ಜೂನ್ 13 ಗುರುವಾರ, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಸೂಪರ್-8 ತಲುಪಲು ಪ್ರಬಲ ಹೋರಾಟ ನಡೆಸುತ್ತಿವೆ. ಟಿ20 ವಿಶ್ವಕಪ್ ಗೆದ್ದಿರುವ ಈ ಎಲ್ಲಾ ತಂಡಗಳು ಟೂರ್ನಿಯಿಂದ ಹೊರಗುಳಿಯುವ ಭೀತಿಯಲ್ಲಿರುವುದು ಮಾತ್ರ ಸತ್ಯ.
ಟಿ20 ವಿಶ್ವಕಪ್ ಡಿ ಗುಂಪಿನಲ್ಲಿರುವ ಮಾಜಿ ಚಾಂಪಿಯನ್ ಶ್ರೀಲಂಕಾ ತಂಡ ಬಹುತೇಕ ಟೂರ್ನಿಯಿಂದ ಔಟ್ ಆಗಿದೆ. ಇನ್ನು ಎ ಗುಂಪಿನಲ್ಲಿರುವ ಹಾಲಿ ರನ್ನರ್ ಆಪ್ ಹಾಗು ಮಾಜಿ ಟಿ20 ವಿಶ್ವಕಪ್ ವಿಜೇತ ತಂಡ ಪಾಕಿಸ್ತಾನ ಕೂಡ ಟೂರ್ನಿಯಿಂದ ಹೊರಗುಳಿಯುವ ಖಚಿತವಾಗಿದೆ.

ಇನ್ನೊಂದೆಡೆ ಬಿ ಗುಂಪಿಯನಲ್ಲಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸಹಾ ಸೂಪರ್-8 ತಲುಪಲು ಉಳಿದ ಎರಡು ಪಂದ್ಯಗಳನ್ನು ಭಾರೀ ಅಂತರದಿಂದ ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಅನ್ನು ಟೂರ್ನಿಯಿಂದ ಹೊರ ಕಳಿಸಲು ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಏಕೆಂದರೆ ಕಾಂಗೂರು ಪಡೆಯ ವೇಗ ಬೌಲರ್ ಜೋಶ್ ಹ್ಯಾಜಲ್‌ವುಡ್ ನೀಡಿರುವ ಈ ಒಂದು ಹೇಳಿಕೆ ತಂಡದ ತಂತ್ರಗಾರಿಕೆಯನ್ನು ಬಹಿರಂಗಪಡಿಸಿದೆ. ಮತ್ತೊಂದೆಡೆ ಈ ಹೇಳಿಕೆಯಿಂದಾಗಿ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.
ನಮೀಬಿಯಾ ವಿರುದ್ಧದ ಗೆಲುವಿನ ನಂತರ ಮಾತನಾಡಿದ ಹ್ಯಾಜಲ್‌ವುಡ್, 'ಈ ಬಾರಿಯ ವಿಶ್ವಕಪ್‌ನ ಯಾವುದೇ ಹಂತದಲ್ಲಿ ನಾವು ಮತ್ತೆ ಇಂಗ್ಲೆಂಡ್ ಅನ್ನು ಎದುರಿಸುವ ಸಾಧ್ಯತೆಯಿದೆ. ನಮ್ಮ ತಂಡ ಟಿ20ಯಲ್ಲಿ ಸಾಕಷ್ಟು ಹೋರಾಟ ನಡೆಸಿದ ತಂಡಗಳಲ್ಲಿ ಇಂಗ್ಲೆಂಡ್ ಕೂಡ ಒಂದು.
ಹೀಗಾಗಿ ಅವರನ್ನು ಟೂರ್ನಿಯಿಂದ ಹೊರಗಿಟ್ಟರೆ ಉತ್ತಮ. ಇದು ನಮಗೆ ಮಾತ್ರವಲ್ಲದೆ ಎಲ್ಲಾ ತಂಡಗಳ ಹಿತದೃಷ್ಟಿಯಿಂದ ಕೂಡಿರುತ್ತದೆ. ಇದು ನೋಡಲು ಆಸಕ್ತಿದಾಯಕವಾಗಿದೆ. ಟಿ 20 ವಿಶ್ವಕಪ್‌ನಿಂದ ಇಂಗ್ಲೆಂಡ್‌ನನ್ನು ಹೊರಹಾಕಲು ತಮ್ಮ ತಂಡವು ಗೆಲುವಿನ ಅಂತರವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ಹೇಳಿದ್ದರು.
ಟಿ20 ವಿಶ್ವಕಪ್ 2024ರಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಒಂದು ಪಂದ್ಯ ಮಳೆಯಿಂದ ರದ್ದಾರೆ, ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ಸೋತಿತ್ತು.
ಇದೀಗ ಇಂಗ್ಲೆಂಡ್ ತಂಡ ಒಮನ್ ಮತ್ತು ನಮೀಬಿಯಾ ವಿರುದ್ಧ ಉಳಿದ ಎರಡು ಪಂದ್ಯಗಳನ್ನು ಆಡಬೇಕಿದೆ. ಸೂಪರ್-8 ತಲುಪಲು ಇಂಗ್ಲೆಂಡ್ ಈ ಎರಡೂ ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲಬೇಕು.
ಇನ್ನೊಂದೆಡೆ ಆಸ್ಟ್ರೇಲಿಯಾ ತಂಡ ಸ್ಕಾಟ್ಲೆಂಡ್ ವನ್ನು ಅಲ್ಪ ಅಂತರದಿಂದ ಸೋಲಿಸಿದರೆ ರನ್ ರೇಟ್ ನಲ್ಲಿ ಇಂಗ್ಲೆಂಡ್ ಹೊರಗುಳಿದಿದ್ದು, ಸೂಪರ್-8ರಲ್ಲಿ ಸ್ಕಾಟ್ಲೆಂಡ್ ಸ್ಥಾನ ಖಚಿತವಾಗಲಿದೆ. ಈ ವಿಚಾರವನ್ನು ಹ್ಯಾಜಲ್ ವುಡ್ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಇಂಗ್ಲೆಂಡ್ ತನ್ನ ಎರಡು ಪಂದ್ಯಗಳಲ್ಲಿ ಒಂದನ್ನು ಕಳೆದುಕೊಂಡರೆ ಅಥವಾ ಮಳೆ ಪಂದ್ಯಕ್ಕೆ ಅಡ್ಡಿಯಾದರೆ 2022ರ ಚಾಂಪಿಯನ್‌ಗಳು ಸ್ವತಃ ಹೊರ ಹೋಗುತ್ತಾರೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.11 ರ ಅಡಿಯಲ್ಲಿ ಕಾಂಗರೂ ಪಡೆ ವಿರುದ್ಧ ಆರೋಪ ಹೊರಿಸಬಹುದಾಗಿದೆ. ಅನ್ಯಾಯದ ಕಾರ್ಯತಂತ್ರ ಅಥವಾ ಯುದ್ಧತಂತ್ರದ ಕಾರಣಗಳಿಗಾಗಿ ಆಟದ ಕುಶಲತೆಯನ್ನು ತಡೆಯಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಒಂದು ತಂಡವು ಉದ್ದೇಶಪೂರ್ವಕವಾಗಿ ಪಂದ್ಯವನ್ನು ಕಳೆದುಕೊಂಡರೆ ಅಥವಾ ಪಾಯಿಂಟ್ ಪಟ್ಟಿಯಲ್ಲಿ ಮತ್ತೊಂದು ತಂಡದ ಮೇಲೆ ಪ್ರಭಾವ ಬೀರಲು ನಿವ್ವಳ ರನ್ ರೇಟ್ ಅನ್ನು ಹೆಚ್ಚು ಕಡಿಮೆ ಮಾಡಲು ಯೋಜಿಸಿದರೆ ಆರೋಪ ಮಾಡಬಹುದು.
ಇದಕ್ಕಾಗಿ, ನಾಯಕನನ್ನು ಎರಡನೇ ಹಂತದಲ್ಲಿ ತಪ್ಪಿತಸ್ಥ ಎಂದು ಪರಿಗಣಿಸಲಾಗುವುದು. ಪಂದ್ಯದ 50 ಪ್ರತಿಶತ ದಂಡ ಮತ್ತು ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ವೇಗಿ ಹ್ಯಾಜಲ್‌ವುಡ್ ನೀಡಿರುವ ಬಹಿರಂಗ ಹೇಳಿಕೆ ರೀತಿ ನೀಡಿದರೆ ಮಿಚೆಲ್ ಮಾರ್ಷ್ ಅವರಿಗೆ ಎರಡು ಸೂಪರ್-8 ಪಂದ್ಯಗಳಿಗೆ ನಿಷೇಧ ಹೇರಬಹುದು.