For Quick Alerts
ALLOW NOTIFICATIONS  
For Daily Alerts
 

T20 Wolrd Cup 2024: ಭಾರತ vs ಇಂಗ್ಲೆಂಡ್‌ ಪಂದ್ಯಕ್ಕೆ ಮೀಸಲಿರುವ ಸಮಯವೆಷ್ಟು?; ಮಳೆಯಾದರೆ ಹೇಗೆ?

ಜೂನ್‌ 26 ಬುಧವಾರ, ಟಿ20 ವಿಶ್ವಕಪ್ 2024ರ ಎರಡೂ ಸೆಮಿಫೈನಲ್ ಪಂದ್ಯಗಳು ಜೂನ್ 27 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 6 ಮತ್ತು ರಾತ್ರಿ 8 ಗಂಟೆಗೆ ನಡೆಯಲಿವೆ. ಎರಡೂ ಸೆಮಿಫೈನಲ್‌ ಪಂದ್ಯಗಳಿಗಾಗಿ ವಿಶ್ವದೆಲ್ಲೆಡೆ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಭಾರತ ಎರಡನೇ ಟಿ20 ವಿಶ್ವಕಪ್‌ ಟ್ರೋಫಿ ಗೆಲ್ಲಲು ಕೇವಲ 2 ಗೆಲುವಿನ ಅಂತರದಲ್ಲಿದೆ. ಇನ್ನೂ ಒಂದು ಹೆಜ್ಜೆ ಮುಂದಿಡಲು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

T20 World Cup 2024 How much time allotted for India vs England match

ಮತ್ತೊಂದೆಡೆ ಅಫ್ಘಾನಿಸ್ತಾನ ತಂಡವು ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿ ಆಫ್ಘಾನಿಸ್ತಾನ ತಂಡವಿದೆ.

ಭಾರತ ಮತ್ತುಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್‌ 2024ರ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ 7 ಗಂಟೆ 20 ನಿಮಿಷಗಳು ಕಾಲಾವಕಾಶ ನೀಡಲಾಗಿದೆ. ಟಿ20 ಕ್ರಿಕೆಟ್‌ನ ಎರಡೂ ಇನ್ನಿಂಗ್ಸ್‌ಗಳಿಗೆ ತೆಗೆದುಕೊಂಡ ಸಮಯ ಸರಿಸುಮಾರು 3 ಗಂಟೆ 10 ನಿಮಿಷಗಳು.

T20 World Cup 2024 How much time allotted for India vs England match

ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ ನಿರಂತರವಾಗಿ ಮಳೆ ಸುರಿದು ನಿಲ್ಲದಿದ್ದಲ್ಲಿ ಪಂದ್ಯದ ಸಮಯದ ಹೊರತಾಗಿ 4 ಗಂಟೆ 10 ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಇದಾದ ಬಳಿಕವೂ ಮಳೆ ನಿಲ್ಲದೇ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಆದರೆ, ಮಳೆ ಮಧ್ಯದಲ್ಲಿ ನಿಂತರೆ, ಓವರ್‌ಗಳನ್ನು ತಡವಾಗಿ ಕಡಿಮೆ ಮಾಡಿ ಪಂದ್ಯವನ್ನು ಪ್ರಾರಂಭಿಸಬಹುದು. ಪಂದ್ಯದ ವೇಳೆ ಶೇ.51 ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಅದಕ್ಕಾಗಿ ಯಾವುದೇ ಮೀಸಲು ದಿನವನ್ನು ಇರಿಸಲಾಗಿಲ್ಲ.

ಆದರೆ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಸೆಮಿಫೈನಲ್‌ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸಲಾಗಿದೆ. ಇದರೊಂದಿಗೆ ಹೆಚ್ಚುವರಿ ಒಂದು ಗಂಟೆಯನ್ನೂ ನೀಡಲಾಗಿದೆ.

ಎರಡೂ ಸೆಮಿಫೈನಲ್‌ ಪಂದ್ಯಗಳು ಮಳೆಯಿಂದಾಗಿ ರದ್ದದಾರೆ, ಭಾರತವು ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಕಾರಣ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಹಾಗೆಯೇ ಸೂಪರ್ -8 ರ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಕೂಡ ಫೈನಲ್‌ಗೆ ಲಗ್ಗೆ ಇಡಲಿದೆ. ಜೂನ್ 29 ರಂದು ಟಿ20 ವಿಶ್ವಕಪ್‌ ಫೈನಲ್ ಪಂದ್ಯ ನಡೆಯಲಿದೆ.

Story first published: Wednesday, June 26, 2024, 15:51 [IST]
Other articles published on Jun 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+