T20 World Cup 2024: ಬಾಂಗ್ಲಾದೇಶ ವಿರುದ್ಧದ ಗೆಲುವಿನಿಂದ ರೋಹಿತ್ ಫುಲ್ ಖುಷ್; ಸಹಾ ಆಟಗಾರರನ್ನು ಹೊಗಳಿದ ಶರ್ಮಾ
ಜೂನ್ 2 ಭಾನುವಾರ, ಐಸಿಸಿ 2024ರ ಟಿ20 ವಿಶ್ವಕಪ್ ಟೂರ್ನಿಗಾಗಿ ಅಮೆರಿಕಾ ತಲುಪಿರುವ ಭಾರತ ತಂಡ ತನ್ನ ಏಕೈಕ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 60 ರನ್‌ಗಳಿಂದ ಸೋಲಿಸಿದೆ.
ಟೂರ್ನಿಗೂ ಮುನ್ನ ಭರ್ಜರಿ ಗೆಲುವ ಸಾಧಿಸಿರುವ ಟೀಮ್ ಇಂಡಿಯಾ ಲೀಗ್ ಪಂದ್ಯಗಳಲ್ಲಿ ಸಜ್ಜಾಗಿದೆ. ಜೊತೆಗೆ ಐಪಿಎಲ್ 2024ರಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಆಟಗಾರರು ಕೂಡ ಇದೀಗಾ ಟೀಮ್ ಇಂಡಿಯಾ ಗೆಲುವಿಗೆ ಕೊಡುಗೆ ನೀಡಿರುವುದು ನಾಯಕ ರೋಹಿತ್ ಶರ್ಮಾ ಮುಖದ ಸಂತಸ ತಂದಿದೆ.

ಇದರ ಬೆನ್ನಲ್ಲೆ ತಂಡದ ಆಟಗಾರರನ್ನು ರೋಹಿತ್ ಶರ್ಮಾ ಅವರು ಹೊಗಳಿದ್ದಾರೆ. ಪ್ರಮುಖವಾಗಿ ರಿಷಭ್ ಪಂತ್ ಮತ್ತು ಅರ್ಷದೀಪ್ ಸಿಂಗ್ ಅವರ ಪ್ರದರ್ಶನವನ್ನು ರೋಹಿತ್ ಶ್ಲಾಘಿಸಿದ್ದಾರೆ.
ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ 4 ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 53 ರನ್ ಗಳಿಸಿದರು. ಇನ್ನು ಬೌಲಿಂಗ್‌ನಲ್ಲಿ ಮಿಂಚಿದ ಅರ್ಷದೀಪ್ ಸಿಂಗ್ ತನ್ನ ಮಾರಕ ಬೌಲಿಂಗ್ ಪ್ರದರ್ಶನದ ಮೂಲಕ ಬಾಂಗ್ಲಾದೇಶಕ್ಕೆ ಆರಂಭಿಕ ಆಘಾತಗಳನ್ನು ನೀಡಿದರು.
ಗೆಲುವಿನ ಬಳಿಕ ಮಾತನಾಡಿದ ರೋಹಿತ್ ಶರ್ಮಾ, 'ನನಗೆ ಪಂದ್ಯ ಗೆದ್ದಿರುವುದು ತುಂಬಾ ಖುಷಿಯಾಗಿದೆ. ಪಂದ್ಯದಿಂದ ನಮಗೆ ಬೇಕಾದುದನ್ನು ನಾವು ಪಡೆದುಕೊಂಡಿದ್ದೇವೆ. ಟಾಸ್ ಸಮಯದಲ್ಲಿ ನಾನು ಹೇಳಿದಂತೆ, ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಮುಖ್ಯ.
ಹೊಸ ಸ್ಥಳ, ಹೊಸ ಮೈದಾನ, ಡ್ರಾಪ್-ಇನ್ ಪಿಚ್ ಅದನ್ನು ಬಳಸಿಕೊಳ್ಳುವುದು ಮುಖ್ಯವಾಗಿತ್ತು. ಹೀಗಾಗಿ ಇದರಲ್ಲಿ ನಾವು ತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ಹೇಳಿದ್ದಾರೆ.
ಪಂತ್ ಬ್ಯಾಟಿಂಗ್ ಬಗ್ಗೆ ಗುಣಗಾನ
ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿಲ್ಲ. ಏಕೆಂದರೆ ಕೊಹ್ಲಿ ಪಂದ್ಯದ ಹಿಂದಿನ ದಿನವಷ್ಟೇ ಅಮೆರಿಕವನ್ನು ತಲುಪಿದ್ದರು. ಆದ್ದರಿಂದ ರಿಷಭ್ ಪಂತ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು.
ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ, 'ಅವನಿಗೆ ಒಂದು ಅವಕಾಶ ನೀಡಬೇಕಿತ್ತು. ಬ್ಯಾಟಿಂಗ್ ಯೂನಿಟ್ ಹೇಗಿರುತ್ತದೆ ಎಂಬುದನ್ನು ನಾವು ನಿರ್ಧರಿಸಿಲ್ಲ.
ಬೌಲರ್‌ಗಳು ಕೂಡ ಉತ್ತಮ ಪ್ರದರ್ಶನ ನೀಡಿದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗದಲ್ಲಿ ಉತ್ತಮ ಪ್ರದರ್ಶನ ಹೊರಹೊಮ್ಮಿದ ರೀತಿಯಿಂದ ಎಲ್ಲರಿಗೂ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಅರ್ಷದೀಪ್ ಸಿಂಗ್ ಒಳ್ಳೆಯ ಪ್ರತಿಭೆ
ಅರ್ಷದೀಪ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದ ಬಗ್ಗೆ ಕೂಡ ಪ್ರತಿಕ್ರಿಯಿಸಿದ ರೋಹಿತ್, ಅವರು ಆಡಿದ ಪ್ರತಿ ಪಂದ್ಯದಲ್ಲೂ ನಮಗೆ ಪ್ರತಿಭೆ ತೋರಿದ್ದಾರೆ. ಅವರಲ್ಲಿ ತುಂಬಾ ಒಳ್ಳೆಯ ಪ್ರತಿಭೆ ಇದೆ ಎಂದರು.
ಅರ್ಷದೀಪ್ ಸಿಂಗ್ ಡೆತ್ ಬೌಲಿಂಗ್ ಬಗ್ಗೆ ಮಾತನಾಡಿದ ರೋಹಿತ್, 'ನಾವು ಡೆತ್ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಉತ್ತಮವಾಗಿ ಬೌಲಿಂಗ್‌ನಲ್ಲಿ ಮಾಡುವುದನ್ನು ಇಂದು ನೋಡಿದ್ದೇವೆ. ಅವರು ಚೆನ್ನಾಗಿ ಬೌಲ್ ಮಾಡಿದರು. ಎರಡು ರೀತಿಯಲ್ಲೂ ಅರ್ಷದೀಪ್ ಸಿಂಗ್ ಸ್ವಿಂಗ್ ಮಾಡಿದರು ಎಂದು ಹೇಳಿದ್ದಾರೆ.
2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅರ್ಶ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಸಿರಾಜ್.
ಮೀಸಲು ಆಟಗಾರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications