Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ಭಾರತಕ್ಕೆ ಗುಡ್‌ ನ್ಯೂಸ್‌!

ಜೂನ್‌ 27 ಗುರುವಾರ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲು ಸಿದ್ಧವಾಗಿದೆ. ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಹೈವೋಲ್ಟೇಜ್‌ ಪಂದ್ಯ ಆರಂಭವಾಗಲಿದೆ.

ಗುಂಪು ಹಂತ ಹಾಗೂ ಸೂಪರ್- 8ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ ಸೇಡು ತೀರಿಸಿಕೊಳ್ಳುವತ್ತ ದೃಷ್ಟಿ ಹಾಯಿಸಿದೆ. ಕೊನೆಯ ಬಾರಿಗೆ 2022ರ ಟಿ 20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಇಂಗ್ಲೆಂಡ್‌ ಸೋಲಿಸಿತ್ತು. ಇದೀಗ ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ.

T20 World Cup 2024 Good news for India before the semi-final match

ಗಯಾನಾದಲ್ಲಿ ಸ್ಪಷ್ಟ ಹವಾಮಾನ

ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ಮಳೆಯಾಗಲಿಲ್ಲ. ಆದರೆ ಗಯಾನಾದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಬುಧವಾರ ಗಯಾನಾದಲ್ಲಿ ಮಳೆ ಸುರಿದಿದೆ. ಹೀಗಾಗಿ ಇಂದು ಕೂಡ ಎರಡನೇ ಸೆಮಿಫೈನಲ್‌ನಲ್ಲೂ ಅದೇ ರೀತಿ ಮಳೆಯನ್ನು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಪಂದ್ಯದ ವೇಳೆ 10:30 (ಸ್ಥಳೀಯ ಕಾಲಮಾನ) ನಂತರ ನಿರಂತರ ಮಳೆಯಾಗುವ ಸಾಧ್ಯತೆಯಿದೆ.

ಆದರೆ, ಈಗ ವಾತಾವರಣ ಸ್ಪಷ್ಟವಾಗಿದೆ. ಕಳೆದ ಎರಡು ದಿನಗಳಿಂದ ಇಲ್ಲಿ ಮಳೆಯಾಗುತ್ತಿದೆ. ಈಗ ಪಂದ್ಯದ ವಾತಾವರಣ ಹೇಗಿದೆ ಎಂಬುದನ್ನು ಪ್ರಶ್ನೆಯಾಗಿದೆ.

ಇಡೀ ದಿನ ಮಳೆಯಾಗುವ ಸಾಧ್ಯತೆ

ಅಕ್ಯುವೆದರ್ ಪ್ರಕಾರ, ಗಯಾನದಲ್ಲಿ ದಿನವಿಡೀ ಮಳೆಯಾಗುವ ಸಾಧ್ಯತೆಯಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 9:00ರ ನಂತರ (ಭಾರತೀಯ ಕಾಲಮಾನ ಬೆಳಿಗ್ಗೆ 6:30) ಮಳೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಸ್ಥಳೀಯ ಕಾಲಮಾನ ರಾತ್ರಿ 11:00 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 8:30 ಗಂಟೆಗೆ) ಮಳೆಯ ಸಂಭವನೀಯತೆ ಅತ್ಯಧಿಕವಾಗಿರುತ್ತದೆ. ಇದಾದ ನಂತರ ಮಳೆ ಸ್ವಲ್ಪ ಕಡಿಮೆಯಾಗಲಿದೆ.

ಮಳೆಯಿಂದಾಗಿ ಪಂದ್ಯ ರದ್ದಾದರೆ?

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎರಡನೇ ಸೆಮಿಫೈನಲ್‌ಗೆ ಒಂದೇ ಒಂದು ಮೀಸಲು ದಿನವನ್ನು ಇರಿಸಿಲ್ಲ. ಆದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವನ್ನು ಪೂರ್ಣಗೊಳಿಸಲು ಸುಮಾರು 4 ಗಂಟೆಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ.

ಈ ಪಂದ್ಯದಿಂದ ಯಾವುದೇ ಫಲಿತಾಂಶವನ್ನು ಪಡೆಯಬೇಕಾದರೆ ಎರಡೂ ಕಡೆಯಿಂದ 10-10 ಓವರ್‌ಗಳ ಪಂದ್ಯವನ್ನು ಹೊಂದಿರುವುದು ಅವಶ್ಯಕ. ಒಂದು ವೇಳೆ ಎರಡೂ ತಂಡಗಳು 10 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಭಾರತ ತಂಡ ಫೈನಲ್ ತಲುಪಲಿದ್ದು, ಇಂಗ್ಲೆಂಡ್ ಟೂರ್ನಿಯಿಂದ ಹೊರಗುಳಿಯಲಿದೆ. ಗ್ರೂಪ್ 1 ಸೂಪರ್-8ರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಇಂಗ್ಲೆಂಡ್ 2 ನೇ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿತ್ತು.

ಸದ್ಯ ಗಯಾನದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಭಾರತ ಫೈನಲ್‌ ಹೋಗುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ ಆಡದೆ ಟೀಮ್‌ ಇಂಡಿಯಾ ಫೈನಲ್‌ ತಲುಪಲದೆಯೇ ಎಂಬುದು ಕುತೂಹಲ ಕೆರಳಿಸಿದೆ.

Story first published: Thursday, June 27, 2024, 18:10 [IST]
Other articles published on Jun 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+