T20 World Cup 2024: ಸೂಪರ್-8ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಕುಲದೀಪ್-ಜೈಸ್ವಾಲ್‌ಗೆ ಸಿಗುತ್ತಾ ಅವಕಾಶ?
ಜೂನ್ 19 ಬುಧವಾರ, ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರಷರ 2024ರ ಟಿ20 ವಿಶ್ವಕಪ್‌ನ ಸೂಪರ್-8 ಅಭಿಯಾನ ಪ್ರಾರಂಭವಾಗಲು ಕೇವಲ 1 ದಿನ (ಜೂನ್ 20) ಇದೆ. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸಲಿದೆ.
ಟಿ20 ವಿಶ್ವಕಪ್ 2024ರಲ್ಲಿ ಟೀಮ್ ಇಂಡಿಯಾ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಕೆಲವು ಆಟಗಾರರು ಬೆಂಚ್ ಕಾಯುತ್ತಿದ್ದಾರೆ. ಆದರೆ ಬೆಂಚ್ ಕಾಯುತ್ತಿರುವ ಆಟಗಾರರಿಗೆ ಇನ್ನೂ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

ನ್ಯೂಯಾರ್ಕ್‌ನಲ್ಲಿ ಟೀಮ್ ಇಂಡಿಯಾ 'ಎ' ಗುಂಪಿನ ಎಲ್ಲಾ ಪಂದ್ಯಗಳನ್ನು ಆಡಿತ್ತು. ಅಲ್ಲಿನ ಪಿಚ್‌ಗಳು ಸಂಪೂರ್ಣ ಬೌಲರ್‌ಗಳಿಗೆ ಸಹಕಾರಿಯಾಗಿತ್ತು. ಪರಿಣಾಮ ಯಾವುದೇ ತಂಡವು ಬೃಹತ್ ರನ್ ಗಳಿಸಲು ಸಾಧ್ಯವಾಗಿರಲಿಲ್ಲ.
ಇದೀಗ ಟಿ20 ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ. ಕೆರಿಬಿಯನ್ ಪಿಚ್‌ಗಳು ಬ್ಯಾಟಿಂಗ್‌ಗೆ ಉತ್ತಮವೆಂದು ಅನೇಕ ಕ್ರಿಕೆಟ್ ಪಂಡಿತರು ಹೇಳಿದ್ದಾರೆ. ಆದ್ದರಿಂದ ಟೀಮ್ ಇಂಡಿಯಾ ಯುವ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗು ಚೈನ್‌ಮ್ಯಾನ್ ಬೌಲರ್ ಕುಲದೀಪ್ ಯಾದವ್ ಅವರಿಗೂ ಆಡುವ 11ರ ಬಳಗದಲ್ಲಿ ನೀಡಬೇಕು ಎಂಬ ಒತ್ತಾಯಗಳು ನಾಯಕ ರೋಹಿತ್ ಶರ್ಮಾನಿಗೆ ಬರುತ್ತಿವೆ.
ಕುಲದೀಪ್ ಎಂಟ್ರಿ ಕೊಟ್ಟರೆ ಯಾರು ಔಟ್?
ಕುಲದೀಪ್ ಯಾದವ್ ಅವರನ್ನು ಪ್ಲೇಯಿಂಗ್-11 ರಲ್ಲಿ ಆಡಿಸಿದರೆ, ಯಾರನ್ನು ತಂಡದಿಂದ ಆಚೆ ಹಾಕಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಬಹುಶಃ ಮೊಹಮ್ಮದ್ ಸಿರಾಜ್ ಅಥವಾ ಅರ್ಷದೀಪ್ ಸಿಂಗ್ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗಬಹುದು.
ಭಾರತ ತಂಡದ ಎರಡು ಪಂದ್ಯಗಳನ್ನು ಗಮನಿಸಿದರೆ, ಕೆರಿಬಿಯನ್ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದ್ದು, ಕುಲದೀಪ್ ಅವರನ್ನು ಕಣಕ್ಕೀಳಿಸುವುದು ಪ್ರಮುಖವಾಗಿದೆ. ಕೆನ್ಸಿಂಗ್ಟನ್ ಓವಲ್ ಸುತ್ತ ತಣ್ಣನೆಯ ಗಾಳಿ ಬೀಸುವುದರಿಂದ ವೇಗದ ಬೌಲರ್‌ಗಳು ಪವರ್ ಪ್ಲೇಯಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಸಾಧ್ಯತೆಯಿದೆ.
ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇನ್ನೂ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಭಾರತೀಯ ಅಭಿಮಾನಿಗಳೂ ಕಣ್ಣಿಟ್ಟಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ.
ದುಬೆ ಜಾಗಕ್ಕೆ ಯಶಸ್ವಿ?
ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ ಇನ್ನೂ ಉತ್ತಮ ಫಾರ್ಮ್‌ಗೆ ಬಂದಿಲ್ಲ. ದುಬೆಗೆ ಅಮೆರಿಕದ ಪಿಚ್‌ಗಳಲ್ಲಿ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಆದರೆ ಈಗ ಅವರು ದೊಡ್ಡ ಹೊಡೆತಗಳನ್ನು ಬಾರಿಸಲು ಸಿದ್ದರಾಗಿದ್ದಾರೆ.
ಆದರೆ ಶಿವಂ ದುಬೆ ಅವರ ಜಾಗಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿಕೊಳ್ಳಬಹುದು ಎನ್ನಲಾಗಿದೆ. ಇದರ ಜೊತೆಗೆ ಯಶಸ್ವಿ ಅವರು ಬ್ಯಾಟ್ ಮಾಡಲು ಯಾವ ಕ್ರಮಾಂಕದಲ್ಲಿ ಬರುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಆರಂಭಿಕರಾಗಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುವ ಚಿಂತನೆಯನ್ನು ಸದ್ಯಕ್ಕೆ ನಾಯಕ ಮಾಡಿಲ್ಲ.
ಭಾರತದ ಸ್ಟಾರ್ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಶೈಲಿಯಲ್ಲಿ ಆಡುವ ಮೂಲಕ ಅಮೆರಿಕ ವಿರುದ್ಧ ಅರ್ಧಶತಕ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾಗಲಿಲ್ಲ.
ಬೌಲಿಂಗ್‌ನಲ್ಲಿ ಅರ್ಷದೀಪ್ ಅವರ ಪ್ರದರ್ಶನವು ಪ್ರತಿ ಪಂದ್ಯದಲ್ಲಿ ಸುಧಾರಣೆ ಕಾಣುತ್ತಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಚೆನ್ನಾಗಿ ಬೌಲಿಂಗ್ ವಿಭಾಗವನ್ನು ಮುನ್ನೆಡೆಸುತ್ತಿದ್ದಾರೆ. ಇನ್ನು ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಪರಿಣಾಮಕಾರಿ ಎಂದು ಸಾಬೀತುಪಡಿಸಲು ಅವಕಾಶವಿದೆ.
ಭಾರತ vs ಅಫ್ಘಾನಿಸ್ತಾನ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ .
ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಅಜ್ಮತುಲ್ಲಾ ಉಮರ್ಜಾಯ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ನಂಗ್ಯಾಲ್ ಖರೋಟಿ, ಮುಜೀಬ್ ಉರ್ ರೆಹಮಾನ್, ನವೋರ್ ರೆಹಮಾನ್, ನವೋರ್ ರೆಹಮಾನ್, ನೂರ್. ಫಾರೂಕಿ, ಫರೀದ್ ಅಹ್ಮದ್ ಮಲಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications