T20 World Cup 2024: ಟೀಮ್ ಇಂಡಿಯಾ ಸೆಮಿಫೈನಲ್ ತಲುಪುವ ಹಾದಿ ಹೇಗಿದೆ?; ಬಾಂಗ್ಲಾ ವಿರುದ್ಧ ಗೆದ್ದರೆ ಸಾಕೇ?
ಜೂನ್ 22 ಶನಿವಾರ, ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 47 ರನ್‌ಗಳ ಗೆಲುವು ದಾಖಲಿಸುವ ಮೂಲಕ 2024 ರ ಟಿ 20 ವಿಶ್ವಕಪ್‌ನ ಸೂಪರ್-8 ರಲ್ಲಿ ಭಾರತ ಉತ್ತಮ ಆರಂಭವನ್ನು ಮಾಡಿದೆ.
ರಶೀದ್ ಖಾನ್ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡವು ಭಾರತಕ್ಕೆ ದೊಡ್ಡ ಸವಾಲು ಎನ್ನಲಾಗಿತ್ತು. ಆದರೆ ಟೀಮ್ ಇಂಡಿಯಾ ಈ ಸವಾಲನ್ನು ಅತ್ಯುತ್ತಮ ರೀತಿಯಲ್ಲಿ ಎದುರಿಸಿ ಪಂದ್ಯವನ್ನು ಗೆದ್ದು ಬೀಗಿದೆ. ಈ ಗೆಲುವು ಭಾರತವನ್ನು ಸೆಮಿಫೈನಲ್ ಹತ್ತಿರಕ್ಕೆ ಕೊಂಡೊಯ್ದಿದೆ ಎಂದುಕೊಂಡರು, ಟೀಮ್ ಇಂಡಿಯಾ ಹಾದಿ ಇನ್ನೂ ಸ್ಪಷ್ಟವಾಗಿಲ್ಲ.

ಇಂದು (ಜೂನ್ 22) ಬಾಂಗ್ಲಾದೇಶ ಮತ್ತು ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಆಡಬೇಕಿದೆ. ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಈ ತಂಡಗಳ ವಿರುದ್ಧ ಎರಡೂ ಪಂದ್ಯಗಳನ್ನು ಗೆಲ್ಲಬೇಕೇ ಅಥವಾ ಬಾಂಗ್ಲಾದೇಶ ವಿರುದ್ಧ ಗೆದ್ದರೆ ಸಾಕೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಬಾಂಗ್ಲಾ-ಆಸೀಸ್ ವಿರುದ್ಧ ಭಾರತದ ದಾಖಲೆ
ಟಿ20ಯಲ್ಲಿ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತದ ದಾಖಲೆ ಅದ್ಭುತವಾಗಿದೆ. ಭಾರತ ಇದುವರೆಗೆ ಬಾಂಗ್ಲಾದೇಶದೊಂದಿಗೆ 13 ಟಿ20 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ 12 ಪಂದ್ಯಗಳನ್ನು ಗೆದ್ದಿದೆ. ಬಾಂಗ್ಲಾದೇಶ ತಂಡ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಆದರೆ, ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 31 ಪಂದ್ಯಗಳಲ್ಲಿ 19 ರಲ್ಲಿ ಗೆದ್ದಿದೆ. ಕಾಂಗರೂ ತಂಡ 11 ಪಂದ್ಯಗಳಲ್ಲಿ ಯಶಸ್ಸು ಕಂಡಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ.
ಸೂಪರ್-8 ನ ಸ್ವರೂಪವೇನು?
ಟಿ20 ವಿಶ್ವಕಪ್‌ನ ಸೂಪರ್-8ರಲ್ಲಿ ಎರಡು ಗುಂಪುಗಳಿವೆ. ಇದರಲ್ಲಿ ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿವೆ. ಪ್ರತಿ ತಂಡವು ತನ್ನ ಗುಂಪಿನ ಇತರ ತಂಡಗಳೊಂದಿಗೆ ಒಂದು ಪಂದ್ಯವನ್ನು ಆಡುತ್ತದೆ. ಇದರ ನಂತರ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಸೂಪರ್-8ರಲ್ಲಿ ಭಾರತದ ಸ್ಥಾನವೇನು?
ಸೂಪರ್-8ರಲ್ಲಿ ಟೀಮ್ ಇಂಡಿಯಾ ಗುಂಪು-1ರಲ್ಲಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಕೂಡ ಗುಂಪು-1ರಲ್ಲಿ ಸ್ಥಾನ ಪಡೆದಿವೆ.
ಬಾಂಗ್ಲಾದೇಶವನ್ನು ಸೋಲಿಸಿ ಆಸ್ಟ್ರೇಲಿಯಾ ಎರಡು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತವು ಅಷ್ಟೇ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉತ್ತಮ ನಿವ್ವಳ ರನ್ ರೇಟ್ (NRR) ಕಾರಣದಿಂದಾಗಿ ಆಸ್ಟ್ರೇಲಿಯಾ ಮುಂದಿದೆ. ಆಸ್ಟ್ರೇಲಿಯಾದ ನಿವ್ವಳ ರನ್ ರೇಟ್ +2.471 ಮತ್ತು ಭಾರತದ +2.350 ಆಗಿದೆ.
ಇದಾದ ಬಳಿಕ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಇನ್ನು ಒಂದು ಗೆಲುವಿನ ಖಾತೆ ತೆರೆದಿಲ್ಲ. ಅಫ್ಘಾನ್ ತಂಡ -2.350 ನೆಟ್ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ -2.471 ನೆಟ್ ರನ್ ರೇಟ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಬಾಂಗ್ಲಾದೇಶ ವಿರುದ್ಧ ಗೆದ್ದು ಭಾರತ ಸೆಮಿಫೈನಲ್ ತಲುಪಲಿದೆಯೇ?
ಇಂದು ನಡೆಯುಲಿರುವ ಬಾಂಗ್ಲಾದೇಶದ ವಿರುದ್ಧದ ಪಂದ್ಯವನ್ನೇ ಗೆದ್ದು ಭಾರತ ಸೆಮಿಫೈನಲ್ ತಲುಪಲಿದೆಯೇ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಇನ್ನು ಸರಿಯಾದ ಉತ್ತರ ಸಷ್ಟವಾಗಿಲ್ಲ.
ಟೀಮ್ ಇಂಡಿಯಾ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ, ನಂತರ ಎರಡು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಹೊಂದಿರುತ್ತದೆ. ಇದರಿಂದ ರೋಹಿತ್ ಶರ್ಮಾ ಬಳಗ ಸೆಮಿಫೈನಲ್‌ಗೆ ಹತ್ತಿರವಾಗಲಿದೆ.
ಇನ್ನೊಂದೆಡೆ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಟೀಮ್ ಇಂಡಿಯಾ ಸೋಲಿಸಿದರೆ, ಮುಂಬರುವ ಪಂದ್ಯದಲ್ಲಿ ಅಫ್ಘಾನಿಸ್ತಾನ ಎದುರು ಆಸ್ಟ್ರೇಲಿಯಾ ಗೆಲ್ಲಬೇಕು. ಆಗ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯಲಿವೆ.
ಏಕೆಂದರೆ ಬಾಂಗ್ಲಾ ಮತ್ತು ಅಫ್ಘಾನ್ ತಂಡಗಳು ಎರಡಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.
ಆಸ್ಟ್ರೇಲಿಯಾ ಸೋತರೆ ಭಾರತಕ್ಕೆ ಏನು?
ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನದ ಎದುರು ಸೋತರೂ ಭಾರತದ ನಿರೀಕ್ಷೆಗೆ ಹೆಚ್ಚು ಧಕ್ಕೆಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಸುಲಭವಾಗಿ ಅರ್ಹತೆ ಪಡೆಯುತ್ತದೆ.
ಆದರೆ, ಸೋಲಿನ ಸಂದರ್ಭದಲ್ಲೂ ಅವರ ಹಕ್ಕು ಬಲವಾಗಿ ಉಳಿಯುತ್ತದೆ. 3 ತಂಡಗಳು 4-4 ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ ಎಂದು ಭಾರತ ಬಯಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೆಟ್ ರನ್ ರೇಟ್‌ನ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಎರಡು ಪಂದ್ಯಗನ್ನು ಟೀಮ್ ಇಂಡಿಯಾ ಗೆಲ್ಲುವ ನಿರೀಕ್ಷೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications