T20 World Cup 2024: ಚಾಂಪಿಯನ್ ಟೀಮ್ ಇಂಡಿಯಾ ಆಟಗಾರರಿಗೆ ವೀಡಿಯೊ ಕಾಲ್ ಮೂಲಕ ಪ್ರದಾನಿ ಮೋದಿ ಅಭಿನಂದನೆ
ಜೂನ್ 30 ಭಾನುವಾರ, ಬಾರ್ಬಡೋಸ್‌ನಲ್ಲಿ ಭಾರತ ತಂಡವು 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸುವ ಮೂಲಕ ಎರಡನೇ ಬಾರಿಗೆ ಚುಟುಕು ಕ್ರಿಕೆಟ್‌ನಲ್ಲಿ ಚಾಂಪಿಯನ್ ಆಗಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಶನಿವಾರ ನಡೆದ ರೋಚಕ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ವಿರಾಟ್ ಕೊಹ್ಲಿ ಈ ಗೆಲುವಿನ ಹೀರೋ ಆಗಿದ್ದಾರೆ.

ಫೈನಲ್‌ನಲ್ಲಿ ಟೀಮ್ ಇಂಡಿಯಾ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ, 59 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಕೊಹ್ಲಿ 76 ರನ್‌ಗಳ ಇನಿಂಗ್ಸ್ ಆಡಿದರು. ಈ ನಡುವೆ ಅಕ್ಸರ್ ಪಟೇಲ್ ನೊಂದಿಗೆ ಜೊತೆಗೂಡಿ ಕೊಹ್ಲಿ 72 ರನ್‌ಗಳ ಜೊತೆಯಾಟವಾಡಿದರು.
ಇದಾದ ಬಳಿಕ ಭಾರತ ಗೆಲುವಿನ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿ ಆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2024ರ ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾವನ್ನು ಅಭಿನಂದಿಸುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈಗ ನರೇಂದ್ರ ಮೋದಿ ಅವರ ಎಕ್ಸ್ (ಟ್ವೀಟರ್)ನಲ್ಲಿ ಮತ್ತೊಂದು ಪೋಸ್ಟ್ ಕಾಣಿಸಿಕೊಂಡಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ವೀಡಿಯೊ ಕರೆ ಮೂಲಕ ಮಾತನಾಡಿದ್ದಾರೆ. ಟ್ರೋಫಿಯನ್ನು ಗೆದ್ದ ಎಲ್ಲಾ ಟೀಮ್ ಇಂಡಿಯಾ ಆಟಗಾರರಿಗೂ ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ.
ರೋಹಿತ್ ಶರ್ಮಾ ಅವರೊಂದಿಗೆಮಾತನಾಡುವಾಗ ಪ್ರಧಾನಿ ಮೋದಿ, 'ನೀವು ಇತರರಿಗೆ ಮತ್ತು ಮುಂದಿನ ಪೀಳಿಗೆಗೆ ಉದಾಹರಣೆಯಾಗಿದ್ದೀರಿ. ನಿಮ್ಮ ಆಕ್ರಮಣಕಾರಿ ಮನಸ್ಥಿತಿ, ಬ್ಯಾಟಿಂಗ್ ಮತ್ತು ನಾಯಕತ್ವ ಭಾರತ ತಂಡಕ್ಕೆ ಹೊಸ ಆಯಾಮವನ್ನು ನೀಡಿದೆ. ನಿಮ್ಮ ಟಿ20 ವೃತ್ತಿಜೀವನ ಸದಾ ನೆನಪಿನಲ್ಲಿ ಉಳಿಯುತ್ತದೆ. ಇಂದು ಬೆಳಿಗ್ಗೆ ನಿಮ್ಮೊಂದಿಗೆ ಮಾತನಾಡಲು ಸಂತೋಷವಾಯಿತು ಎಂದಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯೊಂದಿಗೆ ಮಾತನಾಡುವಾಗ ಮೋದಿ ಅವರು, ಕೊಹ್ಲಿಯನ್ನು ಅತ್ಯುತ್ತಮ ಪ್ರಧಾನಿ ಎಂದು ಕರೆದರು. 'ನಿಮ್ಮೊಂದಿಗೆ ಮಾತನಾಡಲು ಸಂತೋಷವಾಯಿತು. ಫೈನಲ್ ಇನ್ನಿಂಗ್ಸ್‌ನಲ್ಲಿ ನೀವು ಭಾರತ ಪರ ಬ್ಯಾಟಿಂಗ್ ಅನ್ನು ಅದ್ಭುತವಾಗಿ ನಿಭಾಯಿಸಿದ್ದೀರಿ.
ಎಲ್ಲಾ ಮಾದರಿಯ ಆಟದಲ್ಲೂ ಮಿಂಚಿದ್ದೀರಿ. ಟಿ20 ಕ್ರಿಕೆಟ್ ನಿಮ್ಮನ್ನು ಕಳೆದುಕೊಳ್ಳುತ್ತದೆ. ಆದರೆ ನೀವು ಹೊಸ ಪೀಳಿಗೆಯ ಆಟಗಾರರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ ಎಂದು ಕೊಹ್ಲಿ ಅವರನ್ನು ಮೋದಿ ಗುಣಗಾನ ಮಾಡಿದರು.
ಇದಾದ ನಂತರ ರಾಹುಲ್ ದ್ರಾವಿಡ್ ಅವರೊಂದಿಗೆ ಮಾತನಾಡಿದ ಮೋದಿಯವರು, ವಾಲ್ ಆಫ್ ಇಂಡಿಯನ್ ಕ್ರಿಕೆಟ್ ಅವರ ಕೋಚಿಂಗ್ ಅವಧಿಯನ್ನು ಶ್ಲಾಘಿಸಿದರು. 'ರಾಹುಲ್ ದ್ರಾವಿಡ್ ಅವರ ಅದ್ಭುತ ತರಬೇತಿ ಪ್ರಯಾಣವು ಭಾರತೀಯ ಕ್ರಿಕೆಟ್‌ನ ಯಶಸ್ಸನ್ನು ರೂಪಿಸಿದೆ.
ಅವರ ಅಚಲವಾದ ಸಮರ್ಪಣೆ, ಕಾರ್ಯತಂತ್ರದ ಒಳನೋಟ ಮತ್ತು ಸರಿಯಾದ ಪ್ರತಿಭೆಯನ್ನು ಪೋಷಿಸುವುದು ತಂಡವನ್ನು ಪರಿವರ್ತಿಸಿದೆ. ದ್ರಾವಿಡ್ ಅವರ ಕೊಡುಗೆ ಮತ್ತು ಸ್ಪೂರ್ತಿದಾಯಕ ಪೀಳಿಗೆಗೆ ಭಾರತ ಅವರಿಗೆ ಕೃತಜ್ಞವಾಗಿದೆ. ಅವರು ವಿಶ್ವಕಪ್ ಎತ್ತಿ ಹಿಡಿದಿದ್ದು ನಮಗೆ ಖುಷಿ ತಂದಿದೆ. ಅವರನ್ನು ಅಭಿನಂದಿಸಲು ಸಂತೋಷವಾಗಿದೆ ಎಂದು ಮೋದಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications