T20 World Cup 2024: ಭಾರತದ ಮಾರಕ ಬೌಲಿಂಗ್ ದಾಳಿಗೆ ಐರ್ಲೆಂಡ್ ನಿರುತ್ತರ; ರೋಹಿತ್ ಪಡೆಗೆ ಸಾಧಾರಣ ಗುರಿ
ಬುಧವಾರ, ಜೂನ್ 5ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನ 8ನೇ ಪಂದ್ಯದಲ್ಲಿ ಭಾರತ ತಂಡದ ಮಾರಕ ಬೌಲಿಂಗ್ ತತ್ತರಿಸಿದ ಐರ್ಲೆಂಡ್ ತಂಡ ಸಾಧಾರಣ ಮೊತ್ತ ಕಲೆಹಾಕಿದೆ.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಹೊಂದಿರುವ ಭಾರತ ತಂಡ, ತಮ್ಮ ದಶಕದ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಎದುರು ನೋಡುತ್ತಿದೆ. ಐರ್ಲೆಂಡ್ ವಿರುದ್ಧ ಗೆಲುವಿನ ಶುಭಾರಂಭ ಮಾಡಲು ಎದುರು ನೋಡುತ್ತಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಲ್ ಸ್ಟಿರ್ಲಿಂಗ್ ನಾಯಕತ್ವದ ಐರ್ಲೆಂಡ್ ತಂಡ ಯಾವುದೇ ಅರ್ಧಶತಕವಿಲ್ಲದೆ 16 ಓವರ್‌ಗಳಲ್ಲಿ 96 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತ ತಂಡಕ್ಕೆ 97 ರನ್‌ಗಳ ಗುರಿ ನೀಡಿದೆ.
ಐರ್ಲೆಂಡ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಪಾಲ್ ಸ್ಟಿರ್ಲಿಂಗ್ (2) ಮತ್ತು ಆಂಡ್ರ್ಯೂ ಬಾಲ್ಬಿರ್ಲಿ (7) ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಈ ಇಬ್ಬರೂ ಬ್ಯಾಟರ್‌ಗಳು ತಂಡದ ಮೊತ್ತ 7 ಹಾಗೂ 9 ರನ್‌ಗಳಾಗಿದ್ದಾಗ ವಿಕೆಟ್ ನೀಡಿದರು.
ನಂತರ ಬಂದ ಲೋರ್ಕನ್ ಟಕರ್ 10 ರನ್ ಗಳಿಸಿದರೆ, ಹ್ಯಾರಿ ಟೆಕ್ಟರ್ 4 ರನ್, ಕರ್ಟಿಸ್ ಕ್ಯಾಂಫರ್ 12 ರನ್, ಜಾರ್ಜ್ ಡಾಕ್ರೆಲ್ ಕೇವಲ 3 ರನ್, ಮಾರ್ಕ್ ಅಡೈರ್ 3 ರನ್, ಜೋಶ್ವಾ ಲಿಟಲ್ 14 ರನ್ ಗಳಿಸಿದರು. ಉಳಿದಂತೆ ಕೊನೆಯಲ್ಲಿ ಗರೆಥ್ ಡೆಲಾನಿ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 26 ರನ್ ಗಳಿಸಿ ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು.

ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ 4 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅರ್ಶ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಜಸ್ಪ್ರೀತ್ ಬುಮ್ರಾ 3 ಓವರ್‌ಗಳಲ್ಲಿ 6 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications