IND vs ENG: ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಭಾರತ ಗೆಲ್ಲುವುದು ಕನ್ಫರ್ಮ್; ಟೀಮ್ ಇಂಡಿಯಾಗೆ 2 ಗುಡ್ ನ್ಯೂಸ್
ಜೂನ್ 26 ಬುಧವಾರ, ಐಸಿಸಿ ಪರುಷರ ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಭಾರತ ತಂಡವು ಸತತ ಗೆಲುವುಗಳೊಂದಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲು ಕೇವಲ ಎರಡು ಹೆಜ್ಜೆ ದೂರದಲ್ಲಿದೆ.
ಭಾರತವು ಜೂನ್ 27 ರಂದು ಗಯಾನಾದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಗಯಾನಾದಲ್ಲಿ ಭಾರತ ತಂಡ ಇಲ್ಲಿಯವರೆಗೆ 3 ಟಿ20 ಪಂದ್ಯಗಳನ್ನು ಆಡಿದೆ.

ಈ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾದ ಅಂಕಿ-ಅಂಶಗಳು ಅತ್ಯುತ್ತಮವಾಗಿವೆ. ಹೀಗಾಗಿ ಜೂನ್ 27 ರಂದು ಟೀಮ್ ಇಂಡಿಯಾಗೆ ಅದೃಷ್ಟ ಕೂಡ ದಯೆ ತೋರಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಸತತ ಆರು ಗೆಲುವು ಕಂಡಿರುವ ಭಾರತ
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗುಂಪು ಹಂತದಲ್ಲಿ ಭಾರತ 3 ಪಂದ್ಯಗಳನ್ನು ಗೆದ್ದು ಸೂಪರ್-8ಗೆ ಲಗ್ಗೆ ಇಟ್ಟಿತ್ತು. ಇದರ ನಂತರ, ಈ ಸುತ್ತಿನಲ್ಲಿಯೂ ರೋಹಿತ್ ಪಡೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಸೋಲಿಸಿತ್ತು.
ಈಗ ಟೀಮ್ ಇಂಡಿಯಾ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿಯೂ ಗೆಲುವಿನ ಓಟವನ್ನು ಕಾಯ್ದುಕೊಳ್ಳಲು ಬಯಸಿದೆ. ಅದಕ್ಕೂ ಮುನ್ನ ಗಯಾನಾದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೆ ಭಾರತ ತಂಡದ ಅಂಕಿ-ಅಂಶಗಳನ್ನು ತಿಳಿಯುವುದು ಬಹಳ ಮುಖ್ಯವಾಗಿದೆ.

ಗಯಾನಾದಲ್ಲಿ ಭಾರತದ ಅಂಕಿ-ಅಂಶಗಳು
ವೆಸ್ಟ್ ಇಂಡೀಸ್‌ನ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಇಲ್ಲಿಯವರೆಗೆ ಒಟ್ಟು 3 ಟಿ20 ಪಂದ್ಯಗಳನ್ನು ಆಡಿದೆ. ಅದರಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳನ್ನು ಗೆದ್ದು ಬೀಗಿದ್ದು, 1ರಲ್ಲಿ ಸೋಲು ಕಂಡಿದೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವು 2019ರಲ್ಲಿ ಗಯಾನದಲ್ಲಿ ತನ್ನ ಮೊದಲ ಟಿ20 ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿತು.
ಬಳಿಕ ಕಳೆದ ವರ್ಷ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಭಾರತ ಎರಡು ಟಿ20 ಪಂದ್ಯಗಳನ್ನು ಆಡಿತ್ತು. ವೆಸ್ಟ್ ಇಂಡೀಸ್ ಒಂದು ಪಂದ್ಯದಲ್ಲಿ ಭಾರತವನ್ನು 2 ವಿಕೆಟ್ ಗಳಿಂದ ಸೋಲಿಸಿದರೆ, ನಂತರದ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಗಳಿಂದ ಆತಿಥೇಯರನ್ನು ಬಗ್ಗು ಬಡಿದಿತ್ತು.
ಗಯಾನಾದಲ್ಲಿ ಇಂಗ್ಲೆಂಡ್ ಅಂಕಿಅಂಶಗಳು ಹೇಗಿವೆ?
ಇಂಗ್ಲೆಂಡ್ ತಂಡಕ್ಕೆ ಗಯಾನಾ ಮೈದಾನದಲ್ಲಿ ಅಷ್ಟರ ಮಟ್ಟಿಗೆ ಯಶಸ್ಸು ಸಿಕ್ಕಿಲ್ಲ. ಇಲ್ಲಿಯವರೆಗೆ ಇಂಗ್ಲೆಂಡ್ ಕೇವಲ ಒಂದು ಪಂದ್ಯವನ್ನು ಆಡಿದ್ದು, ಅದರಲ್ಲಿ ಸೋಲನ್ನು ಎದುರಿಸಬೇಕಾಯಿತು.
2024ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಎಡವಿ ಸೆಮಿಫೈನಲ್ ತಲುಪಿದೆ. ಆದರೆ, ಸೆಮಿಫೈನಲ್‌ನಲ್ಲಿ ಕಳೆದ ಟಿ20 ವಿಶ್ವಕಪ್ ಗೆದ್ದ ಆಂಗ್ಲರ ಪಡೆ ಫೈನಲ್‌ಗೆ ಲಗ್ಗೆ ಇಡಲು ಮಾಸ್ಟರ್ ಪ್ಲಾನ್‌ನೊಂದಿಗೆ ಕುಳಿತಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕವಿದೆ.
ಭಾರತಕ್ಕೆ ಫೈನಲ್ ಟಿಕೆಟ್ ಕನ್ಫರ್ಮ್!
ಭಾರತಕ್ಕೆ ಫೈನಲ್ ಆಡಲು ಟಿಕೆಟ್ ಖಚಿತವಾದಂತಿದೆ. ಜೂನ್ 27 ರಂದು ಗಯಾನಾದಲ್ಲಿ ಸುಮಾರು 89 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆ ಇದೆ.
ಟಿ20 ವಿಶ್ವಕಪ್ 2024ರ ಮೊದಲ ಸೆಮಿಫೈನಲ್‌ಗೆ ಮೀಸಲು ದಿನವನ್ನು ಇರಿಸಲಾಗಿದೆ. ಆದರೆ ಎರಡನೆಯದಕ್ಕೆ ಅಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೂನ್ 27 ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ರದ್ದಾಗಿದರೆ, ಟೀಮ್ ಇಂಡಿಯಾ ನೇರವಾಗಿ ಫೈನಲ್ ಪ್ರವೇಶಿಸುವ ಎಲ್ಲಾ ಸಾಧ್ಯತೆಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications