Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಬುಮ್ರಾ ಬೌಲಿಂಗ್‌ ದಾಳಿಗೆ ಬೆಚ್ಚಿದ ಆಫ್ಘನ್ನರು; ಸಂಕಷ್ಟದಲ್ಲಿ ರಶೀದ್‌ ಪಡೆ!

ಜೂನ್‌ 20 ಗುರುವಾರ, ವೆಸ್ಟ್‌ ಇಂಡೀಸ್‌ನ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯ ಸೂಪರ್ 8ರ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನವನ್ನು ಸೋಲಿಸಿದೆ.

ಟೀಮ್‌ ಇಂಡಿಯಾ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ ದಾಳಿಗೆ ಅಫ್ಘಾನಿಸ್ತಾನ ಬ್ಯಾಟರ್‌ಗಳು ಬೆಚ್ಚಿದರು. ಹೀಗಾಗಿ ಟೀಮ್‌ ಇಂಡಿಯಾ ನೀಡಿದ 182 ರನ್‌ ಕಠಿಣ ಸವಾಲಿನ ಗುರಿ ಬೆನ್ನಟ್ಟಲು ಅಫ್ಘಾನಿಸ್ತಾನ ತಂಡ ಬ್ಯಾಟರ್‌ಗಳಿಂದ ಸಾಧ್ಯವಾಗಲಿಲ್ಲ.

T20 World Cup 2024 India win against Afghanistan

ಪರಿಣಾಮ ತನ್ನಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡ ಅಫ್ಘಾನಿಸ್ತಾನ ಕೇವಲ 134 ರನ್‌ಗಳನ್ನು ಗಳಿಸಲಷ್ಟೆ ಶಕ್ತವಾಯಿತು. ಈ ಮೂಲಕ ಟಿ20 ವಿಶ್ವಕಪ್‌ನ ಸೂಪರ್‌-8 ಸುತ್ತಿನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ 47 ರನ್‌ಗಳಿಂದ ಗೆದ್ದು ಬೀಗಿದೆ.

ಟೀಮ್‌ ಇಂಡಿಯಾ ಇನ್ನಿಂಗ್ಸ್‌

ಇಂದಿನ ಪಂದ್ಯದಲ್ಲಿ ಮೊದಲು ಟಾಸ್‌ ಗೆದ್ದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಮಾಡಲು ನಿರ್ಧಾರಿಸಿದರು. ಅದರಂತೆ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಮತ್ತು ನಾಯಕ ರೋಹಿತ್‌ ಶರ್ಮಾ ಆರಂಭಿಕರಾಗಿ ಕಣಕ್ಕೀಳಿದ್ದರು.

ಆದರೆ ವಿರಾಟ್‌ ಮತ್ತು ರೋಹಿತ್‌ ಮತ್ತೊಮ್ಮೆ ಉತ್ತಮ ಜೊತೆಯಾಟವಾಡುವುದರಲ್ಲಿ ಎಡುವಿದರು. ರೋಹಿತ್‌ ಶರ್ಮಾ 8 ರನ್‌ಗಳಿಸಿ ಔಟ್‌ ಅದರೆ, ಟಿ20 ವಿಶ್ವಕಪ್‌ 2024ರಲ್ಲಿ ಎರಡಂಕಿ ರನ್‌ ಹೊಡೆದ ಕೊಹ್ಲಿ (24) ಸಹಾ ವಿಕೆಟ್‌ ಕಳೆದುಕೊಂಡರು.

ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ರಿಷಬ್‌ ಪಂತ್‌ (20) ಕೂಡ ಹೆಚ್ಚು ಹೊತ್ತು ನಿಲ್ಲದೆ ಔಟ್‌ ಆದರು. ಶಿವಂ ದುಬೆ (10) ಈ ಬಾರಿಯೂ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲವಾದರು. ಈ ಹಂತದಲ್ಲಿ ಒಂದಾದ ಸೂರ್ಯಕುಮಾರ್‌ ಯಾದವ್ ಮತ್ತು ಹಾರ್ದಿಕ್‌ ಪಾಂಡ್ಯ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು. ಈ ವೇಳೆ ಸೂರ್ಯಕುಮಾರ್‌ ಅರ್ಧಶತಕ ಸಿಡಿಸಿ ಔಟ್‌ ಆದರು.

ಸೂರ್ಯಕುಮಾರ್‌ ಎದುರಿಸಿದ 28 ಎಸೆತಗಳಲ್ಲಿ 3 ಸಿಕ್ಸರ್‌ ಹಾಗು 5 ಬೌಂಡರಿ ಮೂಲ 53 ರನ್‌ ಬಾರಿಸಿದರು. ಇನ್ನೊಂದೆಡೆ ಹಾರ್ದಿಕ್‌ ಪಾಂಡ್ಯ 24 ಎಸೆತಗಳಲ್ಲಿ 2 ಸಿಕ್ಸರ್‌ ಹಾಗು 3 ಬೌಂಡರಿ ನೆರವಿನಿಂದ 32 ರನ್‌ಗಳನ್ನು ಹೊಡೆದು ವಿಕೆಟ್‌ ಕಳೆದುಕೊಂಡರು.

ಇನ್ನು ರವೀಂದ್ರ ಜಡೇಜಾ 7 ರನ್‌ಗರ ಔಟ್‌ ಆದರೆ, ಅಕ್ಷರ್‌ ಪಟೇಲ್‌ 12 ರನ್‌ ಗಳಿಸಿದಾಗ ರನೌಟ್‌ಗೆ ಬಲಿಯಾದರು. ಅರ್ಷದೀಪ್ ಸಿಂಗ್ ಅಜೇಯ 2 ಹೊಡೆದರು.

ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ ಮತ್ತು ರಶೀದ್ ಖಾನ್ ತಲಾ 3 ವಿಕೆಟ್‌ ಪಡೆದು ಮಿಂಚಿದರೆ, ನವೀನ್-ಉಲ್-ಹಕ್ 1 ವಿಕೆಟ್‌ ಪಡೆದರು.

ಅಫ್ಘಾನಿಸ್ತಾನ ಇನ್ನಿಂಗ್ಸ್

ಟೀಮ್ ಇಂಡಿಯಾ 182 ರನ್‌ಗಳ ಟಾರ್ಗೆಟ್‌ ಅನ್ನು ಚೇಸಿಂಗ್‌ ಮಾಡಲು ಹೊರಟ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 23 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ರಹಮಾನುಲ್ಲಾ ಗುರ್ಬಾಜ್ 11 ರನ್‌ಗೆ ಔಟ್ ಆದರೆ, ಇಬ್ರಾಹಿಂ ಝದ್ರಾನ್ (8), ಹಜರತುಲ್ಲಾ ಝಜೈ (2) ವಿಕೆಟ್‌ ಕಳೆದುಕೊಂಡರು. ಬಳಿಕ ಬಂದ ಬ್ಯಾಟರ್‌ ಎರಡಂಕಿ ರನ್‌ ಗಳಿಸಿದರು ಹೆಚ್ಚು ಹೊತ್ತಿನ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಷ್ಟರ ಮಟ್ಟಿಗೆ ಟೀಮ್‌ ಇಂಡಿಯಾ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು.

ಗುಲ್ಬದಿನ್ ನೈಬ್ (17), ನಜೀಬುಲ್ಲಾ ಝದ್ರಾನ್ (19), ಅಜ್ಮತುಲ್ಲಾ ಒಮರ್ಜಾಯ್ (26) ಹಾಗು ಮೊಹಮ್ಮದ್ ನಬಿ (14) ಅಫ್ಘಾನಿಸ್ತಾನ ತಂಡದ ಗೆಲುವಿಗೆ ದಿಟ್ಟ ಹೋರಾಟ ನಡೆಸಲಿಲ್ಲ. ಇತ್ತ ನಾಯಕ ರಶೀದ್‌ ಖಾನ್‌ ಕೂಡ ತಮ್ಮ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ಮಾಡಲು ಸಾಧ್ಯವಾಗಲಿಲ್ಲ.

ರಶೀದ್ ಖಾನ್(2), ನೂರ್ ಅಹ್ಮದ್ (12) ಮತ್ತು ನವೀನ್-ಉಲ್-ಹಕ್ (0) ಕೊನೆಯಲ್ಲಿ ಔಟ್‌ ಆದರೆ, ಫಜಲ್ಹಕ್ ಫಾರೂಕಿ ಅಜೇಯ 4 ರನ್‌ ಗಳಿಸಿದರು. ಈ ಮೂಲಕ ಅಫ್ಘಾನಿಸ್ತಾನ ಆಲೌಟ್‌ ಆಯಿತು.

ಟೀಮ್‌ ಇಂಡಿಯಾ ಪರ ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಜೋಡಿ ತಲಾ 3 ವಿಕೆಟ್‌ ಪಡೆದು ಸಂಭ್ರಮಿಸಿದರು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಕುಲದೀಪ್ ಯಾದವ್ 2 ವಿಕೆಟ್‌ ಉರುಳಿಸಿದರೆ, ರವೀಂದ್ರ ಜಡೇಜಾ ಹಾಗು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್‌ ಪಡೆದರು.

Story first published: Thursday, June 20, 2024, 23:43 [IST]
Other articles published on Jun 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+