IND vs BAN: ಬಾಂಗ್ಲಾ ಟೈಗರ್ಸ್‌ಗೆ ಗುಮ್ಮಿದ ಭಾರತ; ಸೆಮಿಫೈನಲ್ ಟಿಕೆಟ್ ಪಕ್ಕಾ!
ಜೂನ್ 22 ಶನಿವಾರ, ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಸೂಪರ್-8ರ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಭಾರತ ಭರ್ಜರಿಯಾಗಿ ಗೆದ್ದು ಬೀಗಿದೆ.
ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 196 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 8 ವಿಕೆಟ್‌ಗಳನ್ನು ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು.

ಹೀಗಾಗಿ ಬಾಂಗ್ಲಾದೇಶವನ್ನು 50 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಸೂಪರ್-8ರ ಗ್ರೂಪ್ 1ರಲ್ಲಿ ಭಾರತ ತಂಡ ಮೊದಲ ಸ್ಥಾನಕ್ಕೆ ತಲುಪಿದೆ.
ಭಾರತ ಆಡಿದ 2 ಪಂದ್ಯಗಳಲ್ಲಿ 4 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಜೂನ್ 27 ರಂದು ಗಯಾನಾದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಡಲಿದೆ. ಟೀಮ್ ಇಂಡಿಯಾ ಪರ ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗು ಆರ್ಷದೀಪ್ ಮಿಂಚಿನ ಬೌಲಿಂಗ್ ದಾಳಿ ನಡೆಸಿದರು.
ಚೇಸಿಂಗ್ ಶುರು ಮಾಡಿದ ಬಾಂಗ್ಲಾದೇಶ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಲಿಟನ್ ದಾಸ್ ಕೇವಲ 13 ರನ್ ಗಳಿಸಿ ಔಟಾದರು. ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಹಾಗು ತಂಝಿದ್ ಹಸನ್ ಉತ್ತಮವಾಗಿ ರನ್ ಗಳಿಸಿದರು.
ಆದರೆ 29 ರನ್ ಗಳಿಸಿ ಆಡುತ್ತಿದ ತಂಝಿದ್ ಹಸನ್ ವಿಕೆಟ್ ಕಳೆದುಕೊಂಡರೆ, ತೌಹಿದ್ ಹೃದಯೋಯ್ ಕೇವಲ 4 ರನ್ ಗಳಿಸಿ ಹೊರ ನಡೆದರು. ಇನ್ನು ಶಾಕಿಬ್ ಅಲ್ ಹಸನ್ (11), ಮಹ್ಮುದುಲ್ಲಾ (13), ಜಾಕರ್ ಅಲಿ (11) ಮತ್ತು ರಿಶಾದ್ ಹೊಸೈನ್ (24) ತಂಡದ ಗೆಲುವಿಗೆ ಹೋರಾಟ ನಡೆಸದೆ ಔಟಾದರು.
ಒಂದೆಡೆ ಬಾಂಗ್ಲಾದೇಶ ತಂಡದ ವಿಕೆಟ್‌ಗಳು ಬೀಳುತ್ತಿದ್ದರೂ ತಾಳ್ಮೆಯುತ ಬ್ಯಾಟಿಂಗ್ ಮಾಡಿದ ನಜ್ಮುಲ್ ಹೊಸೈನ್ ಶಾಂಟೊ 32 ಎಸೆತಗಳಲ್ಲಿ 3 ಸಿಕ್ಸರ್ ಹಾಗು 1 ಬೌಂಡರಿ ಮೂಲಕ 40 ರನ್ ಗಳಿಸಿ ತಂಡದ ಪರ ಅತಿ ಹೆಚ್ಚು ಸ್ಕೋರ್‌ರ ಆಗಿ ಔಟಾದರು. ಕೊನೆಯಲ್ಲಿ ಮಹೇದಿ ಹಸನ್ ಅಜೇಯ 5 ಹಾಗು ತಂಝಿಮ್ ಹಸನ್ ಸಾಕಿಬ್ 1 ರನ್ ಗಳಿಸಿದರು.
ಟೀಮ್ ಇಂಡಿಯಾ ಪರ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಸಂಭ್ರಮಿಸಿದರೆ, ಜಸ್ಪ್ರೀತ್ ಬುಮ್ರಾ ಹಾಗು ಆರ್ಷದೀಪ್ ಕಬಳಿಸಿದರು. ಇನ್ನು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಒಂದು ವಿಕೆಟ್ ಪಡೆಯವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications