For Quick Alerts
ALLOW NOTIFICATIONS  
For Daily Alerts
 

T20 World Cup 2024: ಅಫ್ಘಾನ್‌ ವಿರುದ್ಧ ಬುಮ್ರಾ-ಅರ್ಷದೀಪ್ ಜೋಡಿ ಬೊಂಬಾಟ್‌ ಬೌಲಿಂಗ್‌ ಪ್ರದರ್ಶನ!

ಜೂನ್‌ 21 ಶುಕ್ರವಾರ, 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್-8ರ ಮೊದಲ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ 47 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಇಬ್ಬರೂ ಬೌಲರ್‌ಗಳು ಭಾರತದ ಪರ ತಲಾ 3 ವಿಕೆಟ್ ಪಡೆದು ಮಿಂಚಿದರು. ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಮೊದಲ ವಿಕೆಟ್‌ ತಂದುಕೊಟ್ಟರು. ಬುಮ್ರಾ ಬೌಲಿಂಗ್‌ನಲ್ಲಿ 11 ರನ್‌ ಗಳಸಿದ್ದ ರಹಮಾನುಲ್ಲಾ ಗುರ್ಬಾಜ್ ಅವರು ರಿಷಬ್ ಪಂತ್ ಅವರಿಗೆ ಕ್ಯಾಚಿತ್ತು ಔಟಾದರು. ಇದಾದ ಬಳಿಕ ರವೀಂದ್ರ ಜಡೇಜಾ ಅವರು ಹಜರತುಲ್ಲಾ ಝಜೈ (2) ನನ್ನು ಔಟ್ ಮಾಡಿದರು.

T20 World Cup 2024 Jasprit Bumrah and Arshdeep Singh bowling performance against Afghanistan

ಬುಮ್ರಾ ಉರಿ ಬೌಲಿಂಗ್‌ ದಾಳಿ

ಜಸ್ಪ್ರೀತ್ ಬುಮ್ರಾ 4 ಓವರ್‌ಗಳಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್‌ಗಳನ್ನು ಕಬಳಿಸಿದರು. ಮೊದಲು ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟ್‌ ಪಡೆು ಅಫ್ಘಾನಿಸ್ತಾನಕ್ಕೆ ಬುಮ್ರಾ ಶಾಕ್‌ ನೀಡಿದರು.

ಬಳಿಕ ಝದ್ರಾನ್ 16ನೇ ಓವರ್‌ನ ಎರಡನೇ ಎಸೆತದಲ್ಲಿ ಜಾಣತನದಿಂದ ರನ್ ಗಳಿಸಲು ಬಯಸಿದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಝದ್ರಾನ್‌ ವಿಕೆಟ್‌ ಬಿಟ್ಟು ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು. ಆದರೆ ಝದ್ರಾನ್ ಅವರು ಬುಮ್ರಾ ಫಾರ್ವರ್ಡ್ ಲೆಂಗ್ ಬಾಲ್‌ ಆಡುವುದರಲ್ಲಿ ಎಡವಿದರು.

ಹೀಗಾಗಿ ಪಾಯಿಂಟ್‌ನಲ್ಲಿ ನಿಂತಿದ್ದ ಅರ್ಷದೀಪ್ ಸಿಂಗ್ ಅವರಿಗೆ ನೇರವಾಗಿ ಕ್ಯಾಚ್ ನೀಡಿದರು. ಈ ಕ್ಯಾಚ್ ಅತ್ಯಂತ ವೇಗದಲ್ಲಿ ಅರ್ಷದೀಪ್ ಕೈ ಸೇರಿತು. ಬಳಿಕ ನಜೀಬುಲ್ಲಾ 17 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 19 ರನ್ ಗಳಿಸಿ ಬುಮ್ರಾ ಬೌಲಿಂಗ್‌ನಲ್ಲಿ ಔಟಾದರು. ಈ ಮೂಲಕ ಬುಮ್ರಾ 3 ವಿಕೆಟ್‌ ಕಬಳಿಸಿ, ಒಂದು ಮೇಡನ್‌ ಓವರ್‌ ಬೌಲ್‌ ಮಾಡಿದರು.

T20 World Cup 2024 Jasprit Bumrah and Arshdeep Singh bowling performance against Afghanistan

ಒಟ್ಟು ನಾಲ್ಲು ಪಂದ್ಯಗಳಿಂದ ಬಮ್ರಾ 8 ವಿಕೆಟ್‌ ಪಡೆದು ಟೀಮ್‌ ಇಂಡಿಯಾ ಗೆಲುವಿಗೆ ಕೊಡುಗೆ ನೀಡಿದ್ದಾರೆ.

ಡೆತ್‌ ಓವರ್‌ಗಳಲ್ಲಿ ಅರ್ಷದೀಪ್ ಸಿಂಗ್ ಅಬ್ಬರ

ಭಾರತದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಆರಂಭದಲ್ಲಿ ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯದಿದ್ದರೂ, ಹಳೆಯ ಚೆಂಡಿನಲ್ಲಿ ಅದ್ಭುತ ಪ್ರದರ್ಶನ ನೀಡಿದರು. 18ನೇ ಓವರ್ ನ ನಾಲ್ಕನೇ ಎಸೆತದಲ್ಲಿ ರಶೀದ್ ಖಾನ್ (12) ಹಾಗೂ ಅದೇ ಓವರ್ ನ ಮುಂದಿನ ಎಸೆತದಲ್ಲಿ ನವೀನ್ ಉಲ್ ಹಕ್ (0) ಅವರನ್ನು ಅರ್ಷದೀಪ್ ಔಟ್ ಮಾಡಿದರು. ಆದರೆ, ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

ಇದಾದ ಬಳಿಕ 20ನೇ ಓವರ್ ನ ಕೊನೆಯ ಎಸೆತದಲ್ಲಿ ನೂರ್ ಅಹ್ಮದ್ (12) ಅವರನ್ನು ಔಟ್‌ ಮಾಡಿದ ಅರ್ಷದೀಪ್ ಅಫ್ಘಾನಿಸ್ತಾನದ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಅರ್ಷದೀಪ್ 4 ಓವರ್ ಗಳಲ್ಲಿ 36 ರನ್ ನೀಡಿ 3 ವಿಕೆಟ್ ಪಡೆದರು.

ಟಿ20 ವಿಶ್ವಕಪ್‌ನಲ್ಲಿ ಈವರೆಗೆ ಅರ್ಷದೀಪ್ ಆಡಿರುವ 4 ಪಂದ್ಯಗಳಿಂದ 10 ವಿಕೆಟ್‌ ಪಡೆದಿದ್ದಾರೆ. 9 ರನ್‌ಗಳಿಗೆ 4 ವಿಕೆಟ್‌ ಪಡೆದಿರುವುದು ಅತ್ಯುತ್ತಮ ಪ್ರದರ್ಶನವಾಗಿದೆ.

ಪಂದ್ಯದ ಫಲಿತಾಂಶ

ಈ ಪಂದ್ಯದಲ್ಲ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಟೀಮ್‌ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್‌ ಪಾಂಡ್ಯ ಉತ್ತಮ ಜೊತೆಯಾಟವಾಡಿದರು. ಸೂರ್ಯಕುಮಾರ್‌ ಅವರ 53 ರನ್ ಮತ್ತು ಹಾರ್ದಿಕ್ ಪಾಂಡ್ಯ ಅವರ 32 ರನ್‌ಗಳಿಂದ ಭಾರತವು ಅಫ್ಘಾನಿಸ್ತಾನಕ್ಕೆ 182 ರನ್ ಗಳಿಸುವ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಅಫ್ಘಾನ್ ತಂಡ 134 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 47 ರನ್‌ಗಳಿಂದ ಸೋಲು ಕಂಡಿತು.

Story first published: Friday, June 21, 2024, 9:02 [IST]
Other articles published on Jun 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+