IND vs AUS: ಭಾರತ-ಆಸ್ಟ್ರೇಲಿಯಾ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಲಾಭ?; ಹವಾಮಾನ ವರದಿ ಇಲ್ಲಿದೆ
ಜೂನ್ 24 ಸೋಮವಾರ, ಟಿ20 ವಿಶ್ವಕಪ್ 2024 ರಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸೂಪರ್-8 ರ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.
ಇತ್ತೀಚಿನ ವರ್ಷಗಳಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಆಸ್ಟ್ರೇಲಿಯಾ ದುಃಸ್ವಪ್ನವಾಗಿದೆ. ಸತತ ಎರಡು ಐಸಿಸಿ ಸ್ಪರ್ಧೆಗಳ ಫೈನಲ್‌ನಲ್ಲಿ ಕಾಂಗೂರು ಪಡೆ ಟೀಮ್ ಇಂಡಿಯಾವನ್ನು ಸೋಲಿಸಿದೆ.

ಆಸ್ಟ್ರೇಲಿಯಾ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿತು. ಆ ಬಳಿಕ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ಭಾರತ ತಂಡವನ್ನು ತವರು ನೆಲದಲ್ಲಿ 6 ವಿಕೆಟ್‌ಗಳಿಂದ ಸೋಲಿಸಿ ದಾಖಲೆ ಬರೆದಿತ್ತು.
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಸೂಪರ್-8ರಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಭಾರತ ಗೆದ್ದಿದೆ. ಇದೀಗ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಟೂರ್ನಿಯಿಂದ ಹೊರಹಾಕುವ ಮೂಲಕ ಭಾರತವು ಕಳೆದ ಎರಡು ಫೈನಲ್ ದೊಡ್ಡ ಸೋಲಿಗೆ ಸೇಡು ತೀರಿಸಿಕೊಳ್ಳಲು ನೋಡುತ್ತಿದೆ.
ಕಾಂಗೂರು ಪಡೆಗೆ ಆಘಾತ ನೀಡಿದ ಅಫ್ಘಾನಿಸ್ತಾನ
ಮತ್ತೊಂದೆಡೆ, ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ 21 ರನ್‌ಗಳ ಸೋಲು ಅನುಭವಿಸಿತು. ಇದು ಕಾಂಗೂರು ಪಡೆಯ ಅತಂತ್ರ ಸ್ಥಿತಿಗೆ ತಂದಿದೆ. ಸೆಮಿಫೈನಲ್ ತಲುಪಲು ಮಿಚೆಲ್ ಮಾರ್ಷ್ ನೇತೃತ್ವದ ತಂಡಕ್ಕೆ ಭಾರತದ ವಿರುದ್ಧ ಜಯದ ಅಗತ್ಯವಿದೆ. ಆದರೆ, ಕೆಟ್ಟ ಹವಾಮಾನದಿಂದಾಗಿ ಆಸ್ಟ್ರೇಲಿಯಾ ಫೈನಲ್ ಕನಸು ಭಗ್ನವಾಗುವ ಸಾಧ್ಯತೆ ಇದೆ.
ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ ಅದರ ಸಂಪೂರ್ಣ ಲಾಭ ಭಾರತಕ್ಕೆ ಸಿಗಲಿದೆ. ಏಕೆಂದರೆ ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಗುಂಪು-1ರಲ್ಲಿ ಆಗ್ರಸ್ಥಾನ ಪಡೆದಿದೆ. ಜೊತೆಗೆ ಉತ್ತಮ ರನ್ ರೇಟ್ ಕೂಡ ಟೀಮ್ ಇಂಡಿಯಾ ಬಳಿ ಇದೆ.
ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು-ಸೋಲುಗಳನ್ನು ಅನುಭವಿಸಿದೆ. ಭಾರತದ ಎದುರು ಆಡಲಿರುವ ಪಂದ್ಯ ಮಳೆಯಿಂದ ರದ್ದಾದರೆ, ಎರಡು ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ.
ಈ ವೇಳೆ ಆಸ್ಟ್ರೇಲಿಯಾ ಮೂರು ಅಂಕಗಳನ್ನು ಪಡೆಯಲಿದೆ. ಇತ್ತ ಅಫ್ಘಾನಿಸ್ತಾನ ತನ್ನ ಕೊನೆಯ ಪಂದ್ಯವನ್ನು ಗೆದ್ದರೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು. ಅಫ್ಘಾನಿಸ್ತಾನ ಕೂಡ ಎರಡು ಪಂದ್ಯಗಳಲ್ಲಿ ಸೋಲು-ಗೆಲುವು ಕಂಡಿದೆ. ಹೀಗಾಗಿ ಮೂರನೇ ಪಂದ್ಯ ಗೆದ್ದರೆ ರಶೀದ್ ಖಾನ್ ಪಡೆ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.
ಸೇಂಟ್ ಲೂಸಿಯಾ ಹವಾಮಾನ ವರದಿ
ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ವೇಳೆ ಮಳೆ ಮತ್ತು ಗುಡುಗುಗಳ ಮುನ್ಸೂಚನೆ ಇದೆ. ಆದರೆ, ಮಳೆಯ ಸಂಭವನೀಯತೆ ತುಸು ಕಡಿಮೆ ಅಂದರೆ ಶೇ.15ರಷ್ಟಿದೆ. ಆಟದ ವೇಳೆ ಸುಮಾರು ಶೇ.5ರಷ್ಟು ಲಘು ಮಳೆಯಾಗುವ ಸಾಧ್ಯತೆ ಇದೆ.
ಅಂತಹ ಪರಿಸ್ಥಿತಿಯಲ್ಲಿ, ಆಸ್ಟ್ರೇಲಿಯಾವು ಸಂಪೂರ್ಣ ಪಂದ್ಯವನ್ನು ನಿರೀಕ್ಷಿಸುತ್ತದೆ. ಏಕೆಂದರೆ ಮಳೆಯಿಂದ ಪಂದ್ಯ ರದ್ದಾದರೆ ಅಥವಾ ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶವನ್ನು ಸೋಲಿಸಿದರೆ, ಕಾಂಗೂರು ಪಡೆ ಟೂರ್ನಿಯಿಂದ ಹೊರಗುಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications