Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ರೋಚಕ ಸೂಪರ್ ಓವರ್‌ನಲ್ಲಿ ಒಮನ್ ವಿರುದ್ಧ ಗೆದ್ದು ಬೀಗಿದ ನಮೀಬಿಯಾ

ಸೋಮವಾರ, ಜೂನ್ 3ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಒಮನ್ ವಿರುದ್ಧ ನಮೀಬಿಯಾ ತಂಡವು ರೋಚಕ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿತು.

110 ರನ್‌ಗಳ ಸಾಧಾರಣ ಗುರಿ ಪಡೆದ ಹೊರತಾಗಿಯೂ ನಮೀಬಿಯಾ ತಂಡ ಒಮನ್ ತಂಡದ ಬೌಲರ್‌ಗಳು ಬಿಗಿ ಬೌಲಿಂಗ್ ಪ್ರದರ್ಶನ ನೀಡಿದ ಪರಿಣಾಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 109 ರನ್ ಗಳಿಸಿ ಟೈ ಮಾಡಿಕೊಂಡಿತು.

T20 World Cup 2024 Namibia beat Oman by 11 Runs in Thrilling Super Over

ನಂತರ ನಡೆದ ರೋಚಕ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ತಂಡ ಒಂದು ಓವರ್‌ನಲ್ಲಿ 21 ರನ್ ಬಾರಿಸಿತು. ಆ ಬಳಿಕ 22 ರನ್‌ಗಳ ಗೆಲುವಿನ ಗುರಿ ಪಡೆದ ಒಮನ್ ತಂಡ ಕೇವಲ 10 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

ಈ ಮುನ್ನ ನಮೀಬಿಯಾ ತಂಡದ ಇನ್ನಿಂಗ್ಸ್ ಆರಂಭಿಸಿದ ಮೈಕೆಲ್ ವ್ಯಾನ್ ಲಿಂಗೆನ್ ಮತ್ತು ನಿಕೋಲಾಸ್ ಡೇವಿನ್ ದೊಡ್ಡ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ. ಮೈಕೆಲ್ ವ್ಯಾನ್ ಲಿಂಗೆನ್ ಸೊನ್ನೆಗೆ ಔಟಾದರೆ, ನಿಕೋಲಾಸ್ ಡೇವಿನ್ 31 ಎಸೆತಗಳಲ್ಲಿ 24 ರನ್ ಗಳಿಸಿದರು.

T20 World Cup 2024 Namibia beat Oman by 11 Runs in Thrilling Super Over

ಜಾನ್ ಫ್ರಿಲಿಂಕ್ 48 ಎಸೆತಗಳಲ್ಲಿ 6 ಬೌಂಡರಿ ಸಮೇತ 45 ರನ್ ಬಾರಿಸಿದರು, ನಾಯಕ ಗೆರ್ಹಾರ್ಡ್ ಎರಾಸ್ಮಸ್ 13 ರನ್, ಜೆಜೆ ಸ್ಮಿತ್ 8 ರನ್, ಡೇವಿಡ್ ವೈಸ್ 9 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಒಮನ್ ತಂಡದ ಪರ ಮೆಹ್ರಾನ್ ಖಾನ್ 3 ಓವರ್‌ಗಳಲ್ಲಿ 7 ರನ್ ನೀಡಿ 3 ವಿಕೆಟ್ ಪಡೆದರೆ, ಬಿಲಾಲ್ ಖಾನ್, ಅಕಿಬ್ ಇಲ್ಯಾಸ್ ಮತ್ತು ಅಯಾನ್ ಖಾನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಒಮನ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಕಶ್ಯಪ್ ಪ್ರಜಾಪತಿ ಮತ್ತು ನಸೀಮ್ ಖುಷಿ ಉತ್ತಮ ಅರಂಭ ನೀಡಲು ವಿಫಲರಾದರು. ತಂಡದ ಮೊತ್ತ 2 ರನ್ ಆಗುವಷ್ಟರಲ್ಲಿ ಇಬ್ಬರು ವಿಕೆಟ್ ನೀಡಿ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ಅಕಿಬ್ ಇಲ್ಯಾಸ್ ಡಕ್‌ಗೆ ಔಟಾದರು.

ಈ ವೇಳೆ ಕ್ರೀಸ್‌ಗೆ ಬಂದ ಜೀಶನ್ ಮಕ್ಸೂದ್ 20 ಎಸೆತಗಳಲ್ಲಿ 22 ರನ್ ಗಳಿಸಿದರೆ, ಖಾಲಿದ್ ಕೈಲ್ 39 ಎಸೆತಗಳಲ್ಲಿ 34 ರನ್ ಗಳಿಸಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ಆ ಬಳಿಕ ಅಯಾನ್ ಖಾನ್ 15 ರನ್ ಗಳಿಸಿ ಅಲ್ಪ ಕಾಣಿಕೆ ನೀಡಿದರು.

ಉಳಿದಂತೆ ಕೊನೆಯಲ್ಲಿ ಮೊಹಮ್ಮದ್ ನದೀಮ್ 6 ರನ್, ಮೆಹ್ರಾನ್ ಖಾನ್ 7 ರನ್, ಶಕೀಲ್ ಅಹ್ಮದ್ 11 ರನ್, ಕಲೀಮುಲ್ಲಾ 2 ರನ್ ಗಳಿಸಿದ್ದರಿಂದ ತಂಡದ ಮೊತ್ತ 100ರ ಗಡಿ ದಾಟಿತು.

ಬೌಲಿಂಗ್‌ನಲ್ಲಿ ನಮೀಬಿಯಾ ತಂಡದ ಪರ ರೂಬೆನ್ ಟ್ರಂಪೆಲ್ಮನ್ 4 ಓವರ್‌ಗಳಲ್ಲಿ 21 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಡೇವಿಡ್ ವೈಸ್ 3.4 ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು. ನಾಯಕ ಗೆರ್ಹಾರ್ಡ್ ಎರಾಸ್ಮಸ್ 4 ಓವರ್‌ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೆ, ಬರ್ನಾರ್ಡ್ ಸ್ಕೋಲ್ಟ್ಜ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

Story first published: Monday, June 3, 2024, 10:18 [IST]
Other articles published on Jun 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+