T20 World Cup 2024: ರೋಹಿತ್ ಶರ್ಮಾ ಔಟ್ ಮಾಡುವ ಟ್ರಿಕ್ ತಿಳಿಸಿದ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್
ಜೂನ್ 8 ಶನಿವಾರ, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಕ್ಕೆ ಕೇವಲ ಒಂದು ದಿನ ಮಾತ್ರ ಉಳಿದಿದೆ. ಜೂನ್ 9ರ ಭಾನುವಾರ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಉಭಯ ತಂಡಗಳ ಹೈವೋಲ್ಟೇಜ್ ಪಂದ್ಯ ಆರಂಭವಾಗಲಿದೆ.
ಈ ಪಂದ್ಯಕ್ಕಾಗಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯವನ್ನು ಗೆಲ್ಲಲೇಬೇಕಾದ ಸಂಪೂರ್ಣ ಒತ್ತಡ ಉಭಯ ದೇಶಗಳ ಆಟಗಾರರ ಮೇಲಿದೆ. ಪಾಕಿಸ್ತಾನ ಕಳೆದ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದು, ಐರ್ಲೆಂಡ್ ಎದುರು ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ.

ಈ ನಡುವೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಮೊಹಮ್ಮದ್ ಅಮೀರ್ ದೊಡ್ಡ ಹೇಳಿಕೆ ನೀಡಿದ್ದಾರೆ. ನಿವೃತ್ತಿಯ ನಂತರ ಪಾಕಿಸ್ತಾನದ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್ ಅಮೀರ್, ಭಾರತ-ಪಾಕಿಸ್ತಾನ ನಡುವಿನ ಶ್ರೇಷ್ಠ ಪಂದ್ಯಕ್ಕೂ ಮುನ್ನ ಹಿಟ್‌ಮ್ಯಾನ್ ಅವರನ್ನು ಹೊಗಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ವಿಶೇಷ ಸಂವಾದದಲ್ಲಿ ಅಮೀರ್, ರೋಹಿತ್ ಶರ್ಮಾ ವಿಶ್ವ ದರ್ಜೆಯ ಆಟಗಾರ. ಅವರು ಒಮ್ಮೆ ಕ್ರೀಸ್‌ನಲ್ಲಿ ಕಚ್ಚಿ ನಿಂತರೆ ಅವರಿಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟಕರ ಮತ್ತು ಅಪಾಯಕಾರಿ. ಅವರು ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರ ಎಂದಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮಾ ಅವರನ್ನು ಔಟ್ ಮಾಡುವ ವಿಧಾನವನ್ನು ಮೊಹಮ್ಮದ್ ಅಮೀರ್ ತಿಳಿಸಿದ್ದಾರೆ. ತನ್ನ ಆಕ್ರಮಕಾರಿ ಬ್ಯಾಟಿಂಗ್ ಮೂಲಕ ವಿಶ್ವದ ಶ್ರೇಷ್ಠ ಬೌಲರ್‌ಗಳನ್ನು ಬೆಚ್ಚಿ ಬೀಳಿಸಿರುವ ರೋಹಿತ್ ರನ್ನು ಔಟ್ ಮಾಡುವುದು ಕಷ್ಟ.

ರೋಹಿತ್ ಒಮ್ಮೆ ಫಾರ್ಮ್ ಗೆ ಬಂದಾಗ ಅವರನ್ನು ಹೇಗೆ ಕಟ್ಟಿ ಹಾಕುವುದು ಎಂಬುದು ತಿಳಿಯುವುದಿಲ್ಲ. ಆದರೆ ಪ್ರಾರಂಭದಲ್ಲಿಯೇ ರೋಹಿತ್ ನನ್ನು ಹೊರಹಾಕಲು ಅವಕಾಶವಿದೆ.
ಆರಂಭದಲ್ಲಿ ರೋಹಿತ್ ಪ್ಯಾಡ್‌ಗಳ ಮೇಲೆ ಅಥವಾ ಬ್ಯಾಟ್ ಮೇಲೆ ಬೌಲಿಂಗ್ ಮಾಡಿ ಔಟ್ ಮಾಡಬಹುದು. ಆದರೆ, ರೋಹಿತ್ 15 ರಿಂದ 20 ಎಸೆತಗಳನ್ನು ಆಡಿದರೆ ಬೌಲರ್‌ಗಳಿವಗೆ ತುಂಬ ಅಪಾಯಕಾರಿ ಆಗುತ್ತಾರೆ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.
ಅಮೀರ್ ವಿರುದ್ಧ ರೋಹಿತ್ ಕಳಪೆ ಅಂಕಿ-ಅಂಶ
ವಿಶ್ವದೆಲ್ಲೆಡೆ ಪವರ್ ಫುಲ್ ಬೌಲರ್ ಗಳನ್ನು ಬಗ್ಗು ಬಡಿದಿರುವ ರೋಹಿತ್ ಶರ್ಮಾ, ಮೊಹಮ್ಮದ್ ಅಮೀರ್ ಮುಂದೆ ಸ್ವಲ್ವ ಸೈಲೆಂಟ್ ಆಗಿದ್ದಾರೆ. ರೋಹಿತ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೀರ್ ಬೌಲಿಂಗ್‌ನಲ್ಲಿ ಕೇವಲ 7 ಎಸೆತಗಳನ್ನು ಎದುರಿಸಿದ್ದಾರೆ.
ಈ ಅವಧಿಯಲ್ಲಿ ರೋಹಿತ್ ಕೇವಲ 1 ರನ್ ಗಳಿಸಿ 2 ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ. ಇದೀಗ ಜೂನ್ 9 ರಂದು ಭಾರತ-ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯದಲ್ಲಿ ಅಮೀರ್ ಮತ್ತು ರೋಹಿತ್ ಪೈಕಿ ಯಾರು ಬೆಸ್ಟ್ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications