IND vs BAN: ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿದ ಹ್ಯಾರ್ದಿಕ್ ಪಾಂಡ್ಯ; ಸವಾಲಿನ ಗುರಿ ಕಲೆ ಹಾಕಿದ ಭಾರತ
ಜೂನ್ 22 ಶನಿವಾರ, ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ನ ಸೂಪರ್-8ರ ಹೈವೋಲ್ಟೇಜ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಭಾರತ ತಂಡವು ಬೃಹತ್ ರನ್ ಕಲೆ ಹಾಕಿದೆ.
ಹಾರ್ದಿಕ್ ಪಾಂಡ್ಯ ಅವರ ಅಮೋಘ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 5 ನಷ್ಟಕ್ಕೆ 196 ರನ್‌ಗಳನ್ನು ಗಳಿಸಿದೆ. ಹೀಗಾಗಿ ಬಾಂಗ್ಲಾದೇಶ ತಂಡ ಗೆಲುವು ಸಾಧಿಸಲು 197 ರನ್‌ಗಳ ಬೃಹತ್ ಟಾರ್ಗೆಟ್ ಅನ್ನು ಚೇಸಿಂಗ್ ಮಾಡಬೇಕಾಗಿದೆ.

ಬಾಂಗ್ಲಾದೇಶ ಎದುರು ಟಾಸ್ ಸೋತು ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿತು. ಎಂದಿನಂತೆ ಈ ಬಾರಿಯೂ ಇನ್ನಿಂಗ್ಸ್ ತೆರೆಯಲು ನಾಯಕ ರೋಹಿತ್ ಶರ್ಮಾ ಹಾಗು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಣಕ್ಕೀಳಿದರು.
ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್‌ಗಳನ್ನು ಗಳಿಸಿ ಔಟಾದರೆ, ಇನ್ನೊಂದೆಡೆ 28 ಎಸೆತಗಳಲ್ಲಿ 3 ಸಿಕ್ಸರ್ ಹಾಗು 1 ಬೌಂಡರಿ ನೆರೆವಿನಿಂದ 37 ರನ್ ಹೊಡೆದು ಕೊಹ್ಲಿ ಸಹಾ ವಿಕೆಟ್ ಕಳೆದುಕೊಂಡರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಪಂತ್ ಕೂಡ ಬೀರುಸಿನ ಬ್ಯಾಟಿಂಗ್ ಮಾಡಿ 24 ಎಸೆತಗಳಲ್ಲಿ 36 ರನ್ ಗಳಿಸಿದಾಗ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್ (6) ಕೂಡ ಹೆಚ್ಚು ಕ್ರೀಸ್‌ನಲ್ಲಿ ನಿಲ್ಲದೆ ವಿಕೆಟ್ ಕಳೆದುಕೊಂಡರು.
ಈ ಹಂತದಲ್ಲಿ ಜೊತೆಗೂಡಿದ ಶಿವಂ ದುಬೆ ಹಾಗು ಹಾರ್ದಿಕ್ ಪಾಂಡ್ಯ ಜೋಡಿ ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿದರು. ಶಿವಂ ದುಬೆ 24 ಎಸೆತಗಳಲ್ಲಿ 34 ರನ್ ಗಳಿಸಿ ಕ್ರೀಸ್ ತೊರೆದರು. ಮತ್ತೊಂದೆಡೆ ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್‌ಪಾ ಹಾರ್ದಿಕ್ ಪಾಂಡ್ಯ ಅರ್ಧಶತಕ ಸಿಡಿಸಿ ಮಿಂಚಿದರು.
ಪಾಂಡ್ಯ ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಹಾಗ 4 ಬೌಂಡಿಗಳೊಂದಿಗೆ ಅಜೇಯ 50 ರನ್ ಬಾರಿಸಿ ಟೀಮ್ ಇಂಡಿಯಾ ಸ್ಕೋರ್ ಹೆಚ್ಚಿಸಿದರು. ಇತ್ತ ಅಕ್ಸರ್ ಪಟೇಲ್ ಅಜೇಯ 3 ರನ್ ಗಳಿಸಿದರು.
ಬಾಂಗ್ಲಾದೇಶ ಪರ ರಿಶಾದ್ ಹೊಸೈನ್ ಮತ್ತು ತಂಝಿಮ್ ಹಸನ್ ಸಾಕಿಬ್ 2 ವಿಕೆಟ್ ಕಬಳಿಸಿದರೆ, ಶಾಕಿಬ್ ಅಲ್ ಹಸನ್ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications