಸಿದ್ದಾರೆ ಎನ್ನಲಾಗಿದೆ.
2024ರ ಐಸಿಸಿ ಟಿ20 ವಿಶ್ವಕಪ್ ಒಂಬತ್ತನೇ ಆವೃತ್ತಿಯ ಜೂನ್ 2ರಿಂದ ಜೂನ್ 29ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿದೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಪಂದ್ಯಾವಳಿಯ ಹಿಂದಿನ ಅವೃತ್ತಿಯಲ್ಲಿ ಇಂಗ್ಲೆಂಡ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.

ಈ ವರ್ಷ ಇಂಗ್ಲೆಂಡ್ ಮೂರು ಟಿ20 ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡವೆನಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಆದರೆ, ಅವರು ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರ ಸೇವೆಯನ್ನು ಹೊಂದಿರುವುದಿಲ್ಲ.
ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತನ್ನ ಬೌಲಿಂಗ್ ಫಿಟ್ನೆಸ್ ಅನ್ನು ಮರಳಿ ಪಡೆಯಲು ಬಯಸುತ್ತಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.
ಆಲ್‌ರೌಂಡರ್ ಆಗಿ ಆಡಲು ಫಿಟ್ ಆಗುವ ಗುರಿಯೊಂದಿಗೆ ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದಲೂ ಹೊರಗುಳಿಯಲು ಬಯಸಿದ್ದರು.

"ನಾನು ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದೇನೆ ಮತ್ತು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಆಲ್‌ರೌಂಡರ್ ಆಗಿ ಪೂರ್ಣ ಪಾತ್ರವನ್ನು ಪೂರೈಸಲು ನನ್ನ ಬೌಲಿಂಗ್ ಫಿಟ್ನೆಸ್ ಅನ್ನು ಮರಳಿ ಪಡೆಯುವತ್ತ ಗಮನಹರಿಸುತ್ತಿದ್ದೇನೆ. ಐಪಿಎಲ್ ಮತ್ತು ಟಿ20 ವಿಶ್ವಕಪ್‌ನಿಂದ ಹೊರಗುಳಿಯುವುದು ಆಶಾದಾಯಕವಾಗಿ ನಾನು ನಿರೀಕ್ಷಿತ ಭವಿಷ್ಯಕ್ಕಾಗಿ ಆಲ್‌ರೌಂಡರ್ ಆಗಲು ಬಯಸುವ ತ್ಯಾಗವಾಗಿದೆ," ಎಂದು ಇಸಿಬಿಗೆ ನೀಡಿದ ಸಂದರ್ಶನದಲ್ಲಿ ಬೆನ್ ಸ್ಟೋಕ್ಸ್ ಹೇಳಿದ್ದಾರೆ.
"ಇತ್ತೀಚೆಗಿನ ಭಾರತದ ಟೆಸ್ಟ್ ಪ್ರವಾಸವು ನನ್ನ ಮೊಣಕಾಲು ಶಸ್ತ್ರಚಿಕಿತ್ಸೆಯ ಬಳಿಕ ಮತ್ತು ಬೌಲಿಂಗ್ ಮಾಡದೆ ಒಂಬತ್ತು ತಿಂಗಳ ನಂತರ, ಬೌಲಿಂಗ್ ದೃಷ್ಟಿಕೋನದಿಂದ ನಾನು ಎಷ್ಟು ಹಿಂದುಳಿದಿದ್ದೇನೆ ಎಂಬುದನ್ನು ಎತ್ತಿ ತೋರಿಸುತ್ತದೆ. ನಮ್ಮ ಟೆಸ್ಟ್ ಬೇಸಿಗೆಯ ಆರಂಭದ ಮೊದಲು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಡರ್ಹಾಮ್‌ಗಾಗಿ ಆಡಲು ನಾನು ಎದುರು ನೋಡುತ್ತಿದ್ದೇನೆ," ಎಂದರು.
"ನಮ್ಮ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಜೋಸ್ ಬಟ್ಲರ್, ಮೊಟ್ಟಿ ಮತ್ತು ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ," ಎಂದು ಬೆನ್ ಸ್ಟೋಕ್ಸ್ ತಿಳಿಸಿದರು.
ಇಂಗ್ಲೆಂಡ್ ತಂಡವು ಮೇ ತಿಂಗಳಲ್ಲಿ ಪಾಕಿಸ್ತಾನ ವಿರುದ್ಧ ತವರಿನಲ್ಲಿ ಆಡುವ ನಾಲ್ಕು ಪಂದ್ಯಗಳ ಟಿ20 ಸರಣಿಯು ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ಪೂರ್ವ ತಯಾರಿಯಾಗಿರಲಿದೆ.
ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ, ಓಮನ್, ನಮೀಬಿಯಾ ಮತ್ತು ಸ್ಕಾಟ್ಲೆಂಡ್‌ನಂತಹ ತಂಡಗಳೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ.
ಇಂಗ್ಲೆಂಡ್ ತನ್ನ ಅಭಿಯಾನವನ್ನು ಜೂನ್ 4ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನೆರೆಯ ಸ್ಕಾಟ್‌ಲ್ಯಾಂಡ್ ತಂಡವನ್ನು ಎದುರಿಸುವುದರೊಂದಿಗೆ ಪ್ರಾರಂಭಿಸಲಿದೆ. ಇದೇ ಮೈದಾನದಲ್ಲಿ ಜೂನ್ 8ರಂದು ಆಸ್ಟ್ರೇಲಿಯಾ ವಿರುದ್ಧದ ಹೈ-ವೋಲ್ಟೇಜ್ ಹಣಾಹಣಿ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications