Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟಿ20 ವಿಶ್ವಕಪ್‌ 2024: ಅರ್ಹತೆ ಸಂಪಾದಿಸಿದ ನೇಪಾಳ ಹಾಗೂ ಒಮಾನ್

ಮುಂದಿನ ವರ್ಷ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯಾಗಲಿದ್ದು ಈ ವಿಶ್ವಕಪ್‌ಗೆ ನೇಪಾಳ ಹಾಗೂ ಒಮಾನ್ ತಂಡಗಳು ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ. ಏಷ್ಯಾ ಭಾಗದ ಅರ್ಹತಾಸುತ್ತಿನ ಸ್ಪರ್ಧೆಯಲ್ಲಿ ನೇಪಾಳ ಹಾಗೂ ಒಮಾನ್ ತಂಡಗಳು ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮುಂದಿನ ವರ್ಷದ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ.

ಒಮಾನ್ ತಂಡ ಹತ್ತು ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಬಹ್ರೇನ್ ಅನ್ನು ಸೋಲಿಸಿದೆ. ಮತ್ತೊಂದೆಡೆ ನೇಪಾಳವು ಯುಎಇಯನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಈ ಎರಡು ತಮಡಗಳು ಅರ್ಹತಾ ಸುತ್ತಿನಲ್ಲಿ ಫೈನಲ್‌ಗೆ ಪ್ರವೇಶಿಸುವುದರ ಜೊತೆಗೆ ವಿಶ್ವಕಪ್‌ಗೆ ಅರ್ಹತೆ ಸಂಪಾದಿಸಿದೆ.

T20 World Cup 2024: Nepal and Oman qualify for t20 world cup

ಒಮಾನ್‌ನ ಅಕಿಬ್ ಇಲ್ಯಾಸ್ ಕೇವಲ ಹತ್ತು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರ ಭರ್ಜರಿ ಪ್ರದರ್ಶನದಿಂದಾಗಿ ಬಹ್ರೇನ್ ತಂಡವನ್ನು ಒಟ್ಟು 9 ವಿಕೆಟ್‌ಗೆ 106 ರನ್‌ಗಳಿಗೆ ಕಟ್ಟಿ ಹಾಕಲು ಸಾಧ್ಯವಾಯಿತು. ಇದನ್ನು ಬೆನ್ನಟ್ಟಿದ ಒಮಾನ್ ಪರವಾಗಿ ಆರಂಭಿಕರಾದ ಕಶ್ಯಪ್ ಪ್ರಜಾಪತಿ ಮತ್ತು ಪ್ರತೀಕ್ ಅಠವಲೆ ಆರು ಓವರ್‌ಗಳಲ್ಲಿ ಗುರಿಯನ್ನು ಆರಾಮವಾಗಿ ಬೆನ್ನಟ್ಟಿದರು.

ಮತ್ತೊಂದೆಡೆ ನೇಪಾಳದ ಪಂದ್ಯದಲ್ಲಿ ಸ್ಪಿನ್ನರ್‌ಗಳಾದ ಕುಶಾಲ್ ಮಲ್ಲ ಮತ್ತು ಸಂದೀಪ್ ಲಮಿಚಾನೆ ಎಕನಾಮಿಕಲ್ ಸ್ಪೆಲ್‌ಗಳನ್ನು ಎಸೆದರು. ಹೀಗಾಗಿ ಯುಎಇಯನ್ನು ತಂಡವಚನ್ನು 9 ವಿಕೆಟ್‌ಗೆ 134 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ವೃತ್ಯ ಅರವಿಂದ್ ಅರ್ಧಶತಕವನ್ನು ಸಿಡಿಸಿದರೂ ಅವರಿಗೆ ಸಹ ಆಟಗಾರರಿಂದ ಬೆಂಬಲ ದೊರೆಯಲಿಲ್ಲ. ಈ ಮೊತ್ತವನ್ನು ಬೆನ್ನಟ್ಟಿದ ನೇಪಾಳಕ್ಕೆ ಆರಂಭಿಕ ಆಟಗಾರ ಆಸಿಫ್ ಶೇಖ್ ಅಜೇಯ 63 ಇನ್ನಿಂಗ್ಸ್‌ಗಳನ್ನು ಗಳಿಸಿ ಗೆಲುವು ಖಚಿತಪಡಿಸಿದರು. ಈ ಮೂಲಕ ನೇಪಾಳ ಐತಿಹಾಸಿಕ ಸಾಧನೆ ಮಾಡಿದೆ.

ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ಆತಿಥ್ಯ ವಹಿಸಲಿರುವ 2024ರ ಟಿ20 ವಿಶ್ವಕಪ್‌ನಲ್ಲಿ ನೇಪಾಳ ಮತ್ತು ಒಮಾನ್ ತಮ್ಮ ಸ್ಥಾನವನ್ನು ಭದ್ರಪಡಿಸಿಳ್ಳುವ ಮೂಲಕ ಈವರೆಗೆ ಒಟ್ಟು 18 ತಂಡಗಳು ಈಗ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಪಂದ್ಯಾವಳಿಯ ಕೊನೆಯ ಎರಡು ಸ್ಥಾನಗಳನ್ನುಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಆಫ್ರಿಕಾ ಕ್ವಾಲಿಫೈಯರ್‌ನಲ್ಲಿ ನಿರ್ಧರಿಸಲಾಗುತ್ತದೆ.

Story first published: Friday, November 3, 2023, 16:58 [IST]
Other articles published on Nov 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+