ಜೂನ್ 15 ಶನಿವಾರ, ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್‌ದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನ ಲೀಗ್ ಹಂತದ 32ನೇ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಉಗಾಂಡಾ ಹೀನಾಯ ಪ್ರದರ್ಶನ ನೀಡಿ ಸೋತಿದೆ.
ಉಗಾಂಡಾ ನೀಡಿದ 41 ರನ್‌ಗಳ ಸುಲಭ ಗುರಿಯನ್ನು ನ್ಯೂಜಿಲೆಂಡ್ ಒಂದು ವಿಕೆಟ್ ಕಳೆದುಕೊಂಡು ಕೇವಲ 5.1 ಓವರ್‌ಗಳನ್ನು ಗೆದ್ದು ಬೀಗಿದೆ. ಭರ್ಜರಿ ಗೆಲುವು ದಾಖಲಿಸಿದರೂ ಕೇನ್ಸ್ ವಿಲಿಯಮ್ಸನ್ ಪಡೆ ಸೋತ ಉಂಗಾಡಾ ಜೊತೆಗೆ ಸೂಪರ್-8 ಸುತ್ತಿನಿಂದ ದೂರ ಉಳಿದಿದೆ.

ಕೇನ್ಸ್ ವಿಲಿಯಮ್ಸನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿತ್ತು. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಉಂಗಾಡಾ ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿತು.
ಉಂಗಾಡಾ ಪರ ಕೆನ್ನೆತ್ ವೈಸ್ವಾ (11) ಎರಡಂಕಿ ರನ್ ಮಾತ್ರ ಗಳಿಸಿದ್ದು, ಬಿಟ್ಟರೆ ಯಾವುದೇ ಬ್ಯಾಟರ್‌ಗಳಿಂದ ರನ್ ಹೊಡೆಯಲು ಸಾಧ್ಯವಾಗಲಿಲ್ಲ. ಪರಿಣಾಮ ಉಂಗಾಡಾ 18.4 ಓವರ್‌ಗಳಲ್ಲಿ ಕೇವಲ 40 ರನ್‌ಗಳಿಗೆ ಆಲೌಟ್ ಆಯಿತು.
ನ್ಯೂಜಿಲೆಂಡ್ ವಿರುದ್ಧ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದು ಮಿಂಚಿದರೆ, ರಚಿನ್ ರವೀಂದ್ರ ಮತ್ತು ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಕಬಳಿಸಿದರು. ಲಾಕಿ ಫರ್ಗುಸನ್ ಒಂದು ವಿಕೆಟ್ ಪೆಡೆದರು.
ನ್ಯೂಜಿಲೆಂಡ್ ತಂಡವು ಉಂಗಾಡ ನೀಡಿದ 41 ರನ್‌ಗಳ ಗುರಿಯನ್ನು ಕೇವಲ 5.1 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು. ಫಿನ್ ಅಲೆನ್ 9 ರನ್‌ಗೆ ಔಟ್ ಆದರೆ, ಡೆವೊನ್ ಕಾನ್ವೇ (22) ಮತ್ತು ರಚಿನ್ ರವೀಂದ್ರ (1) ಗೆಲುವು ತಂದುಕೊಟ್ಟರು.
ಉಂಗಾಡಾ ಪರ ರಿಯಾಜತ್ ಅಲಿ ಶಾ ಒಂದು ವಿಕೆಟ್ ಪಡೆದರು.
ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ (ವಿ.ಕೀ), ಫಿನ್ ಅಲೆನ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್.
ಉಂಗಾಡಾ ತಂಡ: ರೋನಕ್ ಪಟೇಲ್, ಸೈಮನ್ ಸ್ಸೆಸಾಜಿ, ರಾಬಿನ್ಸನ್ ಒಬುಯಾ, ರಿಯಾಝತ್ ಅಲಿ ಶಾ, ಅಲ್ಪೇಶ್ ರಾಮ್ಜಾನಿ, ದಿನೇಶ್ ನಕ್ರಾಣಿ, ಕೆನ್ನೆತ್ ವೈಸ್ವಾ, ಬ್ರಿಯಾನ್ ಮಸಾಬಾ (ನಾಯಕ), ಫ್ರೆಡ್ ಅಚೆಲಮ್ (ವಿ.ಕೀ), ಜುಮಾ ಮಿಯಾಗಿ, ಕಾಸ್ಮಾಸ್ ಕ್ಯೆವುಟಾ.