Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA Final: ಫೈನಲ್‌ ಪಂದ್ಯದಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರೋಹಿತ್-ಅರ್ಷ‌ದೀಪ್‌

ಜೂನ್‌ 29 ಶನಿವಾರ, ಇಂದು ಐಸಿಸಿ ಟಿ20 ವಿಶ್ವಕಪ್ 2024ರ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿವೆ. ಫೈನಲ್‌ ಪಂದ್ಯವು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಆರಂಭವಾಗಿದೆ.

ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ರೋಹಿತ್‌ ಮತ್ತು ಅರ್ಷ‌ದೀಪ್‌ ಟಿ20 ವಿಶ್ವಕಪ್‌ 2024ರಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ರೋಹಿತ್ ಶರ್ಮಾ ಈ ಋತುವಿ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಹಾಗು ಅರ್ಷದೀಪ್‌ ಸಿಂಗ್ ಅವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗುವ ಅವಕಾಶವನ್ನು ಹೊಂದಿದ್ದಾರೆ.

T20 World Cup 2024 Rohit Sharma-Arshdeep Singh set to make history

ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌

ಟಿ20 ವಿಶ್ವಕಪ್ 2024ರಲ್ಲಿ ‌ಅರ್ಷ್‌ದೀಪ್ ಸಿಂಗ್ ಇದುವರೆಗೆ 7 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ . ಅಫ್ಘಾನಿಸ್ತಾನದ ಫಜಲ್ ಹಕ್ ಫಾರೂಕಿ ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಉಳಿದಿದ್ದಾರೆ.

ಫಾರೂಕಿ 8 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಹೊಂದಿದ್ದಾರೆ. ಇದೀಗ ಅರ್ಷದೀಪ್‌ ಅವರು ಫಾರೂಕಿಯನ್ನು ಹಿಂದಿಕ್ಕಿ 3 ವಿಕೆಟ್ ಪಡೆಯುವ ಮೂಲಕ ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಬಹುದು.

T20 World Cup 2024 Rohit Sharma-Arshdeep Singh set to make history

ಅತಿಹೆಚ್ಚು ರನ್‌ ಹೊಡೆದ ಬ್ಯಾಟರ್‌

ರೋಹಿತ್ ಶರ್ಮಾ 7 ಪಂದ್ಯಗಳಲ್ಲಿ 3 ಅರ್ಧ ಶತಕಗಳ ನೆರವಿನಿಂದ 248 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನದ ಬ್ಯಾಟರ್‌ ಮತ್ತು ವಿಕೆಟ್‌ ಕೀಪರ್‌ ರಹಮಾನುಲ್ಲಾ ಗುರ್ಬಾಜ್ ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಆಗಿ ಉಳಿದಿದ್ದಾರೆ.

ಗುರ್ಬಾಜ್‌ 8 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 281 ರನ್ ಗಳಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 34 ರನ್ ಗಳಿಸಿದ ನಂತರ ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಆಗಬಹುದು.

Story first published: Saturday, June 29, 2024, 19:51 [IST]
Other articles published on Jun 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+