T20 World Cup 2024: ನಮೀಬಿಯಾ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಒಮನ್; ಸಾಧಾರಣ ಗುರಿ
ಸೋಮವಾರ, ಜೂನ್ 3ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ನಮೀಬಿಯಾ ತಂಡದ ವಿರುದ್ಧ ಒಮನ್ ತಂಡ ಸಾಧಾರಣ ರನ್‌ಗಳನ್ನು ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಒಮನ್ ತಂಡ ನಮೀಬಿಯಾ ತಂಡದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ನಿಗದಿತ 19.4 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಗಿದ್ದು, ನಮೀಬಿಯಾ ತಂಡಕ್ಕೆ 110 ರನ್‌ಗಳ ಗುರಿ ನೀಡಿದೆ.

ಒಮನ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಕಶ್ಯಪ್ ಪ್ರಜಾಪತಿ ಮತ್ತು ನಸೀಮ್ ಖುಷಿ ಉತ್ತಮ ಅರಂಭ ನೀಡಲು ವಿಫಲರಾದರು. ತಂಡದ ಮೊತ್ತ 2 ರನ್ ಆಗುವಷ್ಟರಲ್ಲಿ ಇಬ್ಬರು ವಿಕೆಟ್ ನೀಡಿ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ಅಕಿಬ್ ಇಲ್ಯಾಸ್ ಡಕ್‌ಗೆ ಔಟಾದರು.
ಈ ವೇಳೆ ಕ್ರೀಸ್‌ಗೆ ಬಂದ ಜೀಶನ್ ಮಕ್ಸೂದ್ 20 ಎಸೆತಗಳಲ್ಲಿ 22 ರನ್ ಗಳಿಸಿದರೆ, ಖಾಲಿದ್ ಕೈಲ್ 39 ಎಸೆತಗಳಲ್ಲಿ 34 ರನ್ ಗಳಿಸಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ಆ ಬಳಿಕ ಅಯಾನ್ ಖಾನ್ 15 ರನ್ ಗಳಿಸಿ ಅಲ್ಪ ಕಾಣಿಕೆ ನೀಡಿದರು.

ಉಳಿದಂತೆ ಕೊನೆಯಲ್ಲಿ ಮೊಹಮ್ಮದ್ ನದೀಮ್ 6 ರನ್, ಮೆಹ್ರಾನ್ ಖಾನ್ 7 ರನ್, ಶಕೀಲ್ ಅಹ್ಮದ್ 11 ರನ್, ಕಲೀಮುಲ್ಲಾ 2 ರನ್ ಗಳಿಸಿದ್ದರಿಂದ ತಂಡದ ಮೊತ್ತ 100ರ ಗಡಿ ದಾಟಿತು.
ಬೌಲಿಂಗ್‌ನಲ್ಲಿ ನಮೀಬಿಯಾ ತಂಡದ ಪರ ರೂಬೆನ್ ಟ್ರಂಪೆಲ್ಮನ್ 4 ಓವರ್‌ಗಳಲ್ಲಿ 21 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಡೇವಿಡ್ ವೈಸ್ 3.4 ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು. ನಾಯಕ ಗೆರ್ಹಾರ್ಡ್ ಎರಾಸ್ಮಸ್ 4 ಓವರ್‌ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೆ, ಬರ್ನಾರ್ಡ್ ಸ್ಕೋಲ್ಟ್ಜ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.
ನಮೀಬಿಯಾ vs ಒಮನ್ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ 2024ರ ಟಿ20 ವಿಶ್ವಕಪ್‌ನ ಸಂಪೂರ್ಣ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಹೀಗಾಗಿ ನಮೀಬಿಯಾ vs ಒಮನ್ ನಡುವಿನ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದ್ದರೆ, ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.
ಒಮನ್ ತಂಡದ ಆಡುವ 11ರ ಬಳಗ
ಕಶ್ಯಪ್ ಪ್ರಜಾಪತಿ, ನಸೀಮ್ ಖುಷಿ (ವಿಕೆಟ್ ಕೀಪರ್), ಅಕಿಬ್ ಇಲ್ಯಾಸ್ (ನಾಯಕ), ಜೀಶನ್ ಮಕ್ಸೂದ್, ಖಾಲಿದ್ ಕೈಲ್, ಅಯಾನ್ ಖಾನ್, ಮೊಹಮ್ಮದ್ ನದೀಮ್, ಮೆಹ್ರಾನ್ ಖಾನ್, ಶಕೀಲ್ ಅಹ್ಮದ್, ಕಲೀಮುಲ್ಲಾ, ಬಿಲಾಲ್ ಖಾನ್.
ನಮೀಬಿಯಾ ತಂಡದ ಆಡುವ 11ರ ಬಳಗ
ಮೈಕೆಲ್ ವ್ಯಾನ್ ಲಿಂಗೆನ್, ನಿಕೋಲಾಸ್ ಡೇವಿನ್, ಜಾನ್ ಫ್ರಿಲಿಂಕ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಮಲನ್ ಕ್ರುಗರ್, ಜೆಜೆ ಸ್ಮಿತ್, ಡೇವಿಡ್ ವೈಸ್, ಝೇನ್ ಗ್ರೀನ್ (ವಿಕೆಟ್ ಕೀಪರ್), ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್, ತಂಗೇನಿ ಲುಂಗಮೆನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications