For Quick Alerts
ALLOW NOTIFICATIONS  
For Daily Alerts
 

T20 World Cup 2024: ಹೊಸ ಟಿ20 ದಾಖಲೆ ನಿರ್ಮಿಸಿದ ನಮೀಬಿಯಾ ಬೌಲರ್

ಸೋಮವಾರ, ಜೂನ್ 3ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಒಮನ್ ತಂಡದ ವಿರುದ್ಧ ನಮೀಬಿಯಾ ರೋಚಕ ಸೂಪರ್ ಓವರ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿತು.

ಒಮನ್ ವಿರುದ್ಧ ಟಿ20 ವಿಶ್ವಕಪ್ 2024ರ ನಮೀಬಿಯಾದ ಮೊದಲ ಪಂದ್ಯದಲ್ಲಿ ರೂಬೆನ್ ಟ್ರಂಪೆಲ್‌ಮನ್ ಹೊಸ ಟಿ20 ದಾಖಲೆಯನ್ನು ನಿರ್ಮಿಸಿದ್ದಾರೆ.

T20 World Cup 2024 Namibia s Ruben Trumpelmann Sets New T20 Record Match Against Oman

ಓಮನ್ ಬ್ಯಾಟಿಂಗ್ ವಿಭಾಗವನ್ನು ಅಲುಗಾಡಿಸಿದಾಗ 26 ವರ್ಷದ ಎಡಗೈ ವೇಗಿ ರೂಬೆನ್ ಟ್ರಂಪೆಲ್‌ಮನ್ ಟಿ20 ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎನಿಸಿಕೊಂಡರು.

ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಟಾಸ್ ಗೆದ್ದ ನಂತರ, ಬೌಲರ್‌ಗಳಿಗೆ ಸಾಕಷ್ಟು ನೆರವು ನೀಡಿದ ಪಿಚ್‌ನಲ್ಲಿ ಬೌಲಿಂಗ್ ಮಾಡಲು ನಿರ್ಧರಿಸಿದರು. ಈ ವೇಳೆ ರೂಬೆನ್ ಟ್ರಂಪೆಲ್‌ಮನ್ ಮಾರಕ ಬೌಲಿಂಗ್ ದಾಳಿ ನಡೆಸಿದರು.

ರೂಬೆನ್ ಟ್ರಂಪೆಲ್‌ಮನ್ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಆರಂಭಿಕ ಬ್ಯಾಟರ್‌ಗಳಾದ ಕಶ್ಯಪ್ ಪ್ರಜಾಪತಿ ಮತ್ತು ನಾಯಕ ಅಕಿಬ್ ಇಲ್ಯಾಸ್ ಅವರ ದೊಡ್ಡ ವಿಕೆಟ್‌ಗಳನ್ನು ಕಬಳಿಸಿದ್ದರಿಂದ ನಮೀಬಿಯಾ ಆರಂಭಿಕ ಮುನ್ನಡೆ ಸಾಧಿಸಿತು.

ಬಲಗೈ ಬ್ಯಾಟರ್‌ಗಳಿಗೆ ಎಡಗೈ ಸ್ವಿಂಗ್ ಬೌಲಿಂಗ್ ಮಾಸ್ಟರ್‌ಕ್ಲಾಸ್ ಪ್ರದರ್ಶಿಸಿದ ರೂಬೆನ್ ಟ್ರಂಪೆಲ್‌ಮನ್‌ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ಮಿಂಚಿದರು ಮತ್ತು ದಾಖಲೆ ನಿರ್ಮಿಸಿದರು.

ತಡವಾಗಿ ತಿರುಗಿದ ಫುಲ್-ಲೆಂಗ್ತ್ ಎಸೆತದಲ್ಲಿ ಕಶ್ಯಪ್ ಪ್ರಜಾಪತಿಯನ್ನು ಔಟ್ ಮಾಡಿದರೆ, ಅಕಿಬ್ ಇಲ್ಯಾಸ್‌ಗೆ ಆಡಲಾಗದ ಇನ್ ಸ್ವಿಂಗ್ ಯಾರ್ಕರ್ ಹಾಕಿ ವಿಕೆಟ್ ಪಡೆದರು.

ಆದಾಗ್ಯೂ, ರೂಬೆನ್ ಟ್ರಂಪೆಲ್‌ಮನ್ ಹ್ಯಾಟ್ರಿಕ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ತಮ್ಮ ಎರಡನೇ ಓವರ್‌ನಲ್ಲಿ ವಿಕೆಟ್‌ಕೀಪರ್ ನಸೀಮ್ ಖುಷಿ ಅವರನ್ನು 6 ರನ್‌ಗಳಿಗೆ ಪೆವಿಲಿಯನ್‌ಗೆ ಕಳಿಸಿದರು.

T20 World Cup 2024 Namibia s Ruben Trumpelmann Sets New T20 Record Match Against Oman

ಪಂದ್ಯದ ಮೂರನೇ ಓವರ್‌ನಲ್ಲಿ ರೂಬೆನ್ ಟ್ರಂಪೆಲ್‌ಮನ್‌ ಅವರ ಮಾರಕ ಬೌಲಿಂಗ್ ದಾಳಿಯ ನಂತರ ಒಮನ್ 3 ವಿಕೆಟ್‌ಗೆ 10 ರನ್ ಗಳಿಸಿತು.

ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಕೆಳ ಕ್ರಮಾಂಕದ ಕಲೀಮುಲ್ಲಾ ಅವರ ವಿಕೆಟ್ ಪಡೆಯುವ ಮೂಲಕ ಟ್ರಂಪೆಲ್‌ಮನ್ ಸೋಮವಾರ ತಮ್ಮ ವಿಕೆಟ್‌ಗಳ ಖಾತೆಗೆ ನಾಲ್ಕನೇ ವಿಕೆಟ್ ಸೇರಿಸಿದರು.

ರೂಬೆನ್ ಟ್ರಂಪೆಲ್‌ಮನ್ 21 ರನ್‌ಗಳಿಗೆ 4 ವಿಕೆಟ್‌ಗಳೊಂದಿಗೆ ಮುಗಿಸಿದರು. ಟಿ20 ಕ್ರಿಕೆಟ್‌ನ ಅವರ ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶ ದಾಖಲಿಸಿದರು. ಅಂತಿಮವಾಗಿ ಒಮನ್ ತಂಡ 19.4 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಯಿತು.

110 ರನ್‌ಗಳ ಸಾಧಾರಣ ಗುರಿ ಪಡೆದ ಹೊರತಾಗಿಯೂ ನಮೀಬಿಯಾ ತಂಡ ಒಮನ್ ತಂಡದ ಬೌಲರ್‌ಗಳು ಬಿಗಿ ಬೌಲಿಂಗ್ ಪ್ರದರ್ಶನ ನೀಡಿದ ಪರಿಣಾಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 109 ರನ್ ಗಳಿಸಿ ಟೈ ಮಾಡಿಕೊಂಡಿತು.

ನಂತರ ನಡೆದ ರೋಚಕ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ತಂಡ ಒಂದು ಓವರ್‌ನಲ್ಲಿ 21 ರನ್ ಬಾರಿಸಿತು. ಆ ಬಳಿಕ 22 ರನ್‌ಗಳ ಗೆಲುವಿನ ಗುರಿ ಪಡೆದ ಒಮನ್ ತಂಡ ಕೇವಲ 10 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

Story first published: Monday, June 3, 2024, 11:56 [IST]
Other articles published on Jun 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+