Ind vs USA: ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್-11 ಬದಲಾವಣೆ ಮಾಡುತ್ತಾ ಭಾರತ?; ಇಬ್ಬರು ಮ್ಯಾಚ್ ವಿನ್ನರ್‌ಗಳು ಆಡುವ ಸಾಧ್ಯತೆ!
ಜೂನ್ 11 ಮಂಗಳವಾರ, 2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಭರ್ಜರಿ ಆರಂಭ ಮಾಡಿದೆ.
ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 8 ವಿಕೆಟ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು. ಇದಾದ ಬಳಿಕ ಪಾಕಿಸ್ತಾನ ವಿರುದ್ಧದ ಪಂದ್ಯ ಕೊನೆಯ ಎಸೆತದವರೆಗೂ ಹೋರಾಟ ನಡೆಸಿ 6 ರನ್ ಗಳ ಜಯ ಸಾಧಿಸಿತು.

ಇದೀಗ ಮೂರನೇ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಎದುರಿಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಭಾರತ ಸೂಪರ್-8 ಗೆ ಲಗ್ಗೆ ಇಡಲಿದೆ.
ಆರಂಭಿಕ ಎರಡೂ ಪಂದ್ಯಗಳಲ್ಲಿ ಭಾರತದ ಪ್ಲೇಯಿಂಗ್-11 ಒಂದೇ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಅಮೆರಿಕ ವಿರುದ್ಧ ಏನಾದರೂ ಬದಲಾವಣೆ ಮಾಡುತ್ತಾರಾ? ಇಬ್ಬರು ಮ್ಯಾಚ್ ವಿನ್ನರ್‌ಗಳು ತಂಡದಲ್ಲಿ ಸ್ಥಾನ ಪಡೆಯುತ್ತಾರಾ? ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಕುಲದೀಪ್-ಜೈಸ್ವಾಲ್ ಕಣಕ್ಕೀಳಿಯುವ ಸಾಧ್ಯತೆ
ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಸದ್ಯ ಕುಲದೀಪ್ ಯಾದವ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2024ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕುಲದೀಪ್ ಅದ್ಭುತ ಪ್ರದರ್ಶನ ನೀಡಿದ್ದರು.
ಆದರೆ, ರೋಹಿತ್ ಶರ್ಮಾ ಅವರನ್ನು ಸೇರಿಸಿಕೊಳ್ಳದೆ ಪ್ಲೇಯಿಂಗ್-11ರಲ್ಲಿ ಅಕ್ಷರ್ ಪಟೇಲ್ ಗೆ ಅವಕಾಶ ನೀಡಿದರು. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ ಕೂಡ ಪ್ಲೇಯಿಂಗ್-11 ರಲ್ಲಿ ಅವಕಾಶ ಪಡೆದಿಲ್ಲ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರಂಭಿಕರಾಗಿದ್ದಾರೆ. ಹೀಗಿರುವಾಗ ರೋಹಿತ್ ಶರ್ಮಾ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಆಡುವ 11ರಲ್ಲಿ ಬದಲಾವಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಚಹಾಲ್-ಸ್ಯಾಮ್ಸನ್‌ಗೆ ಚಾನ್ಸ್ ಸಿಗುತ್ತಾ?
ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ವಿಕೆಟ್ ಕೀಪರ್ ಮತ್ತು ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ ಪ್ಲೇಯಿಂಗ್-11 ರಲ್ಲಿ ಇನ್ನೂ ಅವಕಾಶ ಪಡೆದಿಲ್ಲ. ಕಳೆದ ಐಪಿಎಲ್ ಋತುವಿನಲ್ಲಿ ಈ ಇಬ್ಬರೂ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು.
ಚಹಾಲ್ ರಾಜಸ್ಥಾನ ರಾಯಲ್ಸ್ ಪರ ಅತಿಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು. ಸಂಜು ಸ್ಯಾಮ್ಸನ್ 500+ ರನ್ ಗಳಿಸಿದ್ದರು. ಟೂರ್ನಿ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಯಾಮ್ಸನ್‌ಗೆ ಅವಕಾಶ ಸಿಕ್ಕರೂ ಹೇಳಿಕೊಳ್ಳುವಂತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಈ ಇಬ್ಬರು ಆಟಗಾರರಿಗೆ ಪ್ಲೇಯಿಂಗ್-11ರಲ್ಲಿ ಅವಕಾಶ ಸಿಗುತ್ತದೆಯೇ ಎಂಬುದನ್ನು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಭಾರತ ಮುಂದಿನ ಎರಡು ಗುಂಪು ಹಂತದ ಪಂದ್ಯಗಳನ್ನು ಅಮೆರಿಕ ಮತ್ತು ಕೆನಡಾ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications