Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಆಸ್ಟ್ರೇಲಿಯಾವನ್ನು ಸೆಮಿಫೈನಲ್‌ ರೇಸ್‌ನಿಂದ ಹೊರಗಟ್ಟಿದ ಭಾರತ-ಅಫ್ಘಾನಿಸ್ತಾನ!

ಜೂನ್‌ 25 ಮಂಗಳವಾರ, 2024ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹೊರಬಿದ್ದಿದೆ. ಗ್ರೂಪ್ 1 ರ ಕೊನೆಯ ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶವನ್ನು 8 ರನ್‌ಗಳಿಂದ ಸೋಲಿಸಿತು.

ಈ ಸೋಲನೊಂದಿಗೆ ಬಾಂಗ್ಲಾದೇಶ ಹಾಗು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ನಿಂದ ಹೊರಬಿದ್ದಿವೆ. ಇತ್ತ ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದೆ.
ಅಫ್ಘಾನಿಸ್ತಾನ ತಂಡ ಟಿ20 ವಿಶ್ವಕಪ್ ಅಥವಾ ಯಾವುದೇ ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವುದು ಇದೇ ಮೊದಲು.

T20 World Cup 2024 India-Afghanistan eliminated Australia from the semi-final race

ಕಾಂಗೂರು ಪಡೆ ಔಟಾಗಿದ್ದು ಹೇಗೆ?

ಮೊದಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಸೆಮಿಫೈನಲ್‌ನಿಂದ ಆಸ್ಟ್ರೇಲಿಯಾವನ್ನು ಹೊರಹಾಕುವ ಅಡಿಪಾಯವನ್ನು ಹಾಕಿತು. ಆಸ್ಟ್ರೇಲಿಯಾ ಸೋಮವಾರ ಟಿ20 ವಿಶ್ವಕಪ್‌ನ ಗ್ರೂಪ್ 1 ರಿಂದ ಸೂಪರ್-8 ರ ತನ್ನ ಕೊನೆಯ ಪಂದ್ಯವನ್ನು ಭಾರತದ ವಿರುದ್ಧ ಆಡಿತು.

ಈ ಪಂದ್ಯದಲ್ಲಿ ಭಾರತ ತಂಡವು ಕಾಂಗೂರು ಪಡಯನ್ನು 24 ರನ್‌ಗಳಿಂದ ಸೋಲಿಸಿತ್ತು. ಇದರೊಂದಿಗೆ ಆಸ್ಟ್ರೇಲಿಯಾ 2 ಅಂಕಗಳೊಂದಿಗೆ ಸೂಪರ್-8ರಲ್ಲಿ ತನ್ನ ಟಿ20 ವಿಶ್ವಕಪ್‌ ಅಭಿಯಾನವನ್ನು ಅಂತ್ಯಗೊಳಿಸಿತು.

T20 World Cup 2024 India-Afghanistan eliminated Australia from the semi-final race

ಮಿಷೆಲ್‌ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಬೇಕಾದರೆ, ಅಫ್ಘಾನಿಸ್ತಾನದ ಸೋಲಿಗೆ ಪ್ರಾರ್ಥಿಸಬೇಕಾಗಿತ್ತು. ಆದರೆ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದಿತ್ತು.

ಇದರೊಂದಿಗೆ 4 ಅಂಕಗಳನ್ನು ಪಡೆದ ಅಫ್ಘಾನಿಸ್ತಾನ ತಂಡ ಸೆಮಿಫೈನಲ್ ತಲುಪಿದ ಗುಂಪು 1 ರಿಂದ ಎರಡನೇ ತಂಡವಾಯಿತು. ಪರಿಣಾಮ ಬಲಿಷ್ಠ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿದೆ.

ಎರಡು ಐಸಿಸಿ ಟ್ರೋಫಿಗಳಲ್ಲಿ ಭಾರತದ ಗೆಲುವಿಗೆ ಕಂಟಕವಾಗಿದ್ದ ಆಸ್ಟ್ರೇಲಿಯಾ ಈ ಬಾರಿ ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಭಾರತ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಡಿದ ಆಸ್ಟ್ರೇಲಿಯಾ ಹೊರಗುಳಿಯಲು ಕಾರಣವಾಗಿತ್ತು .

T20 World Cup 2024 India-Afghanistan eliminated Australia from the semi-final race

ಆಸ್ಟ್ರೇಲಿಯಾ ಭಾರತದ ವಿರುದ್ಧ ಗೆದ್ದಿದ್ದರೆ, ವಿಷಯವು ನೆಟ್ ರನ್ ರೇಟ್‌ಗೆ ಇಳಿಯುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನವನ್ನು ಹಿಂದಿಕ್ಕಿ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದಿತ್ತು. ಆದರೆ ಆಸ್ಟ್ರೇಲಿಯಾದಂತಹ ವಿಶ್ವ ವಿಜೇತ ತಂಡಕ್ಕೆ 2024ರ ಟಿ 20 ವಿಶ್ವಕಪ್‌ನ ಸೆಮಿಫೈನಲ್‌ನಿಂದ ಹೊರಗುಳಿಯುವುದು ದೊಡ್ಡ ಆತಂಕ ಮೂಡಿಸಿದೆ.

2007 ರಿಂದ ಇದುವರೆಗೆ ನಡೆದಿರುವ ಟಿ20 ವಿಶ್ವಕಪ್‌ನ 9 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ 4 ಬಾರಿ ಮಾತ್ರ ಸೆಮಿಫೈನಲ್ ತಲುಪಲು ಸಾಧ್ಯವಾಗಿದ್ದು, 5 ಬಾರಿ ಸೆಮಿಫೈನಲ್‌ಗೂ ಮುನ್ನವೇ ಹೊರಬಿದ್ದಿದೆ.

Story first published: Tuesday, June 25, 2024, 13:04 [IST]
Other articles published on Jun 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+