T20 World Cup 2024: ಆಸ್ಟ್ರೇಲಿಯಾ ವಿರುದ್ಧ ಸೋತ ಸ್ಕಾಟ್ಲೆಂಡ್; ಸೂಪರ್ 8ಕ್ಕೆ ಅರ್ಹತೆ ಪಡೆದ ಇಂಗ್ಲೆಂಡ್
ಭಾನುವಾರ, ಜೂನ್ 16ರಂದು ಸೇಂಟ್ ಲೂಸಿಯಾದಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಮೂಲಕ ರಿಚಿ ಬೆರಿಂಗ್ಟನ್ ನಾಯಕತ್ವದ ಸ್ಕಾಟ್ಲೆಂಡ್ ತಂಡವು ಸೂಪರ್ 8ರ ಹಂತದ ರೇಸ್‌ನಿಂದ ಹೊರಬಿದ್ದಿತು. ಇದೇ ವೇಳೆ ಆಸ್ಟ್ರೇಲಿಯಾ ತಂಡವು ತಮ್ಮ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ತಂಡ ಸೂಪರ್ 8ರ ಹಂತಕ್ಕೆ ಪ್ರವೇಶಿಸಲು ಸಹಾಯ ಮಾಡಿತು.

ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ತಲಾ 5 ಅಂಕಗಳೊಂದಿಗೆ ಡಿ ಗುಂಪಿನಲ್ಲಿ ತಮ್ಮ ಅಭಿಯಾನ ಮುಗಿಸಿದವು. ಆದರೆ, ನೆಟ್ ರನ್ ರೇಟ್ ಆಧಾರದ ಮೇಲೆ ಇಂಗ್ಲೆಂಡ್ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಇದಕ್ಕೂ ಮುನ್ನ ಮಳೆಯಿಂದ ಮೊಟಕುಗೊಂಡ ದಿನದ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಇಂಗ್ಲೆಂಡ್ ಡಿಎಲ್ಎಸ್ ನಿಯಮದಲ್ಲಿ 41 ರನ್‌ಗಳಿಂದ ಗೆಲುವು ಸಾಧಿಸಿತ್ತು. ಆದರೂ, ಸೂಪರ್ 8ಕ್ಕೆ ಪ್ರವೇಶಿಸಲು ಜೋಸ್ ಬಟ್ಲರ್ ನಾಯಕತ್ವದ ಆಂಗ್ಲ ತಂಡಕ್ಕೆ ಬೇಕಾಗಿದ್ದು ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡದ ಗೆಲುವು.
ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು. ನಂತರ, 181 ರನ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು. ಸೋಲುವ ಮೊದಲು ಸ್ಕಾಟ್ಲೆಂಡ್ ತಮ್ಮ ಭರವಸೆ ಜೀವಂತವಾಗಿಡಲು ಕೊನೆಯವರೆಗೂ ಹೋರಾಡಿತು.
ಸ್ಕೋರ್ ಬೋರ್ಡ್‌ನಲ್ಲಿ ಅಸಾಧಾರಣ ಮೊತ್ತವನ್ನು ಹಾಕಿದ ನಂತರ, ಸ್ಕಾಟ್ಲೆಂಡ್ ಒಂದು ಹಂತದಲ್ಲಿ 60 ರನ್‌ಗೆ 3 ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡವನ್ನು ನಿಯಂತ್ರಿಸಿತ್ತು. ಆದರೆ, ಈ ವಿಶ್ವಕಪ್‌ನಲ್ಲಿ ಆಸೀಸ್‌ನ ಅತ್ಯಂತ ಯಶಸ್ವಿ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್ 68 ರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ 59 ರನ್ ಗಳಿಸಿ ಮತ್ತೆ ತಮ್ಮ ತಂಡಕ್ಕೆ ನೆರವಾದರು.
ಆಸ್ಟ್ರೇಲಿಯದ ಚೇಸಿಂಗ್ ಕುಸಿಯುತ್ತಿರುವಂತೆ ಕಂಡುಬಂದಾಗ, ಇನ್‌ಫಾರ್ಮ್ ಟ್ರಾವಿಸ್ ಹೆಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಮ್ಮ ತಂಡವನ್ನು ಮರಳಿ ಆಟಕ್ಕೆ ತರಲು ಜೊತೆಯಾದರು.
ಇಬ್ಬರು ಅನುಭವಿ ಆಟಗಾರರು ಮೂರನೇ ವಿಕೆಟ್‌ಗೆ ಕೇವಲ 44 ಎಸೆತಗಳಲ್ಲಿ 80 ರನ್‌ಗಳ ಜೊತೆಯಾಟ ನಿರ್ಮಿಸಿ ಸ್ಕಾಟ್ಲೆಂಡ್ ತಂಡದ ಸಂಕಲ್ಪವನ್ನು ಕಠಿಣ ಪರೀಕ್ಷೆಗೆ ಒಳಪಡಿಸಿದರು.
ಟ್ರಾವಿಸ್ ಹೆಡ್ 49 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿಗಳ ಸಮೇತ 68 ರನ್ ಗಳಿಸಿದರು. ಇನ್ನು ಮಾರ್ಕಸ್ ಸ್ಟೊಯಿನಿಸ್ ಹೆಚ್ಚು ಆಕ್ರಮಣಕಾರಿಯಾಗಿ 9 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ ಕೇವಲ 29 ಎಸೆತಗಳಲ್ಲಿ 59 ರನ್ ಬಾರಿಸಿದರು.
ಇದಕ್ಕೂ ಮುನ್ನ ಸ್ಕಾಟ್ಲೆಂಡ್ ತಂಡದ ಪರ ಜಾರ್ಜ್ ಮುನ್ಸಿ 35 ರನ್, ಬ್ರಾಂಡನ್ ಮ್ಯಾಕ್‌ಮುಲ್ಲನ್ 60 ರನ್, ರಿಚಿ ಬೆರಿಂಗ್ಟನ್ 42 ರನ್ ಮ್ಯಾಥ್ಯೂ ಕ್ರಾಸ್ 18 ರನ್ ಗಳಿಸಿ 180ರ ಮೊತ್ತ ಕಲೆಹಾಕಲು ನೆರವಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications