IND vs AFG: ಬಿಸಿಸಿಐಗೆ ಟೆಕ್ಷನ್ ತಂದ ರೋಹಿತ್, ಕೊಹ್ಲಿ ಫಾರ್ಮ್ ಸಮಸ್ಯೆ!
ಜೂನ್ 21 ಶುಕ್ರವಾರ, 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್- 8ರ ಭಾರತ ತಂಡವು ಅಫ್ಘಾನಿಸ್ತಾನವನ್ನು ಸೋಲಿಸಿದೆ. ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯ ನಡೆಯಿತು.
ಈ ಪಂದ್ಯದಲ್ಲಿ ಮತ್ತೊಮ್ಮೆ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಇನ್ನೊಂದೆಡೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಈ ಜೋಡಿಯ ಫಾರ್ಮ್ ಟೆಕ್ಷನ್ ತಂದಿದೆ.

ಅಫ್ಘಾನಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ರೋಹಿತ್ ಮತ್ತು ಕೊಹ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್ ಅನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಜೋಡಿ ಕಡಿಮೆ ರನ್‌ಗಳಿಗೆ ವಿಕೆಟ್ ಕಳೆದುಕೊಂಡು ಪೆವಿಲಿಯನ್‌ಗೆ ಮರಳಿದರು. ಇದು ಇಬ್ಬರು ಬ್ಯಾಟರ್‌ಗಳು ಫಾರ್ಮ್ ಸಮಸ್ಯೆಯನ್ನು ಎದುರಿಸುತ್ತಿರುಬುದನ್ನು ಬಹಿರಂಗಪಡಿಸಿದೆ.
ನಾಯಕ ರೋಹಿತ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆ ನಂತರ ಅವರಿಂದ ದೊಡ್ಡ ಸ್ಕೋರ್ ನಿರೀಕ್ಷಿಸಲಾಗಿತ್ತು. ಆದರೆ ರೋಹಿತ್ ಕೇವಲ 8 ರನ್ ಗಳಿಸಿ ಔಟ್ ಆದರು. ಅದೇ ವೇಳೆ, ವಿರಾಟ್ ಕೊಹ್ಲಿ (24) ಕೂಡ ವೆಸ್ಟ್ ಇಂಡೀಸ್ ಪಿಚ್‌ನಲ್ಲೂ ಫ್ಲಾಪ್ ಆದರು.
ರೋಹಿತ್ ಶರ್ಮಾ ಯಾವುದೇ ಫಾರ್ಮ್ಯಾಟ್‌ನಲ್ಲಿಯಾದರು ಎಡಗೈ ವೇಗದ ಬೌಲರ್‌ಗಳ ವಿರುದ್ಧ ಕಡಿಮೆ ರನ್ ಗಳಿಸಿದ್ದಾರೆ. ಎಡಗೈ ವೇಗಿಗಳ ಒಳಬರುವ ಎಸೆತಗಳನ್ನು ರೋಹಿತ್ ಎದುರಿಸುವಲ್ಲಿ ವಿಫಲವಾಗಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ರೋಹಿತ್ 19 ಇನ್ನಿಂಗ್ಸ್‌ಗಳಲ್ಲಿ ಎಡಗೈ ವೇಗಿಗಳ ವಿರುದ್ಧ 8 ಬಾರಿ ಔಟ್ ಆಗಿದ್ದಾರೆ. ಕಳೆದ ಪಂದ್ಯದಲ್ಲೂ ಅಫ್ಘಾನಿಸ್ತಾನದ ಎಡಗೈ ವೇಗಿ ಫಜಲ್ಹಕ್ ಫಾರೂಕಿ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ನ್ಯೂಯಾರ್ಕ್ ಪಿಚ್‌ಗಳ ನಂತರ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್‌ನಲ್ಲಿ ವಿಫಲರಾಗಿದ್ದಾರೆ. ಅನುಭವಿ ರಶೀದ್ ಖಾನ್ ಅವರು 24 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಜೂನ್ 24 ರಂದು ಫಾರ್ಮ್‌ಗೆ ಮರಳುವುದು ಮುಖ್ಯ
ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆದ್ದು ಮೇಲುಗೈ ಸಾಧಿಸಿದೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ದೊಡ್ಡ ಶತ್ರು ಎಂಬುದನ್ನು ಮರೆಯುವಂತಿಲ್ಲ. ಹೀಗಿರುವಾಗ ಜೂನ್ 24ರೊಳಗೆ ರೋಹಿತ್ ಮತ್ತು ಕೊಹ್ಲಿ ತಮ್ಮ ಹಳೆಯ ಆಟಕ್ಕೆ ಮರಳದಿದ್ದರೆ ಟೀಮ್ ಇಂಡಿಯಾಕ್ಕೆ ಸಂಕಷ್ಟಗಳು ಹೆಚ್ಚಾಗಬಹುದು.
ಭಾರತ ಮುಂದಿನ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಜೂನ್ 22 ರಂದು ಆಡಲಿದೆ ಇದಾದ ನಂತರ ಜೂನ್ 24 ರಂದು ಆಸ್ಟ್ರೇಲಿಯಾವನ್ನು ಭಾರತ ತಂಡವು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications