Hardik Pandya: ಡಿವೋರ್ಸ್ ವದಂತಿಗಳ ಬೆನ್ನಲ್ಲೇ ಭಾರತ ಟಿ20 ವಿಶ್ವಕಪ್ ತಂಡದಿಂದ ಕಾಣೆಯಾದ ಉಪನಾಯಕ
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಂಕಷ್ಟಗಳ ಸಂಕೋಲೆಗಳು ಇಲ್ಲಿಗೇ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ರೋಹಿತ್ ಶರ್ಮಾ ಬದಲಾಗಿ ಮುಂಬೈ ಇಂಡಿಯನ್ಸ್ ನಾಯಕನನ್ನಾಗಿ ನೇಮಿಸಿದ ನಂತರ, ನಿರಂತರವಾಗಿ ಅಭಿಮಾನಿಗಳಿಂದ ಹಾರ್ದಿಕ್ ಪಾಂಡ್ಯ ನಿಂದನೆಗೆ ಒಳಗಾದರು.
ಟೂರ್ನಿಯುದ್ದಕ್ಕೂ ಮೈದಾನದಲ್ಲಿ ಬ್ಯಾಟ್ ಮತ್ತು ಬಾಲ್‌ನೊಂದಿಗೆ ಹಾರ್ದಿಕ್ ಪಾಂಡ್ಯ ತೋರಿದ ಪ್ರದರ್ಶನವೂ ಟೀಕೆಗೆ ಗುರಿಯಾಯಿತು. ಮುಂಬೈ ಇಂಡಿಯನ್ಸ್ ತಂಡ ಆಡಿದ ಹದಿನಾಲ್ಕು ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಗೆದ್ದು, ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಅಭಿಯಾನ ಮುಗಿಸಿತು.

ಈ ಎಲ್ಲಾ ಗೊಂದಲದ ನಡುವೆ, ಹಾರ್ದಿಕ್ ಪಾಂಡ್ಯ ಅವರಿಂದ ಪತ್ನಿ ನತಾಸಾ ಸ್ಟಾಂಕೋವಿಕ್ ದೂರವಾಗಿದ್ದು, ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಭಾರೀ ವದಂತಿಗಳು ಕಳೆದ ಎರಡ್ಮೂರು ದಿನಗಳಿಂದ ಹರಿದಾಡುತ್ತಿವೆ.
ನತಾಸಾ ಸ್ಟಾಂಕೋವಿಕ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ "ಪಾಂಡ್ಯ" ಹೆಸರನ್ನು ತೆಗೆದುಹಾದರು ಮತ್ತು ಹಾರ್ದಿಕ್ ಪಾಂಡ್ಯ ಮಾರ್ಚ್ 4ರಂದು ತನ್ನ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸದ ಬಳಿಕ, ಅವರ ವೈವಾಹಿಕ ಸಂಬಂಧದಲ್ಲಿನ ಬಿರುಕುಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ.
ಇದೀಗ ಅನುಭವಿ ಕ್ರಿಕೆಟಿಗ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ಅಭಿಯಾನಕ್ಕೆ ತಯಾರಿ ನಡೆಸುತ್ತಿರುವಾಗ, ಶನಿವಾರ ಯುಎಸ್ಎಗೆ ತೆರಳಿದ ಭಾರತ ತಂಡದ ಮೊದಲ ಬ್ಯಾಚ್ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಕಾಣಲಿಲ್ಲ.

ನಾಯಕ ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟಿಗರು ಐಸಿಸಿ ಪಂದ್ಯಾವಳಿಗಾಗಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸಲು ಆಗಮಿಸಿದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ರೋಹಿತ್ ಶರ್ಮಾ, ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮತ್ತು ರಿಷಭ್ ಪಂತ್ ಗಮನ ಸೆಳೆದ ಆಟಗಾರರು. ಆದರೆ, ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಕಾಣೆಯಾಗಿದ್ದರು.
ಬಿಸಿಸಿಐ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಜೊತೆಗೆ ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಸಹ ಕಾಣಬಹುದು. ಆದರೆ, ಮುಂಬೈ ಇಂಡಿಯನ್ಸ್ ನಾಯಕ ಎಲ್ಲಿಯೂ ಪತ್ತೆಯಾಗಿಲ್ಲ.

ಐಪಿಎಲ್ 2024ರ ಪ್ಲೇಆಫ್‌ಗಳಲ್ಲಿ ಭಾಗಿಯಾಗದ ಮೊದಲ ಬ್ಯಾಚ್ ಆಟಗಾರರನ್ನು ಶನಿವಾರ ಕಳುಹಿಸಲು ಬಿಸಿಸಿಐ ನಿರ್ಧರಿಸಿತು ಮತ್ತು ಇತರ ಆಟಗಾರರು ಫೈನಲ್ ಪಂದ್ಯದ ನಂತರ ತೆರಳಲಿದ್ದಾರೆ.
ಉಪನಾಯಕ ಹಾರ್ದಿಕ್ ಪಾಂಡ್ಯ ತಾಂತ್ರಿಕವಾಗಿ, ಭಾರತ ತಂಡ ಪ್ರಯಾಣಿಸಿದ ಮೊದಲ ಬ್ಯಾಚ್‌ನ ಭಾಗವಾಗಬೇಕಿತ್ತು. ಆದರೆ, ಹಾರ್ದಿಕ್ ಪಾಂಡ್ಯ ಸದ್ಯ ಲಂಡನ್‌ನಲ್ಲಿದ್ದು, ಅಲ್ಲಿಂದಲೇ ನೇರವಾಗಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಮೊದಲ ಬ್ಯಾಚ್ ನಿರ್ಗಮನದಿಂದ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಗೂ, ಅವರ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೂ ಏನಾದರೂ ಸಂಬಂಧವಿದೆಯೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ-ನತಾಸಾ ಸ್ಟಾಂಕೋವಿಕ್ ವಿಚ್ಛೇದನದ ವದಂತಿ
ರೆಡ್ಡಿಟ್‌ನಲ್ಲಿ 'ನತಾಸಾ ಮತ್ತು ಹಾರ್ದಿಕ್ ಬೇರ್ಪಟ್ಟಿದ್ದಾರೆ' ಎಂದು ಪೋಸ್ಟ್ ಹಾಕಿದ ನಂತರ, ನೆಟ್ಟಿಗರು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ.
ಐಪಿಎಲ್ 2024ರ ಪಂದ್ಯಗಳಿಂದ ನತಾಸಾ ಸ್ಟಾಂಕೋವಿಕ್ ಗೈರುಹಾಜರಾಗಿರುವುದನ್ನು ಪ್ರಶ್ನಿಸಿದ್ದಾರೆ ಮತ್ತು ಅವರು ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಯಾವುದೇ ಚಿತ್ರವನ್ನು ಪೋಸ್ಟ್ ಮಾಡಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಸೂಚಿಸಿದ್ದಾರೆ.
ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿರುವಾಗ, ಹಾರ್ದಿಕ್ ಪಾಂಡ್ಯ ಅಥವಾ ನತಾಸಾ ಸ್ಟಾಂಕೋವಿಕ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ, ಈ ಕ್ಷಣದಲ್ಲಿ ವದಂತಿಗಳು ಕೇವಲ ಊಹಾಪೋಹಗಳಾಗಿವ ಉಳಿದಿವೆ.
ನತಾಸಾ ಸ್ಟಾಂಕೋವಿಕ್ ಅವರ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇನ್ನೂ ಹಾರ್ದಿಕ್ ಪಾಂಡ್ಯ ಮತ್ತು ಕುಟುಂಬದ ಇತರರೊಂದಿಗೆ ಅವರ ಚಿತ್ರಗಳು ಇವೆ. ಹಾರ್ದಿಕ್ ಅವರೊಂದಿಗಿನ ಎಲ್ಲಾ ಫೋಟೋಗಳನ್ನು ನತಾಸಾ ಅಳಿಸಿದ್ದಾರೆ ಎಂಬ ವರದಿಗಳು ನಿಜವಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications