For Quick Alerts
ALLOW NOTIFICATIONS  
For Daily Alerts
 

T20 World Cup 2024: ಪಾಕಿಸ್ತಾನದ ಈ 5 ಆಟಗಾರರಿಂದ ರೋಹಿತ್‌ ಪಡೆಗೆ ಕಾಟ ತಪ್ಪಿದಲ್ಲ!

ಜೂನ್‌ 8 ಶನಿವಾರ, ಐಸಿಸಿ ಟಿ20 ವಿಶ್ವಕಪ್ 2024ರ ಲೀಗ್ ಹಂತದ 19ನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ.

ಈ ಪಂದ್ಯದ ಮೊದಲು ಪಾಕಿಸ್ತಾನ ತಂಡದ 5 ಆಟಗಾರರ ಬಗ್ಗೆ ತಿಳಿದುಕೊಳ್ಳಲೇಬೇಕು. ಇವರು ರೋಹಿತ್ ಶರ್ಮಾ ಪಡೆಗೆ ಬೆದರಿಕೆಯೊಡ್ಡಬಹುದು. ಕಳೆದ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಈ ಆಟಗಾರರಿಂದ ಅದ್ಭುತ ಪ್ರದರ್ಶನದಿಂದ ಟೀಮ್‌ ಇಂಡಿಯಾ ಸಂಕಷ್ಟ ಎದುರಿಸಿದೆ.

T20 World Cup 2024 Pakistan 5 players will Trouble for India

ಮೊಹಮ್ಮದ್ ಅಮೀರ್ : ಪಾಕಿಸ್ತಾನದ ಎಡಗೈ ವೇಗದ ಬೌಲರ್ ಮೊಹಮ್ಮದ್ ಅಮೀರ್ ಟೀಮ್‌ ಇಂಡಿಯಾ ಬ್ಯಾಟರ್‌ಗಳಿಗೆ ಸಾಕಷ್ಡು ಕಾಡಿದ್ದಾರೆ. ಭಾರತದ ವಿರುದ್ಧ ಅವರ ದಾಖಲೆಗಳು ಅತ್ಯುತ್ತಮವಾಗಿವೆ.

ಟೀಮ್‌ ಇಂಡಿಯಾ ವಿರುದ್ಧದ 2 ಟಿ20 ಪಂದ್ಯಗಳಲ್ಲಿ ಅಮೀರ್ ಒಟ್ಟು 4 ವಿಕೆಟ್ ಪಡೆದಿದ್ದಾರೆ. ಈಗ ಭಾರತದ ಅಗ್ರ ಕ್ರಮಾಂಕವು ಅಮೀರ್‌ ಬೌಲಿಂಗ್‌ನಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ.

T20 World Cup 2024 Pakistan 5 players will Trouble for India

ಶಾಹೀನ್ ಶಾ ಅಫ್ರಿದಿ : ಪಾಕಿಸ್ತಾನದ ಮತ್ತೋರ್ವ ಎಡಗೈ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ತಮ್ಮ ಚಾಣಾಕ್ಷತನದಿಂದ ಟೀಮ್‌ ಇಂಡಿಯಾ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ್ದಾರೆ.

ಇದೀಗ ಮತ್ತೊಮ್ಮೆ ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್ ಮತ್ತು ರೋಹಿತ್ ಶರ್ಮಾ ಅಬ್ಬರಕ್ಕೆ ತಮ್ಮ ಸ್ವಿಂಗ್‌ ಬೌಲಿಂಗ್ ಮೂಲಕ ಕಡಿವಾಣ ಹಾಕುವ ಅವಕಾಶ ಸಿಕ್ಕಿದೆ. ಭಾರತದ ವಿರುದ್ಧ 2 ಪಂದ್ಯಗಳಲ್ಲಿ ಶಾಹೀನ್ 3 ವಿಕೆಟ್ ಪಡೆದಿದ್ದಾರೆ.

T20 World Cup 2024 Pakistan 5 players will Trouble for India

ಬಾಬರ್ ಅಜಮ್ : ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಮ್‌ ಅವರ ವಿಕೆಟ್‌ ಪಡೆಯುವುದು ಭಾರತದ ಬೌಲರ್‌ಗಳಿಗೆ ಸವಾಲಾಗಬಹುದು. ಟಿ20 ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಬಾಬರ್ ಅವರ ದಾಖಲೆ ಉತ್ತಮವಾಗಿದೆ.

ಬಾಬರ್ 4 ಪಂದ್ಯಗಳಲ್ಲಿ 1 ಅರ್ಧಶತಕದೊಂದಿಗೆ 92 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ 68* ಆಗಿದೆ. ಇದರೊಂದಿಗೆ ನಾಯಕತ್ವದಲ್ಲಿ ರೋಹಿತ್ ಶರ್ಮಾ ಅವರಿಗಿಂತ ಉತ್ತಮವಾಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಬಾಬರ್ ಸಜ್ಜಾಗಿದ್ದಾರೆ.

T20 World Cup 2024 Pakistan 5 players will Trouble for India

ಮೊಹಮ್ಮದ್ ರಿಜ್ವಾನ್ : ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟರ್‌ ಮೊಹಮ್ಮದ್ ರಿಜ್ವಾನ್ ಹೆಸರುವಾಸಿಯಾಗಿದ್ದಾರೆ. ಟಿ20 ಪಂದ್ಯಗಳಲ್ಲಿ ಭಾರತದ ವಿರುದ್ಧ ಬಿರುಸಿನ ರೀತಿಯಲ್ಲಿ ಬ್ಯಾಟಿಂಗ್‌ ‌ಯಿಂದ ಅತಿಹೆಚ್ಚು ರನ್ ಗಳಿಸಿರುವುದನ್ನು ಕಾಣಬಹುದು.

ಟೀಮ್‌ ಇಂಡಿಯಾ ವಿರುದ್ಧ ಆಡಿರುವ 4 ಪಂದ್ಯಗಳಲ್ಲಿ 2 ಅರ್ಧಶತಕಗಳ ನೆರವಿನಿಂದ 197 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಉತ್ತಮ ಸ್ಕೋರ್ ಔಟಾಗದೆ 79* ರನ್‌ ಹೊಡೆದಿದ್ದಾರೆ.

T20 World Cup 2024 Pakistan 5 players will Trouble for India

ಶಾದಾಬ್ ಖಾನ್ : ಪಾಕಿಸ್ತಾನದ ಲೆಗ್ ಸ್ಪಿನ್ನರ್ ಶಾದಾಬ್‌ ಖಾನ್‌ ಭಾರತ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 4 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ.

ಈ ಅವಧಿಯಲ್ಲಿ 31 ರನ್‌ಗಳಿಗೆ 2 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಶಾದಾಬ್ ಬ್ಯಾಟಿಂಗ್‌ ಮೂಲಕವೂ ಭಾರತ ತಂಡಕ್ಕೆ ಅಪಾಯಕಾರಿ ಆಗಲಿರುವುದು ಸುಳ್ಳಲ್ಲ. ಭಾರತದ ವಿರುದ್ಧ 15 ರನ್ ಗಳಿಸಿದ್ದಾರೆ.

Story first published: Saturday, June 8, 2024, 19:12 [IST]
Other articles published on Jun 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+