T20 World Cup 2024: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ ಗೆಲುವಿನ ತಿರುವು ಸಿಕ್ಕಿದ್ದು ಹೇಗೆ?; ಆ ಒಂದು ವಿಕೆಟ್!
ಜೂನ್ 25 ಮಂಗಳವಾರ, 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಸೂಪರ್-8ರ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 24 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಭಾರತವೂ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ಇದಲ್ಲದೆ, ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 2023ರ ಏಕದಿನ ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಭಾರತದ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆಸ್ಟ್ರೇಲಿಯಾಕ್ಕೆ 206 ರನ್‌ಗಳ ಬೃಹತ್ ಗುರಿ ನೀಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಕಾಂಗರೂ ತಂಡ ಕೂಡ ಉತ್ತಮ ಆರಂಭ ನೀಡಿತು. ಆದರೆ, ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ.
ಆದರೆ ಟ್ರಾವಿಸ್ ಹೆಡ್ ಮತ್ತೊಮ್ಮೆ ಭಾರತದ ಬೌಲರ್‌ಗಳನ್ನು ಕಾಡಿದರು. ಈ ಸಂದರ್ಭದಲ್ಲಿ ಹೆಡ್ ವೇಗದ ಅರ್ಧಶತಕ ಗಳಿಸಿ ಪಂದ್ಯಕ್ಕೆ ಜೀವ ತುಂಬಿದ್ದರು. ಆದರೆ ನಾಯಕ ರೋಹಿತ್ ಶರ್ಮಾ ತಮ್ಮ ಟ್ರಂಪ್ ಕಾರ್ಡ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಬಳಸಿದರು.
ತಮ್ಮ ಬೌಲಿಂಗ್ ಕರಾಮತ್ತು ತೋರಿದ ಬುಮ್ರಾ 76 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಹೋರಾಟ ನಡೆಸುತ್ತಿದ್ದ ಹೆಡ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬುಮ್ರಾ ಅವರ ಅದ್ಭುತ ಎಸೆತದಲ್ಲಿ ಹೆಡ್ ಅವರು ರೋಹಿತ್ ಶರ್ಮಾಗೆ ಕ್ಯಾಚ್ ನೀಡಿದರು. ಇದು ಪಂದ್ಯದ ದೊಡ್ಡ ತಿರುವು ಎಂದು ಹೇಳಬಹುದು.
ಏಕೆಂದರೆ ಕಾಂಗರೂ ಪಡೆ 24 ರನ್‌ಗಳಿಂದ ಸೋತರೂ ಪಂದ್ಯದ ಮಧ್ಯದಲ್ಲಿ ಟ್ರಾವಿಸ್ ಹೆಡ್ ಬ್ಲೂ ಟೈಗರ್ಸ್ ತಂಡವನ್ನು ಉಸಿರುಗಟ್ಟಿಸುವ ಸಂದರ್ಭವಿತ್ತು. ಭಾರತ ತಂಡ ಟ್ರಾವಿಸ್ ಹೆಡ್ ಅವರ ನೆಚ್ಚಿನ ತಂಡವಾಗಿದೆ.
ಟ್ರಾವಿಸ್ ಹೆಡ್ ಕಳೆದ ವರ್ಷ ಎರಡು ಬಾರಿ ಭಾರತವನ್ನು ಐಸಿಸಿ ಟ್ರೋಫಿಯಿಂದ ದೂರ ತಳ್ಳಿದ್ದಾರೆ. ಈ ಬಾರಿಯೂ ಟೀಮ್ ಇಂಡಿಯಾ ಈ ಆಟಗಾರನ ಆಟಕ್ಕೆ ಹೆದರಿದೆ ಎನ್ನಲಾಗಿತ್ತು. ಆದರೆ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಹೆಡ್ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಕ್ಕೆ ಜಯ ತಂದುಕೊಟ್ಟರು.
ಕಳೆದ ವರ್ಷ 2023ರಲ್ಲಿ ಟ್ರಾವಿಸ್ ಹೆಡ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವ ಮೂಲಕ ತಮ್ಮ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದರು. ಇದಾದ ಬಳಿಕ ಏಕದಿನ ವಿಶ್ವಕಪ್‌ನಲ್ಲೂ ಶತಕ ಸಿಡಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಈ ವಿಕೆಟ್ ಅತ್ಯಂತ ಮಹತ್ವದ್ದಾಗಿತ್ತು.
ಸೆಮಿಫೈನಲ್‌ಗೆ ಎಂಟ್ರಿಕೊಟ್ಟ ಭಾರತ
2024ರ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆಡಿದ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮುನ್ನುಗುತ್ತಿದೆ. ಭಾರತ ಆರು ಜಯಗಳಿಸಿ ಸೆಮಿಫೈನಲ್‌ಗೆ ಬಿರುಸಿನ ಪ್ರವೇಶ ಮಾಡಿದೆ.
ಇದೀಗ ಮೇ 27 ರಂದು ಗಯಾನಾದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಸೆಮಿಫೈನಲ್ ಪಂದ್ಯ ನಡೆಯಲಿದೆ. ಟಿ20 ವಿಶ್ವಕಪ್ ಟ್ರೋಫಿಗೆ ಭಾರತ ತಂಡ ಕೇವಲ 2 ಹೆಜ್ಜೆ ದೂರದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications