For Quick Alerts
ALLOW NOTIFICATIONS  
For Daily Alerts
 

T20 World Cup 2024: ಮೈದಾನದಲ್ಲೇ ಪಾಕಿಸ್ತಾನ ಕ್ರಿಕೆಟಿಗ ಅಜಮ್‌ ಖಾನ್ ಅಭಿಮಾನಿಗಳ ಮೇಲೆ ಕೆಂಡಾಮಂಡಲ!

ಜೂನ್‌ 7 ಶುಕ್ರವಾರ, 2024ರ ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ ಗುರುವಾರ ಬಲಿಷ್ಠ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಅಮೇರಿಕಾ ಭರ್ಜರಿ ಜಯ ದಾಖಲಿಸಿದೆ. ಪಾಕಿಸ್ತಾನ ಆಟಗಾರರ ಅಸ್ಥಿರ ಪ್ರದರ್ಶನದಿಂದ ತಂಡ ಹೀನಾಯ ಸೋಲು ಕಂಡಿದೆ.

ಈ ಪಂದ್ಯದಲ್ಲಿ ಪಾಕಿಸ್ತಾನದ ವಿಕೆಟ್‌ ಕೀಪರ್‌ ಮತ್ತು ಬ್ಯಾಟರ್‌ ಅಜಮ್‌ ಖಾನ್‌ ಶೂನ್ಯಕ್ಕೆ ಔಟ್‌ ಆದರು. ಇದರಿಂದಾಗಿ ಮೈದಾನದಲ್ಲಿ ಅವಂತಾರ ಸೃಷ್ಟಿ ಆಗಿದೆ. ಇತ್ತೀಚೆಗೆ ಅಜಮ್‌ ಖಾನ್‌ ತಮ್ಮ ಬ್ಯಾಟಿಂಗ್‌ ಹಾಗು ಫಿಟ್‌ನೆಸ್‌ನಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

T20 World Cup 2024 Pakistan cricketer Azam Khan outrage against fans

ಮೈದಾನದಲ್ಲಿ ಅಜಮ್‌ ಖಾನ್‌ ಅವರನ್ನು ಅಭಿಮಾನಿಗಳು ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್‌ ಮಾಡುತ್ತಿದ್ದಾರೆ. ಗುರುವಾರ ಕೂಡ ಯುಎಸ್‌ಎ ವಿರುದ್ಧ ಗೋಲ್ಡನ್‌ ಡಕ್‌ ಔಟ್‌ ಆಗಿ ಪೆವಿಲಿಯನ್‌ ಕಡೆ ಹೋಗುವಾಗ ಮಾರ್ಗ ಮಧ್ಯೆ ಅಜಮ್‌ ಖಾನ್‌ ಅಭಿಮಾನಿಗಳ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಜಮ್‌ ಖಾನ್‌ ಜೊತೆ ಅಭಿಮಾನಿ ಅನುಚಿತವಾಗಿ ವರ್ತಸಿರುವುದು ತಪ್ಪು ಎಂದು ನೆಟಿಗರು ಪ್ರತಿಕ್ರಿಯಿಸಿದ್ದಾರೆ. ಬ್ಯಾಟಿಂಗ್‌ ಮಾಡಲು ಮೈದಾನಕ್ಕೆ ಬಂದ ತಕ್ಷಣ ಕೂಡ ಅಭಿಮಾನಿಯೊಬ್ಬ ಕೊಬ್ಬಿದ ಆನೆ ಎಂದು ಕೂಗಿದ್ದನು. ಇದಾದ ನಂತರ ಔಟ್‌ ಆಗಿ ವಾಪಾಸ್ಸಾಗುವಾಗ ಅಜಮ್‌ ಖಾನ್‌ ಅವರನ್ನು ಅಭಿಮಾನಿಗಳು ಹೀಯಾಳಿಸಿದ್ದಾರೆ.

ಇದರಿಂದ ರೊಚ್ಚಿಗೆದ್ದ ಅಜಮ್‌ ಖಾನ್‌ ಆತನೊಂದಿಗೆ ಜಗಳವಾಡಿದ್ದಾನೆ. ಆದರೆ ಅಭಿಮಾನಿ ಪಾಕ್‌ ಕ್ರಿಕೆಟ್‌ನಿಗೆ ಏನು ಹೇಳಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೂ ಅಜಮ್‌ ಖಾನ್‌ ಫಿಟ್‌ನೆಸ್‌ ಬಗ್ಗೆ ಕೆಣಕಿರುತ್ತಾರೆ ಎನ್ನಲಾಗಿದೆ. ಅಜಮ್‌ ಖಾನ್‌ ಕೋಪಗೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿವೆ.

ಮತ್ತೊಂದೆಡೆ ಹಲವು ಅಭಿಮಾನಿಗಳು ಟೆಕ್ಸಾಸ್‌ನ ಗ್ರ್ಯಾಂಡ್‌ ಪ್ರೈರೀ ಸ್ಟೇಡಿಯಂಗೆ ಅಜಮ್‌ ಖಾನ್‌ ಅವರ ಪೋಸ್ಟ್‌ಗಳನ್ನು ಹಿಡಿದು ಬಂದಿದ್ದರು, ಅದರಲ್ಲಿ ಅಜಮ್‌ ಖಾನ್‌ ತಿನ್ನುವುದನ್ನು ಸಿಲ್ಲಿಸು ಎಂದು ಬರೆದಿರುವ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 7 ವಿಕೆಟ್‌ಗೆ 159 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಅಮೆರಿಕ ತಂಡ 3 ವಿಕೆಟ್‌ಗೆ 159 ರನ್ ಕಲೆ ಹಾಕಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಹೀಗಾಗಿ ಸೂಪರ್ ಓವರ್‌ನಲ್ಲಿ ಅಬ್ಬರಿಸಿದ ಅಮೆರಿಕ 18 ರನ್ ನೀಡಿತ್ತು. ಇತ್ತ ಪಾಕಿಸ್ತಾನ ಕೇವಲ 13 ರನ್ ಹೊಡೆದು ಗುರಿ ತಲುಪಲು ಸಾಧ್ಯವಾಗದೆ ಪಂದ್ಯ ಕೈ ಚೆಲ್ಲಿತ್ತು.

Story first published: Friday, June 7, 2024, 17:10 [IST]
Other articles published on Jun 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+