Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮೊದಲು ನೆಟ್ಸ್‌ನಲ್ಲಿ ರೋಹಿತ್-ಕೊಹ್ಲಿ ಭರ್ಜರಿ ತಾಲೀಮು; ವಿಡಿಯೋ ವೈರಲ್‌!

ಜೂನ್‌ 22 ಶನಿವಾರ, ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯ ಇಂದು ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಪ್ರಕಾರ 8 ಗಂಟೆಗೆ ಆರಂಭವಾಗಲಿದೆ.

ಬಾಂಗ್ಲಾದೇಶ ತಂಡವನ್ನು ಸೋಲಿಸಲು ಟೀಮ್‌ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಆದರೆ ಟೀಮ್‌ ಇಂಡಿಯಾ ಆರಂಭಿಕ ಜೋಡಿಯ ಫಾರ್ಮ್‌ ಸಮಸ್ಯೆ ತಂಡಕ್ಕೆ ತಲೆ ನೋವಾಗಿದೆ. ಪ್ರಸುತ್ತ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನಾಯಕ ರೋಹಿತ್‌ ಶರ್ಮಾ ಮತ್ತು ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಆರಂಭಿಕರಾಗಿ ಹೆಚ್ಚು ರನ್‌ ಗಳಿಸಿಲ್ಲ.

TTeam India Rohit Sharma and Virat Kohli practice hard for the T20 World Cup 2024 Super-8 match against Bangladesh

ಹೀಗಾಗಿ ಟೀಮ್‌ ಇಂಡಿಯಾ ಈಗಾಗಲೇ ಆಡಿರುವ ಎಲ್ಲ ಟಿ20 ವಿಶ್ವಕಪ್‌ ಪಂದ್ಯಗಳಲ್ಲೂ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ಇದೀಗ ಬಾಂಗ್ಲಾ ಎದುರು ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಟಿಕೆಟ್‌ ಪಡೆಯಲು ಭಾರತ ತಂಡವು ಸಜ್ಜಾಗಿದೆ. ಇದರ ಜೊತೆಗೆ ಟೀಮ್‌ ಇಂಡಿಯಾ ಆಟಗಾರರು ನೆಟ್ಸ್‌ನಲ್ಲಿ ಭರ್ಜರಿ ತಾಲೀಮು ನಡೆಸಿದ್ದಾರೆ.

ಭಾರತ ತಂಡದ ನೆಟ್ಸ್ ಸೆಷನ್‌ನ ಫೋಟೋಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ಫೋಟೋಗಳಲ್ಲಿ ಟೀಮ್‌ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಅವರು ನೆಟ್‌ನಲ್ಲಿ ಕಠಿಣ ಅಭ್ಯಾಸ ನಡೆಸಿರುವುದು ಕಂಡು ಬಂದಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರಿಂದ ಟೀಮ್‌ ಇಂಡಿಯಾ ಹೆಚ್ಚು ರನ್ ಗಳಿಸುವ ನಿರೀಕ್ಷೆಯಲಿದೆ. ಸೂಪರ್-8ರ ಮೊದಲ ಪಂದ್ಯದಲ್ಲೂ ಈ ಇಬ್ಬರು ಬ್ಯಾಟರ್‌ಗಳು ಅಫ್ಘಾನಿಸ್ತಾನ ವಿರುದ್ಧ ವಿಶೇಷ ಪ್ರದರ್ಶನ ನೀಡಲಿಲ್ಲ. ಇದೀಗ ಬಾಂಗ್ಲಾದೇಶದ ವಿರುದ್ಧ ರೋಹಿತ್‌ ಹಾಗು ಕೊಹ್ಲಿ ಅವರಿಂದ ಭಾರತೀಯ ಅಭಿಮಾನಿಗಳು ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದಾರೆ.

ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್ 2024ರಲ್ಲಿ ಇದುವರೆಗೆ 4 ಪಂದ್ಯಗಳಲ್ಲಿ 1 ಅರ್ಧಶತಕದೊಂದಿಗೆ 76 ರನ್ ಗಳಿಸಿದ್ದಾರೆ. ಇತ್ತ ವಿರಾಟ್ ಬ್ಯಾಟ್‌ನಿಂದ 4 ಇನ್ನಿಂಗ್ಸ್‌ಗಳಲ್ಲಿ ಕೇವಲ 29 ರನ್‌ಗಳು ಬಂದಿವೆ.

ಭಾರತ vs ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್‌-11

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.

ಬಾಂಗ್ಲಾದೇಶ: ತಂಝೀದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಲಿಟ್ಟನ್ ದಾಸ್, ಶಕಿಬ್ ಅಲ್ ಹಸನ್, ತೌಹಿದ್ ಹೃದೋಯ್, ಮಹಮ್ಮದುಲ್ಲಾ, ಜಾಕರ್ ಅಲಿ, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ತಂಝೀಮ್ ಹಸನ್ ಶಕೀಬ್.

Story first published: Saturday, June 22, 2024, 14:34 [IST]
Other articles published on Jun 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+